ಆ್ಯಪ್ನಗರ

ಗೋರಿ ಉಸಿರಾಡುತ್ತಿದೆ!...ಪವಾಡ ನೋಡಲು ಹರಿದು ಬಂದ ಜನಸಾಗರ

ಸಾಯಿಬಾಬಾ ಕಣ್ಣುಬಿಟ್ಟ ಕಥೆಯನ್ನು ಗಣಪತಿ ಹಾಲು ಕುಡಿದ ಕಥೆಯನ್ನು ನಾವು ಇದುವರೆಗೂ ನೋಡಿದ್ದೇವೆ, ಕೇಳಿದ್ದೇವೆ. ಆದರೆ, ಇದೀಗ ತುಮಕೂರಿನ ಕೆಸರುಮಡುವಿನಲ್ಲಿರುವ ದರ್ಗಾವೊಂದರಲ್ಲಿ ಗೋರಿ ಉಸಿರಾಡ್ತಿದೆ‌ ಎನ್ನುವುದು ಎಲ್ಲರಲ್ಲಿ ವಿಚಿತ್ರ ಮೂಡಿಸಿದೆ.

Vijaya Karnataka Web 24 Oct 2017, 3:31 pm
ತುಮಕೂರು: ಸಾಯಿಬಾಬಾ ಕಣ್ಣುಬಿಟ್ಟ ಕಥೆಯನ್ನು ಗಣಪತಿ ಹಾಲು ಕುಡಿದ ಕಥೆಯನ್ನು ನಾವು ಇದುವರೆಗೂ ನೋಡಿದ್ದೇವೆ, ಕೇಳಿದ್ದೇವೆ. ಆದರೆ, ಇದೀಗ ತುಮಕೂರಿನ ಕೆಸರುಮಡುವಿನಲ್ಲಿರುವ ದರ್ಗಾವೊಂದರಲ್ಲಿ ಗೋರಿ ಉಸಿರಾಡ್ತಿದೆ‌ ಎನ್ನುವುದು ಎಲ್ಲರಲ್ಲಿ ವಿಚಿತ್ರ ಮೂಡಿಸಿದೆ.
Vijaya Karnataka Web tomb breathes in tumkur
ಗೋರಿ ಉಸಿರಾಡುತ್ತಿದೆ!...ಪವಾಡ ನೋಡಲು ಹರಿದು ಬಂದ ಜನಸಾಗರ


ಸೆಪ್ಟೆಂಬರ್ ೪ ರಂದು ಈ ಪವಾಡ ನಡೆದಿದೆ. ಇದಕ್ಕಿದಂತೆ ಗೋರಿ ಉಸಿರಾಡುತ್ತಿರುವುದನ್ನು ನೋಡಿ ಸ್ಥಳೀಯರು ಆಶ್ವರ್ಯ ವ್ಯಕ್ತಪಡಿಸಿದ್ದಾರೆ. ಇನ್ನೂ ಅಲ್ಲಾಹುನ ಪ್ರಭಾವದಿಂದಲೇ ಇದೆಲ್ಲ ನಡೆಯುತ್ತಿದೆ ಎಂದು ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು, ವಿಸ್ಮಯ ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಜನರು ಹರಿದು ಬಂದಿದ್ದಾರೆ.

ಗೋರಿಯ ಮೇಲೆ ಹಾಕಿರುವ ಮೇಲ್ವಸ್ತ್ರ ಉಸಿರಾಡುವಾಗ ಚಲಿಸುವಂತೆ ಕಾಣಿಸುತ್ತಿದ್ದು, ಕೌತುಕಕ್ಕೆ ಕಾರಣವಾಗಿದೆ. ಸುಮಾರು 8 ಗಂಟೆಗಳ ಕಾಲ ಈ ಪವಾಡ ನಡೆದಿದ್ದು, ಕವಾಲಿ ಹಾಡು ಮುಗಿದ ನಂತರ ಉಸಿರಾಡುವ ಗೋರಿ ಕೂಡ ಶಾಂತವಾಗಿದೆ ಎನ್ನಲಾಗಿದೆ.

ಸ್ಥಳೀಯ ಶಾಸಕ ಸುರೇಶ್ ಗೌಡ ಕೂಡ ಭೇಟಿ ಕೊಟ್ಟು ಪವಾಡವನ್ನ ವೀಕ್ಷಿಸಿದ್ದಾರೆ. ಸ್ಥಳೀಯರೊಬ್ಬರು ಈ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ವಿಷಯ ಹೊರಬರಲಿಕ್ಕೆ ಕಾರಣವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ