ಆ್ಯಪ್ನಗರ

ಕನ್ನಡ ಪರ ಸಂಘಟನೆಗಳ ಹೋರಾಟಕ್ಕೆ ಅನುಮತಿ: ಆಗ್ರಹ

ಕನ್ನಡ ಪರ ಸಂಘಟನೆಗಳು ಹೋರಾಟ ಮಾಡಲು ಸ್ಥಳೀಯ ಪೊಲೀಸರು ತಕ್ಷಣ ಅನುಮತಿ ನೀಡಲು ಹಾಗೂ ನಿಷ್ಕ್ರಿಯಗೊಂಡಿರುವ ಪೊಲೀಸ್‌ ದೂರು ಪ್ರಾಧಿಕಾರವನ್ನು ಚಾಲನೆಗೊಳಿಸಬೇಕು ಎಂದು ಹಿರಿಯ ಕನ್ನಡ ಹೋರಾಟಗಾರ ಸತ್ಯಪ್ಪ ಒತ್ತಾಯಿಸಿದರು.

Vijaya Karnataka Web 21 May 2018, 5:00 am
ಮೈಸೂರು: ಕನ್ನಡ ಪರ ಸಂಘಟನೆಗಳು ಹೋರಾಟ ಮಾಡಲು ಸ್ಥಳೀಯ ಪೊಲೀಸರು ತಕ್ಷಣ ಅನುಮತಿ ನೀಡಲು ಹಾಗೂ ನಿಷ್ಕ್ರಿಯಗೊಂಡಿರುವ ಪೊಲೀಸ್‌ ದೂರು ಪ್ರಾಧಿಕಾರವನ್ನು ಚಾಲನೆಗೊಳಿಸಬೇಕು ಎಂದು ಹಿರಿಯ ಕನ್ನಡ ಹೋರಾಟಗಾರ ಸತ್ಯಪ್ಪ ಒತ್ತಾಯಿಸಿದರು.
Vijaya Karnataka Web kannada organisations
ಕನ್ನಡ ಪರ ಸಂಘಟನೆಗಳ ಹೋರಾಟಕ್ಕೆ ಅನುಮತಿ: ಆಗ್ರಹ


''ಇತ್ತೀಚೆಗೆ ಕೆಲವು ವರ್ಷಗಳಿಂದ ಜಿಲ್ಲೆ ಹಾಗೂ ನಗರದಲ್ಲಿ ನಾಡು, ನುಡಿ, ನೆಲ, ಜಲಕ್ಕಾಗಿ ಹೋರಾಟ ಮಾಡುವ ಕನ್ನಡ ಹೋರಾಟಗಾರರ ಸ್ಥಿತಿ ಬಹಳ ಶೋಚನೀಯವಾಗಿದೆ. ರಾಜಕೀಯ ಪಕ್ಷಗಳಿಗೊಂದು ಕಾನೂನು, ಹೋರಾಟಗಾರರಿಗೊಂದು ಕಾನೂನು ಇದೆ. ಈ ತಾರತಮ್ಯ ನೀತಿ ಯಾಕೆ,'' ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

''ಸಾಮಾಜಿಕ ಹೋರಾಟಕ್ಕೆ ಅನುಮತಿ ನೀಡಲು ಪೊಲೀಸ್‌ ಇಲಾಖೆ ಸ್ಥಳೀಯ ಠಾಣೆಗಳಲ್ಲಿ ಅನುಮತಿ ನೀಡದೆ ಎರಡು, ಮೂರು ದಿನಗಳ ಕಾಲ ಅನುಮತಿ ಪ್ರಕ್ರಿಯೆಯನ್ನು ಹೇರಿ ಹೋರಾಟಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಅಲ್ಲದೇ ಕೆಲ ಅಧಿಕಾರಿಗಳು ಕಾನೂನನ್ನು ಗಾಳಿಗೆ ತೂರಿ ರಾಜಕೀಯ ಪಕ್ಷಗಳಿಗೊಂದು ಕಾನೂನು ಹೋರಾಟಗಾರರಿಗೊಂದು ಕಾನೂನು ಮಾಡಿರುವುದು ಪ್ರಜಾಪ್ರಭುತ್ವದಲ್ಲಿ ಎಷ್ಟರ ಮಟ್ಟಿಗೆ ಸರಿ? ಇದು ಕಾನೂನು ಇಲಾಖೆಯ ತಾರತಮ್ಯ ನೀತಿಯನ್ನು ತೋರಿಸುತ್ತದೆ,'' ಎಂದು ಆಕ್ರೋಶ ವ್ಯಕ್ತಪಡಿಸಿದರು.

''ಕಳೆದ ಎರಡು ವರ್ಷಗಳಿಂದ ಪೊಲೀಸ್‌ ದೂರು ಪ್ರಾಧಿಕಾರ ನಿಷ್ಕ್ರಿಯಗೊಳಿಸಿದೆ. ಪೊಲೀಸ್‌ ದೂರು ಪ್ರಾಧಿಕಾರ ದೂರು ನೀಡಿದವರ ಪರವಾಗಿ ಕೆಲಸ ಮಾಡದೇ, ತಪ್ಪೆಸಗಿರುವವರ ಪರವಾಗಿ ಕಾರ್ಯ ನಿರ್ವಹಿಸುತ್ತಿದೆ. ದೂರು ಕೊಟ್ಟವರ ರಕ್ಷಣೆಗಾಗಿ ಪೊಲೀಸ್‌ ದೂರು ಪ್ರಾಧಿಕಾರವನ್ನು ಚಾಲನೆಗೊಳಿಸಬೇಕು,'' ಎಂದು ಮನವಿ ಮಾಡಿದರು.

ಕನ್ನಡ ಪರ ಹೋರಾಟಗಾರರಾದ ಅರವಿಂದ ಶರ್ಮ, ರಾಜೇಶ್ಗೌಡ, ತೇಜಸ್ವಿ ಕುಮಾರ್‌ ಗೋಷ್ಠಿಯಲ್ಲಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ