Please enable javascript.ಬನ್ನೂರು: 74 ಲಕ್ಷ ರೂ. ಉಳಿತಾಯ ಬಜೆಟ್ - ಬನ್ನೂರು: 74 ಲಕ್ಷ ರೂ. ಉಳಿತಾಯ ಬಜೆಟ್ - Vijay Karnataka

ಬನ್ನೂರು: 74 ಲಕ್ಷ ರೂ. ಉಳಿತಾಯ ಬಜೆಟ್

ವಿಕ ಸುದ್ದಿಲೋಕ 5 Mar 2014, 4:00 am
Subscribe

ಪಟ್ಟಣ ಪುರಸಭೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ 73,54,960 ರೂ. ಉಳಿತಾಯ ಬಜೆಟ್ ಅನ್ನು ಪುರಸಭೆ ಮುಖ್ಯಾಧಿಕಾರಿ ಎಸ್.ಲೋಕೇಶ್ ಮಂಡಿಸಿದರು.

 74
ಬನ್ನೂರು: 74 ಲಕ್ಷ ರೂ. ಉಳಿತಾಯ ಬಜೆಟ್
ಬನ್ನೂರು: ಪಟ್ಟಣ ಪುರಸಭೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ 73,54,960 ರೂ. ಉಳಿತಾಯ ಬಜೆಟ್ ಅನ್ನು ಪುರಸಭೆ ಮುಖ್ಯಾಧಿಕಾರಿ ಎಸ್.ಲೋಕೇಶ್ ಮಂಡಿಸಿದರು.

ಆಡಳಿತಾಧಿಕಾರಿ ಬಸವರಾಜು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2014-2015ನೇ ಸಾಲಿನ ಮುಂಗಡ ಪತ್ರಕ್ಕೆ ಅನುಮೋದನೆ ನೀಡಲಾಯಿತು. 23,07,15,980 ರೂ. ಆದಾಯದೊಂದಿಗೆ ಹಿಂದಿನ ವರ್ಷದ ಆರಂಭಿಕ ಶಿಲ್ಕು 6,47,06,410 ರೂ. ಅನ್ನು ಸೇರಿಸಿ ಒಟ್ಟು 28,80,69,430 ರೂ.ನಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳಾದ ನೀರು ಸರಬರಾಜು, ರಸ್ತೆ, ಮಳೆ ನೀರು ಚರಂಡಿ, ಒಳ ಚರಂಡಿ ಹಾಗೂ ಘನತ್ಯಾಜ್ಯ ವಸ್ತು ನಿರ್ವಹಣೆಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ಪುರಸಭೆ ಯೋಜನಾಧಿಕಾರಿ ಆರ್.ಮಂಜುನಾಥ್, ಲೆಕ್ಕ ಪರಿಶೋಧಕ ಟಿ.ಎಸ್.ನಿತಿನ್, ಚಕ್ರವರ್ತಿ ಹಾಜರಿದ್ದರು.

ಪ್ರಮುಖಾಂಶ
-ರಾಜ್ಯ ಹಣಕಾಸು ಯೋಜನೆ ಅಭಿವೃದ್ದಿ ಅನುದಾನ 5 ಕೋಟಿ, 13ನೇ ಹಣಕಾಸು ಯೋಜನೆ ಅನುದಾನ 1,60 ಲಕ್ಷ, ಶಾಸಕರ ವಿಶೇಷ ಅನುದಾನದಡಿ 2 ಕೋಟಿ, ವೇತನಗಳ ಪಾವತಿಗೆ 2,2655,000 ರೂ. ಬೀದಿ ದೀಪ, ನೀರು ಸರಬರಾಜು ಸ್ಥಾವರಗಳ ವಿದ್ಯುತ್ ಬಿಲ್ ಪಾವತಿಗೆ 1 ಕೋಟಿ ರೂ.ನಂತೆ ಒಟ್ಟು 23,0715,980 ರೂ.ನಷ್ಟು ಆದಾಯ ನಿರೀಕ್ಷಿಸಲಾಗಿದೆ.
ಪುರಸಭೆ ಆದಾಯದ ಮೂಲಗಳಿಂದ ಆಸ್ತಿ ತೆರಿಗೆ, ನೀರಿನ ಕಂದಾಯ, ಕಟ್ಟಡ ಪರವಾನಗಿ, ಉದ್ದಿಮೆ ಪರವಾನಗಿ, ಖಾತೆ ವರ್ಗಾವಣೆ, ಅಭಿವೃದ್ದಿ ಶುಲ್ಕಗಳು, ಹರಾಜು, ಜೆಸಿಬಿ/ಸಕ್ಕಿಂಗ್ ಯಂತ್ರ ಬಾಡಿಗೆ ಉಪಕರಣ ಮತ್ತಿತರ ಮೂಲಗಳಿಂದ 1,06,09,000 ರೂ. ನಿರೀಕ್ಷಿಸಲಾಗಿದೆ.

-ನಿರೀಕ್ಷಿತ ಆದಾಯದಲ್ಲಿ ಕಚೇರಿ ನಿರ್ವಹಣೆಗೆ 26 ಲಕ್ಷ ರೂ., ನೀರು ಸರಬರಾಜು ಸ್ಥಾವರಗಳ ವಿದ್ಯುತ್ ಬಿಲ್ ಪಾವತಿಗೆ 1 ಕೋಟಿ, ಪಟ್ಟಣದ ರಸ್ತೆಗಳ ಅಭಿವೃದ್ದಿಗೆ 5 ಕೋಟಿ 21 ಲಕ್ಷ, ಮಳೆ ನೀರು ಚರಂಡಿ ಅಭಿವೃದ್ದಿಗೆ 2 ಕೋಟಿ 45 ಲಕ್ಷ, ಬೀದಿ ದೀಪ ವ್ಯವಸ್ಥೆಗೆ 1 ಕೋಟಿ 12 ಲಕ್ಷ, ಜಯಲಕ್ಷ್ಮಿ ರೈಸ್ ಮಿಲ್ ರಸ್ತೆಯಲ್ಲಿ ಮುನ್ಸಿಪಲ್ ಮಾರುಕಟ್ಟೆ ನಿರ್ಮಾಣಕ್ಕೆ 1 ಕೋಟಿ, ನೈರ್ಮಲ್ಯ ಮತ್ತು ಘನತ್ಯಾಜ್ಯ ವಸ್ತು ನಿರ್ವಹಣೆಯಡಿ ಕಟ್ಟಡ ಅಭಿವೃದ್ದಿ, ಯಂತ್ರೋಪಕರಣಗಳ ಮತ್ತು ಭಾರಿ ವಾಹನಗಳ ಖರೀದಿ ಹಾಗೂ ನೆಲಭರ್ತಿ ಜಾಗ ಅಭಿವೃದ್ದಿಗೆ 1ಕೋಟಿ 2 ಲಕ್ಷ, ಪರಿಶಿಷ್ಟ ಜಾತಿ/ಪಂಗಡ ಕಲ್ಯಾಣ ನಿಧಿಯಡಿ ಶೇ.22.75 ಯೋಜನೆಯಲ್ಲಿ 47 ಲಕ್ಷ, ಇತರೇ ಬಡ ಜನರ ಕಲ್ಯಾಣ ನಿಧಿಯಡಿ ಶೇ.077.25ರ ಯೋಜನೆಯಲ್ಲಿ 15 ಲಕ್ಷ ರೂ. ಮತ್ತು ಅಂಗವಿಕಲರ ಕಲ್ಯಾಣನಿಧಿಯಡಿ ಶೇ.03 ಯೋಜನೆಯಲ್ಲಿ 6 ಲಕ್ಷದ 20 ಸಾವಿರ ರೂ. ಮೀಸಲಿರಿಸಲಾಗಿದೆ.

-2014-15ನೇ ಸಾಲಿನಲ್ಲಿ ರಾಜ್ಯ ಸರಕಾರದ ವತಿಯಿಂದ ಪಟ್ಟಣದ ರಸ್ತೆಯಾದ ಮೈಸೂರು-ಮಳವಳ್ಳಿ ರಸ್ತೆಯನ್ನು ರಾಷ್ಟೀಯ ಹೆದ್ದಾರಿಯಾಗಿ ಪರಿವರ್ತಿಸಿ ಅಭಿವೃದ್ಧಿಪಡಿಸಲು 41 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. ಬನ್ನೂರು ಪಟ್ಟಣವು ಈಗಾಗಲೇ ಕೇಂದ್ರ ಸರಕಾರದ ಪುರಸ್ಕೃತ ಯೋಜನೆಯಾದ ಯುಡಿಐಎಸ್‌ಎಂಟಿ ಯೋಜನೆಯಡಿ ಆಯ್ಕೆಯಾಗಿದ್ದು 12 ಕೋಟಿ 60 ಲಕ್ಷ ಮೊತ್ತದ ಕ್ರಿಯಾ ಯೋಜನೆ ಅನುಮೋದನೆ ಹಂತದಲ್ಲಿದೆ. ಬನ್ನೂರು ಪಟ್ಟಣ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಬದಲಾಯಿಸಿ ಎಲ್ಲಾ ವಾರ್ಡ್‌ಗಳಿಗೂ ದಿನದ 24 ಗಂಟೆಯೂ ನೀರು ಸರಬರಾಜು ಮಾಡಲು 22 ಕೋಟಿ 50 ಲಕ್ಷ ಮೊತ್ತದ ಯೋಜನೆ ಈಗಾಗಲೇ ಅನುಮೋದನೆಗೊಂಡಿದ್ದು, ಸದರಿ ಕಾಮಗಾರಿಯೂ 2014-15ನೇ ಸಾಲಿನಲ್ಲಿ ಪೂರ್ಣಗೊಳ್ಳುವ ಹಂತದಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ