Please enable javascript.ಕುಶಲಕರ್ಮಿಗಳಿಂದ ಅರ್ಜಿ ಆಹ್ವಾನ - ಕುಶಲಕರ್ಮಿಗಳಿಂದ ಅರ್ಜಿ ಆಹ್ವಾನ - Vijay Karnataka

ಕುಶಲಕರ್ಮಿಗಳಿಂದ ಅರ್ಜಿ ಆಹ್ವಾನ

ವಿಕ ಸುದ್ದಿಲೋಕ 26 Sep 2014, 5:22 am
Subscribe

2014- 15ನೇ ಸಾಲಿನ ರಾಜ್ಯದ ಕುಶಲಕರ್ಮಿಗಳಿಗೆ ವಸತಿ ಕಾರ‌್ಯಾಗಾರ ನಡೆಸುವ ಬಗ್ಗೆ ಜಿಲ್ಲೆಯಲ್ಲಿರುವ ಕುಶಲಕರ್ಮಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕುಶಲಕರ್ಮಿಗಳಿಂದ ಅರ್ಜಿ ಆಹ್ವಾನ
ರಾಮನಗರ: 2014- 15ನೇ ಸಾಲಿನ ರಾಜ್ಯದ ಕುಶಲಕರ್ಮಿಗಳಿಗೆ ವಸತಿ ಕಾರ‌್ಯಾಗಾರ ನಡೆಸುವ ಬಗ್ಗೆ ಜಿಲ್ಲೆಯಲ್ಲಿರುವ ಕುಶಲಕರ್ಮಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸ್ವಂತ ಖಾಲಿ ನಿವೇಶನ ಅಥವಾ ಗುಡಿಸಲು, ಶಿಥಿಲಗೊಂಡಿರುವ ಮನೆಯನ್ನು ಹೊಂದಿರುವ ಕುಶಲಕರ್ಮಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಬಿದಿರು, ಬೆತ್ತದ ಕೆಲಸ, ಬಡಗಿ, ಕಮ್ಮಾರಿಕೆ, ಚರ್ಮಗಾರಿಕೆ, ಕುರಕುಶಲ ವಸ್ತು ತಯಾರಿಕೆ (ಕರಕುಶಲದ ಹೆಸರು ನಮೂದಿಸುವುದು) ತೆಂಗಿನ ನಾರಿನ ಉತ್ಪನ್ನಗಳ ತಯಾರಿಕೆ, ಕುಂಬಾರಿಕೆ, ನೇಯ್ಗೆ, ಜನರಲ್ ಎಂಜಿನಿಯರಿಂಗ್, ಚಾಪೆ ಹೆಣೆಯುವುದು, ಬುಟ್ಟಿ ಎಣೆಯುವುದು. ಕಸೂತಿ, ಹಗ್ಗ ಮಾಡುವುದು (ಪ್ಲಾಸ್ಟಿಕ್ ಹೊರತುಪಡಿಸಿ), ಅಗರಬತ್ತಿ ತಯಾರಿಕೆ, ಜೀನ್ಸ್ ಹೊಲಿಗೆ, ಬೆಳ್ಳಿ ಬಂಗಾರ ಆಭರಣ ತಯಾರಿಕೆ, ನೂಲುಗಾರರು, ಕೌದಿ ಹೊಲಿಯುವುದು, ಕಲ್ಲಿನ ಕೆತ್ತನೆ, ಎತ್ತಿನಗಾಡಿ ತಯಾರಿಕೆ ವೃತ್ತಿಯಲ್ಲಿ ತೊಡಗಿರಬೇಕು.

ಜಿಲ್ಲೆಯಲ್ಲಿರುವ 20 ಮಂದಿ ಕುಶಲಕರ್ಮಿಗಳಿಗೆ ಮಾತ್ರ ಅವಕಾಶವಿರುತ್ತದೆ. ಗ್ರಾಮೀಣ ಪ್ರದೇಶದವರಿಗೆ ವಾರ್ಷಿಕ ಆದಾಯ 32 ಸಾವಿರ ರೂ.ಗಿಂತ ಕಡಿಮೆ ಇರಬೇಕು. ಹಾಗೂ ನಗರ ಪ್ರದೇಶದಲ್ಲಿ ವಾಸಿಸುವವರ ವಾರ್ಷಿಕ ಆದಾಯ 87 ಸಾವಿರ ರೂ.ಗಳಾಗಿರಬೇಕು. ಅರ್ಜಿಗಳನ್ನು ಅ.15ರ ಒಳಗೆ ಸಲ್ಲಿಸಬೇಕು. ಅರ್ಜಿ ಹಾಗೂ ಹೆಚ್ಚಿನ ವಿವರಗಳಿಗೆ ತಾಲೂಕು ಕೈಗಾರಿಕಾ ವಿಸ್ತರಣಾಧಿಕಾರಿಗಳು ಹಾಗೂ ಜಿಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಕೈಗಾರಿಕಾ ವಸಾಹತು, ರಾಮನಗರ ಇವರಿಂದ ಪಡೆದು, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ವತ್ತಿನಿರತ ಕುಶಲಕರ್ಮಿ ಪರಿಪತ್ರ, ಸ್ವಂತ ನಿವೇಶನದ ದಾಖಲೆಗಳು, ಜತೆಗೆ ಈಗಿರುವ ಗುಡಿಸಲು ಮತ್ತು ಶಿಥಿಲಗೊಂಡ ಮನೆಗಳ ಫೋಟೋಗಳನ್ನು ಸಲ್ಲಿಸಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ