Please enable javascript.ಅಪಘಾತ: ಡಿಸಿಪಿ ಪತ್ನಿ, ಚಾಲಕ ಸಾವು - ಅಪಘಾತ: ಡಿಸಿಪಿ ಪತ್ನಿ, ಚಾಲಕ ಸಾವು - Vijay Karnataka

ಅಪಘಾತ: ಡಿಸಿಪಿ ಪತ್ನಿ, ಚಾಲಕ ಸಾವು

ವಿಕ ಸುದ್ದಿಲೋಕ 3 Apr 2014, 5:39 am
Subscribe

ಉಡುಪಿ-ಕಾರ್ಕಳ ರಾಜ್ಯ ಹೆದ್ದಾರಿಯ ನೀರೆ ಗ್ರಾಮದ ನೀರೆಜೆಡ್ಡು ಎಂಬಲ್ಲಿ ಬುಧವಾರ ಮಧ್ಯಾಹ್ನ ನಡೆದ ಭೀಕರ ಅಪಘಾತದಲ್ಲಿ ಈ ಹಿಂದೆ ದ.ಕ.ದ ಎಸ್ಪಿಯಾಗಿದ್ದ ಮತ್ತು ಹಾಲಿ ಬೆಂಗಳೂರಿನ ಪಶ್ಚಿಮ ವಿಭಾಗದ ಡಿಸಿಪಿ ಲಾಬೂರಾಮ್ ಅವರ ಪತ್ನಿ ಗಾಯತ್ರಿ ದೇವಿ (35) ಮತ್ತು ಬೊಲೆರೋ ಚಾಲಕ ನಟರಾಜ್ (40) ಮೃತಪಟ್ಟಿದ್ದಾರೆ.

ಅಪಘಾತ: ಡಿಸಿಪಿ ಪತ್ನಿ, ಚಾಲಕ ಸಾವು
ಕಾರ್ಕಳ: ಉಡುಪಿ-ಕಾರ್ಕಳ ರಾಜ್ಯ ಹೆದ್ದಾರಿಯ ನೀರೆ ಗ್ರಾಮದ ನೀರೆಜೆಡ್ಡು ಎಂಬಲ್ಲಿ ಬುಧವಾರ ಮಧ್ಯಾಹ್ನ ನಡೆದ ಭೀಕರ ಅಪಘಾತದಲ್ಲಿ ಈ ಹಿಂದೆ ದ.ಕ.ದ ಎಸ್ಪಿಯಾಗಿದ್ದ ಮತ್ತು ಹಾಲಿ ಬೆಂಗಳೂರಿನ ಪಶ್ಚಿಮ ವಿಭಾಗದ ಡಿಸಿಪಿ ಲಾಬೂರಾಮ್ ಅವರ ಪತ್ನಿ ಗಾಯತ್ರಿ ದೇವಿ (35) ಮತ್ತು ಬೊಲೆರೋ ಚಾಲಕ ನಟರಾಜ್ (40) ಮೃತಪಟ್ಟಿದ್ದಾರೆ.

ಕೆಎಸ್‌ಆರ್‌ಟಿಸಿ ಸರಕಾರಿ ಬಸ್ ಪೊಲೀಸ್ ಇಲಾಖೆಯ ಬೊಲೆರೋ ಜೀಪಿಗೆ ಡಿಕ್ಕಿ ಹೊಡೆದು ಸಂಭವಿಸಿದ ದುರಂತದಲ್ಲಿ ಲಾಬೂ ರಾಮ್ ಅವರ ಇಬ್ಬರು ಮಕ್ಕಳ ಸಹಿತ ಇನ್ನೂ ಮೂವರು ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು ಪಶ್ಚಿಮ ವಲಯ ಎಸಿಪಿಯಾಗಿರುವ ಲಾಬೂರಾಮ್ ಅವರ ಪತ್ನಿ ಗಾಯತ್ರಿ ದೇವಿಯವರ ಸಂಬಂಧಿಕರ ಮನೆ ಉಡುಪಿಯಲ್ಲಿದ್ದು, ಮಕ್ಕಳಿಗೆ ರಜಾ ಇರುವುದರಿಂದ ಅವರು ಉಡುಪಿಗೆ ಆಗಮಿಸುತ್ತಿದ್ದರು. ಬೊಲೆರೋದಲ್ಲಿ ಡಾ. ಗಾಯತ್ರಿ ದೇವಿ, ಮಕ್ಕಳಾದ ಹರಿತಾ (15), ಪುನಿತಾ(13), ಮಾಗಡಿ ಮೂಲದ ಚಾಲಕ ನಟರಾಜ್ ಮತ್ತು ಇನ್ನೊಬ್ಬ ಚಾಲಕ ರಮೇಶ್ ದೇಸಾಯಿ ಇದ್ದರು.

ಬೆಂಗಳೂರಿನಿಂದ ಕಾರ್ಕಳ ಮಾರ್ಗವಾಗಿ ಉಡುಪಿ ಕಡೆಗೆ ತೆರಳುತ್ತಿದ್ದಾಗ ನೀರೆ ಗ್ರಾಮದ ಬಳಿ ಬುಧವಾರ ಮಧ್ಯಾಹ್ನ ಬೊಲೆರೊ ವಾಹನಕ್ಕೆ ಎದುರಿನಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಪೊಲೀಸ್ ವಾಹನ ಸಂಪೂರ್ಣ ನುಜ್ಜುಗುಜ್ಜಾಗಿದೆ. ಅಲ್ಲದೆ ಮತಪಟ್ಟ ಹಾಗೂ ಅದರಲ್ಲಿ ಪ್ರಯಾಣಿಸುತ್ತಿದ್ದ ಇತರರು ಕೂಡಾ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.

ಕಾರ್ಕಳದಿಂದ ಚಿಕ್ಕಮಗಳೂರಿಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಚಾಲಕ ಪ್ಯಾಟ್ರಿಕ್ ಲೂಯಿಸ್‌ನ ಅಜಾಗರೂಕತೆಯೇ ಘಟನೆಗೆ ಕಾರಣ ಎಂದು ಪ್ರಕರಣ ದಾಖಲಾಗಿದೆ. ಬಸ್ ಚಾಲಕ ಕೂಡಾ ಅಲ್ಪಸ್ವಲ್ಪ ಗಾಯಗೊಂಡು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಾಜಸ್ಥಾನ ಮೂಲದ ಲಾಬೂರಾಮ್ ಅವರು ಕಾರ್ಕಳದಲ್ಲಿ ಎಎಸ್‌ಪಿಯಾಗಿದ್ದರು ಮತ್ತು ಬಳಿಕ ದ.ಕ.ದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಗಾಯತ್ರಿ ಅವರು ಕೂಡಾ ರಾಜಸ್ಥಾನದವರು ಮತ್ತು ವೃತ್ತಿಯಲ್ಲಿ ವೈದ್ಯರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ