ಆ್ಯಪ್ನಗರ

ಬೇಡಿಕೆ ಈಡೇರಿಕೆಗಾಗಿ ಅಂಚೆಪಾಲಕರ ಧರಣಿ

ಗ್ರಾಮೀಣ ಭಾಗದ ಅಂಚೆ ನೌಕರರ ನಾನಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದಿಂದ ಬುಧವಾರ ಅನಿರ್ದಿಷ್ಟಾವಧಿ ಧರಣಿ ಆರಂಭವಾಯಿತು.

ವಿಕ ಸುದ್ದಿಲೋಕ 17 Aug 2017, 9:00 am

ಸಿಂಧನೂರು: ಗ್ರಾಮೀಣ ಭಾಗದ ಅಂಚೆ ನೌಕರರ ನಾನಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದಿಂದ ಬುಧವಾರ ಅನಿರ್ದಿಷ್ಟಾವಧಿ ಧರಣಿ ಆರಂಭವಾಯಿತು.

ಜಿಡಿಎಸ್‌ ಕಮಿಟಿಯ ವರದಿಯನ್ನು ನಾವು ಕೊಟ್ಟಿರುವ(ಎಐಜಿಡಿಎಸ್‌ಯು) ಮಾರ್ಪಾಡುಗಳೊಂದಿಗೆ ಜಾರಿ ಮಾಡಬೇಕು. 8 ಗಂಟೆಯ ಕೆಲಸದ ಜತೆಗೆ ಸೇವೆಯನ್ನು ಕಾಯಂಗೊಳಿಸಬೇಕು. ದೆಹಲಿ ಮತ್ತು ಮದ್ರಾಸ್‌ ನ್ಯಾಯಾಲಯದ(ಸಿಎಟಿ) ತೀರ್ಮಾನದಂತೆ ಜಿಡಿಎಸ್‌ ನೌಕರರಿಗೆ ಪಿಂಚಣಿ ನೀಡಬೇಕು. ಟಾರ್ಗೆಟ್‌ ಹೆಸರಿನಲ್ಲಿ ಜಿಡಿಎಸ್‌ ನೌಕರರ ಮೇಲಿನ ದೌರ್ಜನ್ಯ ನಿಲ್ಲಿಸುವಂತೆ ಧರಣಿ ನಿರತರು ಆಗ್ರಹಿಸಿದರು. ಪ್ರಮುಖರಾದ ದೊಡ್ಡಯ್ಯಸ್ವಾಮಿ, ನಜೀರ್‌ಸಾಬ್‌, ರಮೇಶ, ಸಿದ್ದಲಿಂಗಪ್ಪ, ಶರಣೇಗೌಡ, ಸಿದ್ದು ಗೊರೇಬಾಳ ಸೇರಿದಂತೆ ಉಪ ವಿಭಾಗದ ಅಂಚೆ ಕಚೇರಿಯ ಅಂಚೆಪಾಲಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ