ಆ್ಯಪ್ನಗರ

ಕಾವ್ಯದಲ್ಲಿ ನಿಸರ್ಗ, ಅಧ್ಯಾತ್ಮದ ಛಾಪು

ಕಾರ‍್ಯಗಳ ಒತ್ತಡದ ನಡುವೆಯೂ ಸೃಜನಶೀಲ ಪ್ರಯತ್ನ ಕಾಪಾಡಿಕೊಳ್ಳುವುದು ನಿಜವಾದ ಆಸಕ್ತಿ ಎಂದು ಎಲ್‌.ಬಿ.ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದ ತಿರುಮಲ ಮಾವಿನಕುಳಿ ಹೇಳಿದರು.

Vijaya Karnataka 19 May 2019, 5:00 am
ಸಾಗರ: ಕಾರ‍್ಯಗಳ ಒತ್ತಡದ ನಡುವೆಯೂ ಸೃಜನಶೀಲ ಪ್ರಯತ್ನ ಕಾಪಾಡಿಕೊಳ್ಳುವುದು ನಿಜವಾದ ಆಸಕ್ತಿ ಎಂದು ಎಲ್‌.ಬಿ.ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದ ತಿರುಮಲ ಮಾವಿನಕುಳಿ ಹೇಳಿದರು.
Vijaya Karnataka Web SMR-15SGR6


ಇಲ್ಲಿನ ರಾಜ್ಯ ಸರಕಾರಿ ನೌಕರರ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಡಿ.ನಂಜುಂಡ ರಚಿಸಿದ ಬಾನ್ದನಿ ಕವನ ಸಂಕಲನ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಬಾನ್ದನಿ ಸಂಕಲನದಲ್ಲಿ ನವೋದಯ ಕಾವ್ಯ ಪರಂಪರೆ ಲಕ್ಷ ಣಗಳು ಎದ್ದು ಕಾಣುತ್ತವೆ. ನಿಸರ್ಗದ ವ್ಯವಹಾರ ಹಾಗೂ ಅಧ್ಯಾತ್ಮದ ಸಂಗತಿ ಬಗ್ಗೆ ರಚನೆಯಾದ ಕವಿತೆಗಳಿವೆ. ಪ್ರಾಸ ಬದ್ಧ ಕವಿತೆಗಳನ್ನು ಹಠಕಟ್ಟಿ ಬರೆಯಬೇಕೆಂಬ ಯತ್ನವನ್ನು ಕವಿ ಮಾಡಿದ್ದಾರೆ ಎಂದರು. ಕವಿ, ಕೋಲಸಿರ್ಸಿ ಪದವಿಪೂರ್ವ ಕಾಲೇಜಿನ ಪ್ರಾಚಾರ‍್ಯ ಡಿ.ನಂಜುಂಡ ಮಾತನಾಡಿ, ಕಾವ್ಯ ಮಾಧ್ಯಮವು ನನ್ನೊಳಗಿನ ಅಭಿವ್ಯಕ್ತಿ ಶೈಲಿ ಎಂಬ ನಂಬಿಕೆಯಿದೆ. ಸಮಾಜಕ್ಕೆ ಸಂದೇಶ ನೀಡಬೇಕೆಂಬ ಹಂಬಲ ನನಗೆ ಇಲ್ಲ. ಮೂಡಿದ ಭಾವನೆಗಳನ್ನು ಪದಬಂಧದಲ್ಲಿಟ್ಟು ಕವನ ರಚಿಸಲು ಯತ್ನಿಸುತ್ತಿದ್ದೇನೆ. ಉದ್ಯೋಗಕ್ಕಾಗಿ ನಿತ್ಯ ಬಸ್‌ ಸಂಚಾರದ ಸಂದರ್ಭ ರಚಿಸಿದ ಕವನಗಳನ್ನು ಸಂಕಲನದ ರೂಪದಲ್ಲಿ ತರುವ ಹಂಬಲವಿದೆ ಎಂದರು. ಸಾಹಿತಿ ಡಾ.ನಾ.ಡಿಸೋಜ, ಪರಿಷತ್‌ ಜಿಲ್ಲಾ ಕಾರಾರ‍ಯಧ್ಯಕ್ಷ ಮ.ಸ.ನಂಜುಂಡಸ್ವಾಮಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರ್‌ ಇದ್ದರು. ನಿರ್ಮಲಾ ಮತ್ತು ಶ್ರೀಲಕ್ಷ್ಮೀ ಪ್ರಾರ್ಥಿಸಿ, ಮೇಜರ್‌ ನಾಗರಾಜ್‌ ಸ್ವಾಗತಿಸಿದರು. ಜಿ.ಎಸ್‌.ವೆಂಕಟೇಶ ನಿರೂಪಿಸಿದರು. ಪರಿಷತ್ತಿನ ಸುರೇಶ, ಗಂಗಮ್ಮ, ಡಾ.ಹಾ.ಉಮೇಶ, ವಿ.ಗಣೇಶ್‌, ಡಾ.ಜಿ.ಎಸ್‌.ಭಟ್‌, ವಿವಿಧ ಕಾಲೇಜುಗಳ ಉಪನ್ಯಾಸಕರು, ನಂಜುಂಡ ಅವರ ಕುಟುಂಬದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ