Please enable javascript.Dhruva Narayan,ನಳೀನ್‌ ಕುಮಾರ್ ಕಟೀಲ್‌ ಭಜನಾ ಮಂಡಳಿ ಅಧ್ಯಕ್ಷರಾಗಲು ಲಾಯಕ್ಕು: ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಧ್ರುವನಾರಾಯಣ - dhruva narayan slams bjp president nalin kumar kateel - Vijay Karnataka

ನಳೀನ್‌ ಕುಮಾರ್ ಕಟೀಲ್‌ ಭಜನಾ ಮಂಡಳಿ ಅಧ್ಯಕ್ಷರಾಗಲು ಲಾಯಕ್ಕು: ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಧ್ರುವನಾರಾಯಣ

Vijaya Karnataka Web 11 Sep 2022, 9:29 pm
Embed

ಮೈಸೂರು: ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಚುನಾವಣೆಗೂ ಮುನ್ನವೇ ವಾಕ್ಸಮರ ಜೋರಾಗಿಯೇ ಆರಂಭ ಆಗಿದೆ. ಸಾರ್ವತ್ರಿಕ ಚುನಾವಣೆಗೆ 7 ತಿಂಗಳು ಬಾಕಿ ಇರುವಾಗಲೇ ಪರಸ್ಪರ ಟೀಕಾ ಪ್ರಹಾರ ನಡೆಯುತ್ತಿದೆ . ಜನಸ್ಪಂದನಾ ಕಾರ್ಯಕ್ರಮ ದಲ್ಲಿ ಸಿಎಂ ಬೊಮ್ಮಾಯಿ ಸೇರಿ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ರು. ಈಗ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಸಿಎಂಗೆ ಸರಿಯಾಗಿಯೇ ಚಾಟಿ ಬೀಸಿದ್ದಾರೆ.

ಬಸವರಾಜ ಬೊಮ್ಮಾಯಿ ಅವರು ಯೋಗದಿಂದ ಸಿಎಂ ಆದವರು. ಯೋಗ್ಯತೆ ಯಿಂದಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಟೀಕಿಸಿದರು. ಮೈಸೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗದಿಂದ ಬಂದಿದ್ದು ಕ್ಷಣಿಕ. ಯೋಗ್ಯತೆಯಿಂದ ಬಂದಿದ್ದು ಶಾಶ್ವತ. ನಿಮಗೆ ನೆನಪಿರಲಿ. ಕಾಂಗ್ರೆಸ್ ಸರಕಾರ – ಬಿಜೆಪಿ ಸರಕಾರದ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದರು.

ಮುಂದಿನ ಚುನಾವಣೆ ಯಡಿಯೂರಪ್ಪ ಸಾರಥ್ಯ, ಬೊಮ್ಮಾಯಿ ನೇತೃತ್ವ ಎಂದು ಹೇಳುವ ನಳೀನ್ ಕುಮಾರ್, ಹಾಗಾದರೆ ಪಕ್ಷದ ಅಧ್ಯಕ್ಷರಾಗಿ ನಿಮ್ಮ ಪಾತ್ರ ಏನು? ಭಜನಾ ಮಂಡಳಿ ಅಧ್ಯಕ್ಷರಾಗಲು ನಳೀನ್ ಕುಮಾರ್ ಕಟೀಲ್ ಸರಿಯಿದ್ದಾರೆ ಎಂದರು.

ಕೇಂದ್ರ ಸಚಿವೆ ಸ್ಮೃತಿ ಇರಾನಿ ಗೆ ರಾಹುಲ್ ಗಾಂಧಿ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿಗೆ ಭಯ ಬಂದಿದೆ. ಪೂಜಾರಿ ಬಾಯಲ್ಲಿ ಮಂತ್ರ ಬರಬೇಕಿತ್ತು. ಆದರೆ, ಬಂದಿದ್ದು ಬರೀ ಉಗುಳು. ಮೋದಿ ಅವರ ಮನ್ ಕೀ ಬಾತ್ ಈಗ ಮಂಕೀ ಬಾತ್ ಆಗಿದೆ. ಕಾಂಗ್ರೆಸ್ ದ್ದು 100 ಪರ್ಸೆಂಟ್ ಕಮೀಷನ್ ಸರಕಾರ ಎಂಬ ಆರೋಪ ಸತ್ಯವಾಗಿದ್ದರೆ ಸಿಬಿಐ ತನಿಖೆ ಮಾಡಿಸಿ ಎಂದು ಆಗ್ರಹಿಸಿದರು.

ಬಿಜೆಪಿ ಸರಕಾರ ಹೆಸರಿಗೆ ನಡೆಸಿದ್ದು ಜನಸ್ಪಂದನೆ. ಆದರೆ ನಡೆದಿದ್ದು ಮೋಜಿನ ಔತಣಕೂಟ.ಸಿಎಂ ಜವಾಬ್ದಾರಿಯುತವಾಗಿ ಮಾತನಾಡಲಿಲ್ಲ.ತಾಖತ್, ಧಂ‌ ಎಂಬ ಪದ ಪ್ರಯೋಗ ಸಿಎಂ ಮಾಡಿದ್ದು ಸರಿಯಲ್ಲ.ನೀವು ವಿರೋಧ ಪಕ್ಷದಲ್ಲಿದ್ದಾಗ ಕಾಂಗ್ರೆಸ್ ತಪ್ಪನ್ನು ಯಾಕೆ ಹೇಳಲಿಲ್ಲ. ರೋಂ ಹೊತ್ತಿ ಉರಿಯುವಾಗ ರೋಂ ದೊರೆ ಪೀಟೀಲು ನುಡಿಸುತ್ತಿದ್ದಂನಂತೆ.ಅದೇ ರೀತಿ ಇವತ್ತು ಕರ್ನಾಟಕ ಪ್ರವಾಹದಲ್ಲಿ ಮುಳುಗಿರುವಾಗ ಈ ಮೋಜು ಬೇಕಿತ್ತಾ?.ಸಚಿವರು ಮೃತ ಪಟ್ಟು ಎರಡು ದಿನವಾಗಿಲ್ಲ. ಅವರ ಫೋಟೋ ಮುಂದಿಟ್ಟು ಕೊಂಡುಡ್ಯಾನ್ಸ್ ಮಾಡ್ತಿರಾ? ಮೋಜು ಮಾಡ್ತಿರಾ? ಅಂತ ವಾಗ್ದಾಳಿ ನಡೆಸಿದ್ರು.