ಆ್ಯಪ್ನಗರ

ಕೆ. ಆರ್. ನಗರದ ವ್ಯಕ್ತಿ ಕೊರೊನಾ ವೈರಸ್‌ಗೆ ಬಲಿ: ಖಾಸಗಿ ಆಸ್ಪತ್ರೆ, ರಸ್ತೆ ಸೀಲ್‌ ಡೌನ್

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೋವಿಡ್‌ ಕ್ಲಿನಿಕ್‌ಗೆ ದಾಖಲಾದ ವ್ಯಕ್ತಿ ಕೊರೊನಾ ವೈರಸ್‌ನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆ ಹಾಗೂ ಇಡೀ ರಸ್ತೆಯನ್ನೇ ಸೀಲ್‌ಡೌನ್‌ ಮಾಡಿ ಮೈಸೂರು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

Vijaya Karnataka Web 25 Jun 2020, 6:33 pm

ಹೈಲೈಟ್ಸ್‌:

  • ಕೆ. ಆರ್. ನಗರದ ವ್ಯಕ್ತಿ ಕೊರೊನಾ ವೈರಸ್‌ಗೆ ಬಲಿ
  • ಖಾಸಗಿ ಆಸ್ಪತ್ರೆ ಹಾಗೂ ಆಸ್ಪತ್ರೆಯ ರಸ್ತೆ ಸೀಲ್‌ಡೌನ್‌
  • ಪಿರಿಯಾಪಟ್ಟಣದ ವ್ಯಕ್ತಿಯೊಬ್ಬನಿಗೂ ಕೊರೊನಾ ಪಾಸಿಟಿವ್
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web coronavirus
ಕೆ. ಆರ್. ನಗರದ ವ್ಯಕ್ತಿ ಕೊರೊನಾ ವೈರಸ್‌ಗೆ ಬಲಿ: ಖಾಸಗಿ ಆಸ್ಪತ್ರೆ, ರಸ್ತೆ ಸೀಲ್‌ ಡೌನ್
ಕೆ. ಆರ್. ನಗರ (ಮೈಸೂರು): ಕೊರೊನಾ ಸೋಂಕಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದು, ಆತ ಎರಡು ದಿನಗಳ ಹಿಂದೆ ಕೆ. ಆರ್‌. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಈ ಹಿನ್ನೆಲೆಯಲ್ಲಿ ಪಟ್ಟಣದ ಮಮತಾ ಗಂಗಾ ಮೆಟರ್ನಿಟಿ ಸೆಂಟರ್‌ ಮತ್ತು ಆ ರಸ್ತೆಯನ್ನು ಸೀಲ್‌ಡೌನ್‌ ಮಾಡಿ ಸಿಬ್ಬಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ.
ಪಟ್ಟಣದ 7ನೇ ರಸ್ತೆಯಲ್ಲಿರುವ ಮಮತಾ ಗಂಗಾ ಮೆಟರ್ನಿಟಿ ಸೆಂಟರ್‌ ಮತ್ತು ಬಂಜೆತನ ಸಂಶೋಧನಾ ಕೇಂದ್ರದ ಮಾಲೀಕರು ಆಗಿರುವ ಡಾ.ಶಂಕರ್‌ ಸೋಮಯಾಜಿ ಮೈಸೂರಿನ ತಮ್ಮ ಸಂಬಂಧಿಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದರು. ಆತ ಗುಣಮುಖರಾಗದ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿನ ಅನುಮಾನ ಕಂಡು ಬಂದಿದ್ದರಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು.

ಕೊರೊನಾ ನಿಯಂತ್ರಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರ ವಿಫಲ: ಮಾಜಿ ಸಚಿವ ಎಚ್.ಸಿ ಮಹದೇವಪ್ಪ

ನಂತರ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಸಂಜೆ ಮೃತಪಟ್ಟರು. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆ ಮತ್ತು ಆ ರಸ್ತೆಯನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಆರ್‌.ಮಹೇಂದ್ರಪ್ಪ ಸೀಲ್‌ ಡೌನ್‌ ಮಾಡಿಸಿದ್ದಾರೆ.

ಕೊರೊನಾ ಭೀತಿ: ಮೈಸೂರಿನಲ್ಲಿ ಮಾರುಕಟ್ಟೆ ಬಂದ್‌ ಮಾಡಿ ಪಾಲಿಕೆಯಿಂದ ಸ್ವಚ್ಛತೆ

ಪಾಲಿ ಕ್ಲಿನಿಕ್‌ ಸೀಲ್‌ಡೌನ್‌: ಗುರುವಾರ ಪಿರಿಯಾಪಟ್ಟಣ ತಾಲೂಕಿನ ವ್ಯಕ್ತಿಯೊಬ್ಬನಿಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿದ್ದು, ಆತ ಜೂನ್ 22ರಂದು ಪಟ್ಟಣದ ವಾಣಿವಿಲಾಸ ರಸ್ತೆಯಲ್ಲಿರುವ ಅನಿಲ್‌ ಡಯಾಗ್ನೋಸ್ಟಿಕ್‌ ಸೆಂಟರ್‌ಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿದ್ದ. ಮೂಲತಃ ಕೃಷ್ಣರಾಜನಗರ ತಾಲೂಕಿನ ಕೋಳೂರಿನವರನಾದ ಸೋಂಕಿತ ವ್ಯಕ್ತಿ ರಾವಂದೂರಿನಲ್ಲಿ ವಾಸವಿದ್ದು, ಜೂನ್ 23 ರಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಂಡಿದ್ದ. 25 ರಂದು ಆತನ ಪರೀಕ್ಷಾ ವರದಿಯಲ್ಲಿ ಕೊರೊನಾ ಪಾಸಿಟೀವ್‌ ದೃಢಪಟ್ಟಿದೆ. ಹಾಗಾಗಿ ಅನಿಲ್‌ ಡಯಾಗ್ನೋಸ್ಟಿಕ್‌ ಸೆಂಟರ್‌ನ್ನು ಸೀಲ್‌ಡೌನ್‌ ಮಾಡಿ ಡಾ.ಎಸ್‌.ಎಂ.ಮಾಲೇಗೌಡ ಸೇರಿದಂತೆ 11 ಸಿಬ್ಬಂದಿಯನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಶುಭಾರಂಭ: ನೆಗಡಿ, ಕೆಮ್ಮು ಇದ್ದವರಿಗೆ ಪ್ರತ್ಯೇಕ ಪರೀಕ್ಷಾ ಕೊಠಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ