ಆ್ಯಪ್ನಗರ

ತುಮಕೂರಲ್ಲಿ ಕ್ಷಮೆ ಯಾಚಿಸಿದ ಸಚಿವ ಮಾಧುಸ್ವಾಮಿ! ಇವರು ಮಾಡಿದ ತಪ್ಪೇನು?

ತುಮಕೂರಲ್ಲಿ 74ನೇ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆ ಸಂದರ್ಭ, ಜಿಲ್ಲೆಯಲ್ಲಿ ಇತ್ತೀಚೆಗೆ ಮೃತಪಟ್ಟ ಜನಪ್ರತಿನಿಧಿ ಬಿ.ಸತ್ಗೆಯನಾರಾಯಣ ಅವರಿಗೆ ಗೌರವ ಸಮರ್ಪಣೆ ಮರೆಯಲಾಗಿತ್ತು. ಇದಕ್ಕಾಗಿ ಸಚಿವ ಮಾಧುಸ್ವಾಮಿ ಅವರು ನಿರ್ಲಕ್ಷ್ಯದ ಹೊಣೆ ಹೊತ್ತು ಕ್ಷಮೆ ಯಾಚಿಸಿದ್ದಾರೆ.

Vijaya Karnataka Web 15 Aug 2020, 4:11 pm
ತುಮಕೂರು: ನಗರದಲ್ಲಿ 74ನೇ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆ ಸಂದರ್ಭ, ಜಿಲ್ಲೆಯಲ್ಲಿ ಇತ್ತೀಚೆಗೆ ಮೃತಪಟ್ಟ ಜನಪ್ರತಿನಿಧಿಗೆ ಗೌರವ ಸಮರ್ಪಣೆ ಮಾಡುವುದನ್ನು ಜಿಲ್ಲಾಡಳಿತ ಮರೆತಿತ್ತು. ಇದಕ್ಕಾಗಿ ಸಚಿವ ಮಾಧುಸ್ವಾಮಿ ಅವರು ನಿರ್ಲಕ್ಷ್ಯದ ಹೊಣೆ ಹೊತ್ತು ಕ್ಷಮೆ ಯಾಚಿಸಿದರು.
Vijaya Karnataka Web madhu swamy


ಶಿರಾ ಶಾಸಕ ಬಿ. ಸತ್ಯನಾರಾಯಣ ಅವರು ಮೃತಪಟ್ಟಿದ್ದರು. ಸಚಿವ ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯಲ್ಲಿ ಮೃತರಿಗೆ ಗೌರವ ಸಲ್ಲಿಕೆಯನ್ನು ಮರೆಯಲಾಗಿತ್ತು.

ಈ ಕುರಿತು ಮಾಧುಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿ, ಹೌದು ಮೃತರಿಗೆ ಗೌರವ ಸಲ್ಲಿಸಬೇಕಿತ್ತು. ಆದರೆ, ಮರೆತಿದ್ದೇವೆ.
ಅದಕ್ಕೆ ಕ್ಷಮೆ ಕೇಳುತ್ತಿದ್ದೇನೆ. ಇದಕ್ಕೆ ನಾನೇ ಜವಾಬ್ದಾರಿ ಎಂದು ನಿರ್ಲಕ್ಷ್ಯದ ಹೊಣೆಯನ್ನು ತಾವೇ ಹೊತ್ತುಕೊಂಡರು.

ಕೊರೊನಾ ಕಾಲಘಟ್ಟದಲ್ಲಿ ಹೂಡಿಕೆಗೆ, ಉಳಿತಾಯಕ್ಕೆ ಇಲ್ಲಿವೆ ಗ್ರೇಟ್ ಐಡಿಯಾ!

ಎಸ್ ಡಿಪಿಐ ಮತ್ತು ಪಿಎಫ್ಐ ಬ್ಯಾನ್‌ಗೆ ಹಿಂದೇಟು
ಎಸ್ ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳನ್ನ ಬ್ಯಾನ್ ಮಾಡುವ ವಿಚಾರದ ಕುರಿತು ಮಾತನಾಡಿದರು.
ಸಂಘಟನೆಗಳನ್ನ ಬ್ಯಾನ್ ಮಾಡಲು ಕಾನೂನು ಸಚಿವರು ಹಿಂದೇಟು ಹಾಕಿದರು. ತನಿಖೆ ಆಗುವವರೆಗೂ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಕಷ್ಟ. ನಾನು ಕಾನೂನು ಸಚಿವ ಆಗಿ ಹೇಳುವುದೇನೆಂದರೆ, ತನಿಖೆ ನಡೆದು, ಸಾಕ್ಷಿ ಸಮೇತ ಸಾಭಿತಾಗುವವರೆಗೂ ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಬಹಳ ಕಷ್ಟ.

ನಮಗೆ ಮೇಲ್ನೋಟಕ್ಕೆ ಅನುಮಾನ ಬಂದಿದೆ. ಇದನ್ನು ತನಿಖಾಧಿಕಾರಿಗಳು ತನಿಖೆ ಮಾಡಿ ಸ್ಥಿರೀಕರಣ ಮಾಡಿದಮೇಲೆ ನಾವೆಲ್ಲಾ ಚರ್ಚೆ ಮಾಡಬಹುದು. ಅವರೇನಾದರೂ ಗಲಭೆಯನ್ನು ಮುಂದುವರಿಸಿಕೊಂಡು ಹೋಗ್ತಾರೆ ಅಂದ್ರೆ ನಾವು ಅನಿವಾರ್ಯವಾಗಿ ಆಕ್ಷನ್ ತೆಗೆದುಕೊಳ್ಳಬಹುದು. ಇಲ್ಲಿಯ ವರೆಗೂ ಆ ಬಗ್ಗೆ ಚರ್ಚೆಗಳು ಆಗಿಲ್ಲ. ಸರ್ಕಾರ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು ಗಲಭೆ: ಮೃತರಿಗೆ ತಲಾ 5 ಲಕ್ಷ ರೂ. ನೆರವು ಘೋಷಿಸಿದ ಜಮೀರ್‌!

ಗಲಭೆಯ ನ್ಯಾಯಾಂಗ ತನಿಖೆ ಕುರಿತು:
ಗಲಭೆಯನ್ನ ಘಟನೆಯನ್ನ ನ್ಯಾಯಾಂಗ ತನಿಖೆಗೆ ಒಪ್ಪಿಸುವ ಕುರಿತು ಮಾತನಾಡಿ, ನಮಗೆ ನಮ್ಮ ಪೋಲಿಸ್ ವ್ಯವಸ್ಥೆ ಮೇಲೆ ವಿಶ್ವಾಸ ಇದೆ. ಹಿಂದಿನ ಸರ್ಕಾರದವರಿಗೆ ಹೇಗೆ ಪೋಲಿಸ್ ಮೇಲೆ ನಂಬಿಕೆ ಇತ್ತೋ ನಮಗೂ ಅದೇ ಪೋಲಿಸ್ ಮೇಲೆ ವಿಶ್ವಾಸವಿದೆ.
ಕ್ರೈಂ ಡಿಟಕ್ಷನ್ ಗಳನ್ನೆಲ್ಲಾ ನ್ಯಾಯಾಂಗ ತನಿಖೆ ಮಾಡೋಕಾಗಲ್ಲ. ಕ್ರೈಂ ಡಿಟೆಕ್ಷನ್ ಪೋಲಿಸರೇ ಮಾಡ್ಬೇಕು ಅದಕ್ಕೆ ಅವರು ಸಮರ್ಥರಿರ್ತಾರೆ. ಅವರಿಗೆ ಟ್ರೈನಿಂಗ್ ಆಗಿರುತ್ತೆ. ನ್ಯಾಯಾಂಗ ತನಿಖೆಯಲ್ಲಿ ಕ್ರೈಂ ಡಿಟೆಕ್ಷನ್ ಹೇಗ್ ಮಾಡಿಸಲು ಸಾಧ್ಯ?
ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಘಟನೆಯ ಬಗ್ಗೆ ದೂರು ಕೊಡಬೇಕಿತ್ತು. ಆದರೆ, ಯಾವ ಕಾರಣದಿಂದ ದೂರು ಕೊಟ್ಟಿಲ್ಲ ಎಂದು ತಿಳಿದಿಲ್ಲ. ಅವರ ಮೇಲೆ ಯಾವ ಒತ್ತಡ ಇದೆ ಎಂಬುದು ಗೊತ್ತಿಲ್ಲ ಎಂದು ಹೇಳಿದರು.

ಗೋಲಿಬಾರ್ ನಲ್ಲಿ ಮೃತರ ಅಂತ್ಯಸಂಸ್ಕಾರಕ್ಕೆ ಝಮೀರ್ ಅಹ್ಮದ್ ಭಾಗಿಯಾಗಿದ್ದ ಕುರಿತು ಪ್ರತಿಕ್ರಿಯಿಸಿದರು.
ನಾನು ಝಮೀರ್ ಅಹ್ಮದ್ ಒಳ್ಳೇ ಸ್ನೇಹಿತರು.ಅವರ ಬಂದಿರೋ ದಾರಿಗೂ ನಾನು ಬೆಳೆದು ಬಂದಿರೋ ದಾರಿಗೂ ವ್ಯತ್ಯಾಸ ಇದೆ ಎಂದಷ್ಟೇ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ