ಆ್ಯಪ್ನಗರ

ಒಂದೇ ದಿನದಲ್ಲಿ ಬರಲಿದೆ RT-PCR ರಿಪೋರ್ಟ್‌..! ಮೈಸೂರಿಗೆ ಬಂತು 1 ಕೋಟಿ ರೂ. ಟೆಸ್ಟಿಂಗ್‌ ಉಪಕರಣ

ಈ ಮೊದಲು ಆರ್‌ಟಿ-ಪಿಸಿಆರ್ ಕೊರೊನಾ ವೈರಸ್‌ ಟೆಸ್ಟ್‌ ರಿಪೋರ್ಟ್‌ಗಾಗಿ ಮೂರ್ನಾಲ್ಕು ದಿನ ಕಾಯಲೇಬೇಕಿತ್ತು. ಆದರೆ, ಈಗ ಮೈಸೂರಿನಲ್ಲಿ ಆಂಟಿಜೆನ್‌ ಟೆಸ್ಟ್‌ನಂತೆ ಆರ್‌ಟಿ-ಪಿಸಿಆರ್‌ ಕೊರೊನಾ ಪರೀಕ್ಷಾ ವರದಿಯೂ ಕೂಡ ಒಂದೇ ದಿನದಲ್ಲಿ ಬರಲಿದೆ. ಇದಕ್ಕಾಗಿ ಕೆ.ಆಸ್ಪತ್ರೆ ಲ್ಯಾಬ್‌ನಲ್ಲಿ 1 ಕೋಟಿ ರೂ. ಮೌಲ್ಯದ ಉಪಕರನ ಅಳವಡಿಸಲಾಗಿದೆ.

Vijaya Karnataka Web 8 Nov 2020, 5:16 pm
ಮೈಸೂರು: ಆರ್‌ಟಿ-ಪಿಸಿಆರ್ ಕೊರೊನಾ ವೈರಸ್‌ ಟೆಸ್ಟ್‌ ರಿಪೋರ್ಟ್‌ಗಾಗಿ ಮೂರ್ನಾಲ್ಕು ದಿನ ಕಾಯಲೇಬೇಕಿತ್ತು. ಇದರಿಂದ ಕೊರೊನಾ ನಿಯಂತ್ರಣಕ್ಕೆ ಒಂದಿಷ್ಟು ಸಮಸ್ಯೆಯೂ ಆಗಿತ್ತು. ಆದರೆ, ಈಗ ಮೈಸೂರಿನಲ್ಲಿ ಆಂಟಿಜೆನ್‌ ಟೆಸ್ಟ್‌ನಂತೆ ಆರ್‌ಟಿ-ಪಿಸಿಆರ್‌ ಕೊರೊನಾ ಪರೀಕ್ಷಾ ವರದಿಯೂ ಕೂಡ ಒಂದೇ ದಿನದಲ್ಲಿ ಬರಲಿದೆ.
Vijaya Karnataka Web coronavirus in mysuru now get rt pcr test results in a day
ಒಂದೇ ದಿನದಲ್ಲಿ ಬರಲಿದೆ RT-PCR ರಿಪೋರ್ಟ್‌..! ಮೈಸೂರಿಗೆ ಬಂತು 1 ಕೋಟಿ ರೂ. ಟೆಸ್ಟಿಂಗ್‌ ಉಪಕರಣ


ಇದಕ್ಕಾಗಿ ರಾಜ್ಯ ಸರಕಾರ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಅತಿ ಅಗತ್ಯವಿರುವ ‘ಲಿಕ್ವಿಡ್ ಹ್ಯಾಂಡ್ಲಿಂಗ್ ಸಿಸ್ಟಮ್’ ವೈದ್ಯಕೀಯ ಉಪಕರಣವನ್ನು ಪೂರೈಸಿದೆ. ಕೆ.ಆರ್‌.ಆಸ್ಪತ್ರೆಯಲ್ಲಿ ಹೊಸ ಸೌಲಭ್ಯವನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಉದ್ಘಾಟಿಸಿದ್ದು, ಇದರ ಸಹಾಯದಿಂದ ಒಂದೇ ದಿನದಲ್ಲಿ ಕೊರೊನಾ ಫಲಿತಾಂಶ ಪಡೆಯಬಹುದು ಎಂದು ಹೇಳಲಾಗುತ್ತಿದೆ.

ಕೆ.ಆರ್‌.ಆಸ್ಪತ್ರೆಯ ಮೈಕ್ರೋ ಬಯಾಲಜಿ ವಿಭಾಗದ ವೈರಲ್ ರಿಸರ್ಚ್ ಅಂಡ್ ಡಯಾಗ್ನೋಸ್ಟಿಕ್ ಲ್ಯಾಬೊರೇಟರಿಯಲ್ಲಿ (ವಿಆರ್‌ಡಿಎಲ್) ಹೊಸ ಸೌಲಭ್ಯ ಪರಿಚಯಿಸಲಾಗಿದೆ. ಸುಮಾರು 1 ಕೋಟಿ ರೂ. ವೆಚ್ಚದ ಲಿಕ್ವಿಡ್‌ ಹ್ಯಾಂಡ್ಲಿಂಗ್‌ ಸಿಸ್ಟಮ್‌ನ್ನು ಇಲ್ಲಿ ಅಳವಡಿಸಲಾಗಿದೆ. ಈ ಉಪಕರಣ ಹೊಂದಿದ ರಾಜ್ಯದ ಎರಡನೇ ಪ್ರಮುಖ ಸಂಸ್ಥೆ ಎಂಬ ಹೆಗ್ಗಳಿಕೆಯು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಸಂದಿದೆ.

ಮೈಸೂರಿನಲ್ಲಿ 148 ಹೊಸ ಪಾಸಿಟಿವ್‌ ಕೇಸ್‌ | 215 ಮಂದಿ ಗುಣಮುಖ, ಇಬ್ಬರು ಬಲಿ

ಶೂನ್ಯ ಮಾನವ ಹಸ್ತಕ್ಷೇಪ ಈ ಉಪಕರಣದ ವಿಶೇಷವಾಗಿದೆ. ಇದು ಶಕ್ತಿಯುತ ಮತ್ತು ಬುದ್ಧಿವಂತ ಉಪಕರಣವಾಗಿದ್ದು, ಬದಲಾಗುತ್ತಿರುವ ಸಂದರ್ಭಗಳಿಗೆ ಹೊಂದಿಕೊಳ್ಳುತ್ತದೆ. ಸುಲಭವಾಗಿ ಬಳಸಬಹುದಾದ ಐಕಾನ್ ಚಾಲಿತ ಸಾಫ್ಟ್‌ವೇರ್‌ನ್ನು ಹೊಂದಿದೆ. ಇದನ್ನು ಕೆಲಸವನ್ನು ಸರಾಗವಾಗಿ ಮುಂದುವರೆಸಲು ಹಾಗೂ ಪ್ರಯೋಗಾಲಯವನ್ನು ಇನ್ನಷ್ಟು ಸ್ವಯಂಚಾಲಿತಗೊಳಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಎಂಎಂಸಿ&ಆರ್‌ಐ ಡೀನ್‌ ಮತ್ತು ನಿರ್ದೇಶಕ ಡಾ.ಸಿ.ಪಿ.ನಂಜರಾಜನ್‌ ತಿಳಿಸಿದ್ದಾರೆ.

ಮೈಸೂರು: ಕೊರೊನಾ ಸೋಂಕಿತ ಹಿರಿಯರ ಮೇಲೆ ಹೆಚ್ಚು ನಿಗಾ ಇರಲಿ | ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ

ಈ ಉಪಕರಣ ಎರಡು ಗಂಟೆಯಲ್ಲಿ 96 ಪರೀಕ್ಷೆಗಳನ್ನು ನಡೆಸಿ, ಫಲಿತಾಂಶವನ್ನು ಕೂಡ ಶೀಘ್ರವಾಗಿ ನೀಡುತ್ತದೆ. ಒಂದು ದಿನದಲ್ಲಿ ಇದು 1,200 ಸ್ಯಾಂಪಲ್‌ ಪರೀಕ್ಷೆ ಮಾಡಬಲ್ಲದು. ಪ್ರಸ್ತುತ ಕೆ.ಆರ್‌.ಆಸ್ಪತ್ರೆಯ ಪ್ರಯೋಗಾಲಯದಲ್ಲಿ 2,000 ಮತ್ತು ಸಿಎಫ್‌ಟಿಆರ್‌ಐ ಪ್ರಯೋಗಾಲಯದಲ್ಲಿ 1,200 ಸ್ಯಾಂಪಲ್‌ ಪರೀಕ್ಷೆ ಮಾಡಲಾಗುತ್ತಿದ್ದು, ಹೊಸ ಉಪಕರಣದೊಂದಿಗೆ ಹೆಚ್ಚುವರಿ 1,200 ಸ್ಯಾಂಪಲ್‌ ಪರೀಕ್ಷೆ ನಡೆಸಿ, ಶೀಘ್ರದಲ್ಲಿ ಫಲಿತಾಂಶ ನೀಡಬಹುದು ಎಂದು ಅವರು ಹೇಳಿದ್ದಾರೆ.

ಕೇರಳದಲ್ಲಿ ಓಣಂನಂತೆ, ಕರ್ನಾಟಕಕ್ಕೆ ದಸರಾ ಕೊರೊನಾಘಾತ..? ಮುಂದಿನ 2 ವಾರ ಮೈಸೂರಿಗೆ ನಿರ್ಣಾಯಕ

ಈ ಸೌಲಭ್ಯದಿಂದ ಬೆಂಗಳೂರು ಪ್ರಯೋಗಾಲಯಗಳಿಗೆ ಸ್ಯಾಂಪಲ್‌ ಕಳುಹಿಸುವುದನ್ನು ತಪ್ಪಿಸಿದಂತಾಗಿದೆ. ಅದರಿಂದಲೇ ರಿಪೋರ್ಟ್‌ ಬರಲು ಕನಿಷ್ಠ ಐದರಿಂದ-ಆರು ದಿನಗಳನ್ನು ಬೇಕಾಗಿತ್ತು ಎಂದ ಅವರು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪರೀಕ್ಷೆಗಳ ಸಂಖ್ಯೆಯನ್ನು ದಿನಕ್ಕೆ 4,000ಕ್ಕೆ ಹೆಚ್ಚಿಸಬೇಕೆಂದು ಸೂಚಿಸಿದ್ದಾರೆ ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ