ಆ್ಯಪ್ನಗರ

ರಾಜಧಾನಿ ದಿಲ್ಲಿಯಲ್ಲಿ ಮತ್ತೆ ನಡುಗಿದ ಭೂಮಿ: ತಿಂಗಳಲ್ಲಿ ಎರಡನೇ ಭೂಕಂಪನ

Delhi Earthquake: ರಾಜಧಾನಿ ದಿಲ್ಲಿಯಲ್ಲಿ ಈ ತಿಂಗಳಲ್ಲಿ ಎರಡನೇ ಬಾರಿ ಭೂಕಂಪನ ಉಂಟಾಗಿದೆ. ಹರ್ಯಾಣದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದ್ದು, ರಾಜಧಾನಿ ದಿಲ್ಲಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಲ ನಡುಗಿದ ಅನುಭವ ಉಂಟಾಗಿದೆ. ಇದರಿಂದ ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.

Authored byಅಮಿತ್ ಎಂ.ಎಸ್ | Vijaya Karnataka Web 15 Oct 2023, 8:19 pm

ಹೈಲೈಟ್ಸ್‌:

  • ರಾಜಧಾನಿ ದಿಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರ ನಡುಗಿದ ಭೂಮಿ
  • ಹರ್ಯಾಣದ ಫರೀದಾಬಾದ್‌ನಲ್ಲಿ 3.1 ತೀವ್ರತೆಯಲ್ಲಿ ಲಘು ಪ್ರಮಾಣದ ಭೂಕಂಪನ ದಾಖಲು
  • ಅಫ್ಘಾನಿಸ್ತಾನದಲ್ಲಿ ಒಂದೇ ವಾರದ ಅವಧಿಯಲ್ಲಿ ಎರಡನೇ ಬಾರಿ ಪ್ರಬಲ ಭೂಕಂಪನದಿಂದ ಹಾನಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Delhi Quake.
ಹೊಸದಿಲ್ಲಿ: ರಾಜಧಾನಿ ದಿಲ್ಲಿ ಹಾಗೂ ಅದರ ಸುತ್ತಮುತ್ತಲಿನ ನಗರಗಳಲ್ಲಿ ಭಾನುವಾರ ಮಧ್ಯಾಹ್ನ ಭೂಮಿ ಕಂಪಿಸಿದೆ. ಹರ್ಯಾಣದ ಫರೀದಾಬಾದ್ ಭೂಕಂಪನದ ಕೇಂದ್ರ ಬಿಂದುವಾಗಿದೆ. ರಿಕ್ಟರ್ ಮಾಪನದಲ್ಲಿ 3.1 ತೀವ್ರತೆ ದಾಖಲಾಗಿದೆ. ಇದು ಲಘು ಭೂಕಂಪನ ಆಗಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.
ಸಂಜೆ 4.8ರ ಸುಮಾರಿಗೆ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ ತಿಳಿಸಿದೆ. ಫರೀದಾಬಾದ್‌ನ ಪೂರ್ವದ 9 ಕಿಮೀ ಹಾಗೂ ದಿಲ್ಲಿಯ ಈಶಾನ್ಯ ಭಾಗದ 30 ಕಿಮೀ ದೂರದಲ್ಲಿ ಕಂಪನದ ಕೇಂದ್ರ ಬಿಂದು ಕಂಡುಬಂದಿದೆ ಎಂದು ಅದು ಹೇಳಿದೆ.
ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ: 8 ದಿನಗಳ ಅಂತರದಲ್ಲೇ ಮತ್ತೆ ನಡುಗಿದ ಭೂಮಿ!

ಭೂಮಿ ನಡುಗಿದ ಅನುಭವ ಉಂಟಾದ ಕೂಡಲೇ ಜನರು ಮನೆಗಳು ಹಾಗೂ ಕಟ್ಟಡಗಳಿಂದ ಹೊರಗೆ ಓಡಿ ಬಂದು ರಸ್ತೆಯಲ್ಲಿ ನಿಲ್ಲುವ ವಿಡಿಯೋಗಳು ವೈರಲ್ ಆಗಿವೆ.


ಜನರು ಎಲಿವೇಟರ್‌ಗಳನ್ನು ಬಳಸದಂತೆ ಮತ್ತು ಕಟ್ಟಡಗಳು, ಮರಗಳು, ಗೋಡೆ ಹಾಗೂ ಕಂಬಗಳಿಂದ ದೂರ ಇರುವಂತೆ ಮನವಿ ಮಾಡಿತ್ತು. ತುರ್ತು ಪರಿಸ್ಥಿತಿಗೆ 112ಕ್ಕೆ ಕರೆ ಮಾಡುವಂತೆ ತಿಳಿಸಿತ್ತು.


ರಾಷ್ಟ್ರ ರಾಜಧಾನಿಯಲ್ಲಿ ಈ ತಿಂಗಳಲ್ಲಿ ಜನರು ಭೂಕಂಪನದ ಭೀತಿಗೆ ಒಳಗಾಗಿರುವುದು ಇದು ಎರಡನೇ ಸಲವಾಗಿದೆ. ಇದಕ್ಕೂ ಮುನ್ನ ಪ್ರಬಲ ಭೂಕಂಪನದಿಂದ ಜನರು ಆತಂಕಗೊಂಡಿದ್ದರು. ದಿಲ್ಲಿ- ಎನ್‌ಸಿಆರ್ ಮತ್ತು ಉತ್ತರ ಭಾರತದ ಅನೇಕ ಭಾಗಗಳಲ್ಲಿ ಅಕ್ಟೋಬರ್ 3ರಂದು ಭೂಮಿ ಅದುರಿತ್ತು. ನೇಪಾಳದ ಪಶ್ಚಿಮ ಭಾಗದಲ್ಲಿ ರಿಕ್ಟರ್ ಮಾಪನದಲ್ಲಿ 6.2 ತೀವ್ರತೆಯಲ್ಲಿ ಭೂಕಂಪನ ದಾಖಲಾಗಿತ್ತು. ನೇಪಾಳದಲ್ಲಿ ಸರಣಿಯಂತೆ ಒಂದರ ಹಿಂದೊಂದು ಕಂಪನ ಉಂಟಾಗಿದ್ದರಿಂದ ಭಾರತದ ಅನೇಕ ಭಾಗಗಳಲ್ಲಿ ಅದರ ಪರಿಣಾಮ ಉಂಟಾಗಿತ್ತು.
ಅಫ್ಘಾನಿಸ್ತಾನ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 2 ಸಾವಿರಕ್ಕೆ ಏರಿಕೆ! ಮನೆಗಳಲ್ಲೇ ಜೀವಂತ ಸಮಾಧಿ!

ಭಾನುವಾರ ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯಲ್ಲಿ ಪ್ರಬಲ ಭೂಕಂಪನ ಉಂಟಾಗಿದೆ. ಹೆರಾತ್ ನಗರದಿಂದ ಸುಮಾರು 34 ಕಿಮೀ ಹೊರಭಾಗದಲ್ಲಿ ಶಕ್ತಿಶಾಲಿ ಭೂಕಂಪನ ವರದಿಯಾಗಿದೆ. ವಾರದ ಹಿಂದಷ್ಟೇ (ಅ 7ರಂದು) ಅನಾಹುತಕಾರಿ ಭೂಕಂಪನವು ಅಫ್ಘಾನಿಸ್ತಾನದಲ್ಲಿ 2 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದುಕೊಂಡಿತ್ತು.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ