ಆ್ಯಪ್ನಗರ

ಗಾಂಜಾ ಸಾಗಣೆ ಯತ್ನ

ತಾಲೂಕಿನ ಮರಸ ಗ್ರಾಮದ ಬಳಿ ಒಣಗಾಂಜಾ ಮಾರಾಟಕ್ಕಾಗಿ ಸೊರಬ ತಾಲೂಕಿನ ಉಳವಿ ಕಡೆಯಿಂದ ದ್ವಿಚಕ್ರವಾಹನದಲ್ಲಿಬರುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ವಾಹನಗಳ ತಪಾಸಣೆ ಸಂದರ್ಭ ಮಾಲು ಸಮೇತ ಯುವಕನೊಬ್ಬನನ್ನು ಶುಕ್ರವಾರ ವಶಕ್ಕೆ ಪಡೆಯಲಾಗಿದೆ.

Vijaya Karnataka 4 Apr 2020, 5:00 am
ಸಾಗರ: ತಾಲೂಕಿನ ಮರಸ ಗ್ರಾಮದ ಬಳಿ ಒಣಗಾಂಜಾ ಮಾರಾಟಕ್ಕಾಗಿ ಸೊರಬ ತಾಲೂಕಿನ ಉಳವಿ ಕಡೆಯಿಂದ ದ್ವಿಚಕ್ರವಾಹನದಲ್ಲಿಬರುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ವಾಹನಗಳ ತಪಾಸಣೆ ಸಂದರ್ಭ ಮಾಲು ಸಮೇತ ಯುವಕನೊಬ್ಬನನ್ನು ಶುಕ್ರವಾರ ವಶಕ್ಕೆ ಪಡೆಯಲಾಗಿದೆ.
Vijaya Karnataka Web 03SGR9_46
ತಾಹೀರ್‌


ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಸೊರಬ ತಾಲೂಕಿನ ಉಳವಿ ಗ್ರಾಮದ ಜನತಾ ಕಾಲೋನಿ ವಾಸಿ 26ವರ್ಷದ ತಾಹಿರ್‌ ಅಹ್ಮದ್‌ನನ್ನು ವಶಕ್ಕೆ ಪಡೆದು, ಆತನಿಂದ 1 ಕೆ.ಜಿ 100 ಗ್ರಾಂ ತೂಕದಷ್ಟು ಒಣಗಿದ ಗಾಂಜಾ ಸೊಪ್ಪು, ಗಾಂಜಾ ಹೂ, ಗಾಂಜಾಪುಡಿ ತುಂಬಿದ ಪ್ಲಾಸ್ಟಿಕ್‌ ಕವರ್‌ ಮತ್ತು ಈ ಕೃತ್ಯಕ್ಕೆ ಬಳಸಿದ ದ್ವಿಚಕ್ರವಾಹನ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ದ್ವಿಚಕ್ರ ವಾಹನದ ಹಿಂಬದಿಯಲ್ಲಿಕುಳಿತಿದ್ದ ತಾಹಿರ್‌ ಅಹಮ್ಮದ್‌ ನ ತಂದೆ, 68 ವರ್ಷದ ಶೌಕತ್‌ ಅಲಿ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ದಾಳಿ ಕಾರ್ಯಾಚರಣೆಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಭರತ್‌ಕುಮಾರ್‌, ಎಎಸ್‌ಐ ಸಿದ್ದರಾಮಪ್ಪ, ಸಿಬ್ಬಂದಿ ಪೈರೋಜ್‌ ಅಹ್ಮದ್‌, ತಾರಾನಾಥ, ಗಿರೀಶ್‌ಬಾಬು, ಪ್ರಕಾಶ್‌ ಅಂಬ್ಲಿ, ರವಿಕುಮಾರ್‌, ಅಶೋಕ್‌, ರಘು ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ