Please enable javascript.Ayush Doctors,ವಿಶೇಷ ಭತ್ಯೆಗೆ ಆಗ್ರಹಿಸಿ ಶಿವಮೊಗ್ಗ ಜಿಲ್ಲೆಯ ಆಯುಷ್‌ ವೈದ್ಯರ ಕರ್ತವ್ಯ ಸಹಿತ ಪ್ರತಿಭಟನೆ! - ayush doctors protests for demanding special allowance - Vijay Karnataka

ವಿಶೇಷ ಭತ್ಯೆಗೆ ಆಗ್ರಹಿಸಿ ಶಿವಮೊಗ್ಗ ಜಿಲ್ಲೆಯ ಆಯುಷ್‌ ವೈದ್ಯರ ಕರ್ತವ್ಯ ಸಹಿತ ಪ್ರತಿಭಟನೆ!

Vijaya Karnataka Web 2 Jun 2021, 9:11 am
Embed

ವಿಶೇಷ ಭತ್ಯೆಗೆ ಆಗ್ರಹಿಸಿ ಜಿಲ್ಲಾ ಆಯುಷ್‌ ವೈದ್ಯರು ಕರ್ತವ್ಯ ಸಹಿತ ಪ್ರತಿಭಟನೆ ಆರಂಭಿಸಿದ್ದಾರೆ. ಕೊರೊನಾ ವಿಶೇಷ ಭತ್ಯೆಯನ್ನ ಎಂಬಿಬಿಎಸ್‌ ಹಾಗೂ ಬಿಎಂಎಸ್‌ ವೈದ್ಯರಿಗೆ ಮಾತ್ರ ಘೋಷಿಸಿ ಆಯುಷ್‌ ವೈದ್ಯರನ್ನ ನಿರ್ಲಕ್ಷಿಸಲಾಗಿದೆ ಎಂದು ವೈದ್ಯರು ಬೇಸರ ವ್ಯಕ್ತಪಡಿಸಿದರು. ತೋಳಿಗೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು.

ಸರ್ಕಾರಿ ಆಯುಷ್‌ ವೈದ್ಯಾಧಿಕಾರಿಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ ಈರಣ್ಣ ಮಾತನಾಡಿ, ಕೊರೊನಾ ಸಂಕಷ್ಟದಲ್ಲಿ ಎಲ್ಲಾ ವೈದ್ಯರೂ ಸಹ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರದ ತಾರತಮ್ಯ ನಿಜಕ್ಕೂ ಬೇಸರ ತರಿಸಿದೆ.

ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗೂ ಭತ್ಯೆ ನೀಡಿ ಆಯುಷ್‌ ಇಲಾಖೆಯನ್ನ ವೈದ್ಯ ಸೇವೆಯೆಂದು ಪರಿಗಣಿಸದಂತೆ ನಡೆದುಕೊಂಡಿದ್ದು ನೋವಿನ ಸಂಗತಿಯಾಗಿದೆ. ಎಲ್ಲಾ ವೈದ್ಯರಂತೆ ಆಯುಷ್‌ ವೈದ್ಯರನ್ನೂ ಸಹ ವಿಶೇಷ ಭತ್ಯೆಗೆ ಪರಿಗಣಿಸಬೇಕು ಎಂದು ಹಿಂದಿನ ಸಚಿವ ಸಂಪುಟದಲ್ಲಿ ತಿರ್ಮಾನ ಮಾಡಲಾಗಿದೆ.

ಈಗಾಗಲೇ ಎರಡು ವರ್ಷದಿಂದ ಯಾವುದೇ ತರಹದ ಭತ್ಯೆ ಇಲ್ಲದೇ ಕೆಲಸ ಮಾಡುತ್ತಿದ್ದೇವೆ. ಈ ಸಮಯದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇವೆ. ನಮ್ಮ ಇಲಾಖೆಯನ್ನ ತಾತ್ಸಾರದಿಂದ ನೋಡುತ್ತಿರುವುದರಿಂದ ಇಂದಿನಿಂದ ಒಂದು ವಾರದ ಕಾಲ ರಾಜ್ಯದೆಲ್ಲೆಡೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತೇವೆ ಎಂದು ಈರಣ್ಣ ಹೇಳಿದರು.

ಮಂಗಳವಾರದಿಂದ ಆಯುಷ್‌ ವೈದ್ಯರು ಸೇವೆಗೆ ಹಾಜರಾದರೂ ಸಹ ತೋಳಿಗೆ ಕಪ್ಪು ಪಟ್ಟಿ ಧರಿಸಿ ತಾರತಮ್ಯದ ವಿರುದ್ಧ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಪ್ರತಿಭಟನೆ ಇನ್ನೊಂದು ವಾರ ಹೀಗೆ ಮುಂದುವರಿಯಲಿದೆ ಎಂದು ವೈದ್ಯರು ತಿಳಿಸಿದರು.