ಆ್ಯಪ್ನಗರ

ಎಸ್‌ಬಿಐ ಬ್ಯಾಂಕಿಗೆ ರೈತರ ಮುತ್ತಿಗೆ

ಮುಂಗಾರು ಮಳೆ ಕೊರತೆಯಿಂದ ಸತತ 8 ವರ್ಷಗಳಿಂದ ಮಳೆಯಿಲ್ಲದೇ ಬೆಳೆನಷ್ಟವಾಗಿ ಕಂಗಾಲಾಗಿರುವ ರೈತರ ಮನೆ ಬಾಗಿಲಿಗೆ ಬಂದು ರಾಜ್ಯ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಎಸ್‌ಬಿಐ ಬ್ಯಾಂಕಿನ ಅಧಿಕಾರಿ ವರ್ಗ ಸಾಲ ಮರುಪಾವತಿ ಮಾಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಎಸ್‌ಬಿಐ ಬ್ಯಾಂಕಿಗೆ ಬುಧವಾರ ಮುತ್ತಿಗೆ ಹಾಕಿ ರೈತ ಸಂಘದವರು ಪ್ರತಿಭಟನೆ ನಡೆಸಿದರು.

Vijaya Karnataka 15 Mar 2019, 5:00 am
ಕೊರಟಗೆರೆ: ಮುಂಗಾರು ಮಳೆ ಕೊರತೆಯಿಂದ ಸತತ 8 ವರ್ಷಗಳಿಂದ ಮಳೆಯಿಲ್ಲದೇ ಬೆಳೆನಷ್ಟವಾಗಿ ಕಂಗಾಲಾಗಿರುವ ರೈತರ ಮನೆ ಬಾಗಿಲಿಗೆ ಬಂದು ರಾಜ್ಯ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಎಸ್‌ಬಿಐ ಬ್ಯಾಂಕಿನ ಅಧಿಕಾರಿ ವರ್ಗ ಸಾಲ ಮರುಪಾವತಿ ಮಾಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಎಸ್‌ಬಿಐ ಬ್ಯಾಂಕಿಗೆ ಬುಧವಾರ ಮುತ್ತಿಗೆ ಹಾಕಿ ರೈತ ಸಂಘದವರು ಪ್ರತಿಭಟನೆ ನಡೆಸಿದರು.
Vijaya Karnataka Web koratagere farmers protest in state bank of india
ಎಸ್‌ಬಿಐ ಬ್ಯಾಂಕಿಗೆ ರೈತರ ಮುತ್ತಿಗೆ


ಪಟ್ಟಣದ ನೂತನ ಎಸ್‌ಬಿಐ ಬ್ಯಾಂಕಿನ ವ್ಯವಸ್ಥಾಪಕಿ ಪೂರ್ಣಿಮಾ ಮತ್ತು ಕ್ಷೇತ್ರ ಅಧಿಕಾರಿ ಚೇತನ್‌ ಅವರು ವಿರೋಬನಹಳ್ಳಿ ಗ್ರಾಮದ ರೈತರಿಗೆ ಸಾಲ ಕಟ್ಟುವಂತೆ ನೋಟಿಸ್‌ ನೀಡದೇ ಸಾಲಮನ್ನಾ ಮಾಡುವ ದಾಖಲೆ ಪಡೆದು ಮತ್ತೊಮ್ಮೆ ರೈತರ ಮನೆಗೆ ಬಂದು ಸಾಲ ಮರುಪಾವತಿ ಮಾಡುವಂತೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ನೂರಾರು ಜನ ರೈತ ಮುಖಂಡರು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಕರ್ನಾಟಕ ರಾಜ್ಯ ರೈತ ಸಂಘದ ಕೊರಟಗೆರೆ ಘಟಕದ ಅಧ್ಯಕ್ಷ ಸಿದ್ಧರಾಜು ಮಾತನಾಡಿ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ಡಿಸಿಎಂ ಡಾ.ಜಿ.ಪರಮೇಶ್ವರ್‌ ಸಾಲ ಮರುಪಾವತಿಗೆ ರೈತರ ಮೇಲೆ ಒತ್ತಡ ತರದಂತೆ ಸೂಚನೆ ನೀಡಿದ್ದಾರೆ. ಆದರೆ ಡಿಸಿಎಂ ಕ್ಷೇತ್ರದ ಬ್ಯಾಂಕಿನ ಅಧಿಕಾರಿಗಳು ಮಾತ್ರ ರೈತರ ಮೇಲೆ ನಿರಂತರ ದಬ್ಬಾಳಿಕೆ ಮಾಡುತ್ತಿದ್ದಾರೆ. ಮತ್ತೊಮ್ಮೆ ರೈತರ ಮನೆ ಬಾಗಿಲಿಗೆ ಬ್ಯಾಂಕಿನ ಅಧಿಕಾರಿಗಳು ಹೊದರೆ ನಾವು ಬ್ಯಾಂಕಿನ ಮುಂದೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ವಿರೋಬನಹಳ್ಳಿ ರೈತ ಹನುಮಂತರೆಡ್ಡಿ ಹಾಗೂ ಮತ್ತಿತರ ರೈತರು ಮಾತನಾಡಿ, 8 ವರ್ಷಗಳಿಂದ ಮಳೆ ಬೆಳೆ ಇಲ್ಲದೇ ಜೀವನ ಸಾಗಿಸುವುದೇ ಕಷ್ಟವಾಗಿದೆ. ಮತ್ತೆ ಸಾಲ ತಿರಿಸೋದು ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ಕೊರಟಗೆರೆ ಘಟಕದ ಮುಖಂಡರಾದ ಹನುಮಂತರಾಯಪ್ಪ, ದಿನೇಶ್‌, ಚಂದ್ರಕಾಂತ, ಸಿದ್ದೇಗೌಡ, ಬಸವರಾಜು, ರಂಗೇಗೌಡ, ಹನುಮಂತಗೌಡ, ಮುರುಳೀಧರ, ಹನುಮಂತ, ಕೆಂಪರಾಜು, ರಂಗನಾಥ, ರಾಮರೆಡ್ಡಿ, ರಮೇಶ್‌, ದಯಾನಂದ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ