ಮೈಸೂರು ಗ್ಯಾಂಗ್‌ ರೇಪ್‌ ಪ್ರಕರಣ: ಕಿರಾತಕರನ್ನು ಮತ್ತದೇ ಬೆಟ್ಟಕ್ಕೆ ಕರೆದೊಯ್ದೊಗ

ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಸೋಮವಾರ (ಆಗಸ್ಟ್‌ 30) ಅತ್ಯಾಚಾರ ನಡೆದ ಸ್ಥಳಕ್ಕೆ ಪರಿಶೀಲನೆಗಾಗಿ ಕರೆದೊಯ್ಯಲಾಗಿತ್ತು. ಎಲ್ಲಾ ಐವರು ಆರೋಪಿಗಳಿಂದ ಪೊಲೀಸರು ಸ್ಥಳ ಮಹಜರು ಮಾಡಿಸಿದರು.ಮೈಸೂರಿನ ಹೊರವಲಯದ ಲಲಿತಾದ್ರಿಪುರ ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿತ್ತು. ಪ್ರಕರಣ ಸಂಬಂಧ ತಮಿಳುನಾಡಿನಲ್ಲಿ ತಲೆಮರಿಸಿಕೊಂಡಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.ಕಳೆದ ಎರಡು ದಿನಗಳಿಂದ ಆರೋಪಿಗಳ ತೀವ್ರ ವಿಚಾರಣೆ ನಡೆಸುತ್ತಿರುವ ಪೊಲೀಸರು, ಇದೀಗ ಆರೋಪಿಗಳಿಂದ ಸ್ಥಳ ಮಹಜರು ನಡೆಸಿದ್ದಾರೆ. ಈ ವೇಳೆ ಪೊಲೀಸರು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ.ಇನ್ನು, ಲಲಿತಾದ್ರಿಪುರಕ್ಕೆ ಆರೋಪಿಗಳನ್ನು ಕರೆತಂದ ಪೊಲೀಸರಿಗೆ ಕೆಲಕಾಲ ಮಳೆ ಅಡ್ಡಿಪಡಿಸಿತು .ಆದರೆ ಪೊಲೀಸರು ಮಾತ್ರ ಮಳೆಯಲ್ಲೇ ಆರೋಪಿಗಳಿಂದ ಇಂಚಿಂಚೂ ಮಾಹಿತಿ ಪಡೆದರು. ಸ್ತಳ ಮಹಜರು ವೇಳೆ ಎಲ್ಲಾ ಆರೋಪಿಗಳಿಗೆ ಕಪ್ಪು ಬಣ್ಣದ ಮುಸುಕು ಹಾಕಲಾಗಿತ್ತು.

Vijaya Karnataka Web 30 Aug 2021, 11:26 pm
Loading ...