Please enable javascript.ರತ್ನಗಿರಿಯಲ್ಲಿ ಹಳಿ ತಪ್ಪಿದ ಗೂಡ್ಸ್ : ರೈಲು ಪ್ರಯಾಣ ವಿಳಂಬ - ರತ್ನಗಿರಿಯಲ್ಲಿ ಹಳಿ ತಪ್ಪಿದ ಗೂಡ್ಸ್ : ರೈಲು ಪ್ರಯಾಣ ವಿಳಂಬ - Vijay Karnataka

ರತ್ನಗಿರಿಯಲ್ಲಿ ಹಳಿ ತಪ್ಪಿದ ಗೂಡ್ಸ್ : ರೈಲು ಪ್ರಯಾಣ ವಿಳಂಬ

ವಿಕ ಸುದ್ದಿಲೋಕ 9 Oct 2014, 2:18 am
Subscribe

ಮಹಾರಾಷ್ಟ್ರದ ರತ್ನಗಿರಿಯಲ್ಲಿ ಗೂಡ್ಸ್ ರೈಲು ಹಳಿ ತಪ್ಪಿದ್ದರಿಂದ ಮಂಗಳೂರು, ಉಡುಪಿ ಕಡೆಯಿಂದ ಹೋಗುವ ಎಲ್ಲ ರೈಲುಗಳು 10 ಗಂಟೆಗೂ ಅಧಿಕ ತಡವಾಗಿ ಚಲಿಸುತ್ತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ರತ್ನಗಿರಿಯಲ್ಲಿ ಹಳಿ ತಪ್ಪಿದ ಗೂಡ್ಸ್ : ರೈಲು ಪ್ರಯಾಣ ವಿಳಂಬ
ಉಡುಪಿ: ಮಹಾರಾಷ್ಟ್ರದ ರತ್ನಗಿರಿಯಲ್ಲಿ ಗೂಡ್ಸ್ ರೈಲು ಹಳಿ ತಪ್ಪಿದ್ದರಿಂದ ಮಂಗಳೂರು, ಉಡುಪಿ ಕಡೆಯಿಂದ ಹೋಗುವ ಎಲ್ಲ ರೈಲುಗಳು 10 ಗಂಟೆಗೂ ಅಧಿಕ ತಡವಾಗಿ ಚಲಿಸುತ್ತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ಮಹಾರಾಷ್ಟ್ರಕ್ಕೆ ತೆರಳುವ ಮಂಗಳ ಎಕ್ಸ್‌ಪ್ರೆಸ್ ಉಡುಪಿಯಿಂದ ಮಂಗಳವಾರ ಸಂಜೆ 7 ಗಂಟೆಗೆ ದಾಟಿ ಹೋಗಬೇಕಿತ್ತು, ಉಡುಪಿಯಿಂದ 9 ಗಂಟೆಗೆ ಹೊರಟು, ಕುಂದಾಪುರದಲ್ಲೂ 1 ಗಂಟೆ ನಿಂತು ರಾತ್ರಿ 12 ಗಂಟೆ ಹೊತ್ತಿಗೆ ಅಂಕೋಲ ತಲುಪಿದೆ. ಆದರೆ, ಅಲ್ಲಿಂದ ಮುಂದೆ ಚಲಿಸದೆ ಇದ್ದಾಗ ಪ್ರಯಾಣಿಕರು ಆಕ್ರೋಶಿತರಾದರೂ ಏನೂ ಮಾಡುವಂತಿರಲಿಲ್ಲ. ಗೋವಾದ ಮಡಗಾಂವ್ ವರೆಗೆ ಆದರೂ ಹೋಗಿ ಎಂದು ಕೇಳಿಕೊಂಡರೂ ರೈಲು ಚಲಿಸಿಲ್ಲ.

ಬುಧವಾರ ಮತ್ಸ್ಯಗಂಧ ಎಕ್ಸ್‌ಪ್ರೆಸ್ ಬಂದಾಗ ಅದನ್ನು ಮುಂದಕ್ಕೆ ಹೋಗಲು ಅವಕಾಶ ನೀಡಿದಾಗ ಮಂಗಳ ಎಕ್ಸ್‌ಪ್ರೆಸ್‌ನ ಪ್ರಯಾಣಿಕರ ಸಿಟ್ಟು ಕಟ್ಟೆಯೊಡೆದು ಟ್ರಾಕ್‌ಗೆ ಇಳಿದು ಪ್ರತಿಭಟಿಸಿದರು. ಇದರಿಂದ ಮತ್ಸ್ಯಗಂಧವೂ ಚಲಿಸದಂತಾಯಿತು. ಆಗ ರೈಲ್ವೆ ಅಧಿಕಾರಿಗಳು ಮಂಗಳ ಎಕ್ಸ್‌ಪ್ರೆಸ್‌ಗೆ ಮುಂದಕ್ಕೆ ಚಲಿಸಲು ಅವಕಾಶ ನೀಡಿದ್ದರಿಂದ ಪ್ರಯಾಣಿಕರು ಸಂತೋಷಗೊಂಡರಾದರೂ ಅಂಕೋಲದಿಂದ ಕಾರವಾರಕ್ಕೆ ಹೋಗಿ ನಿಂತ ಮಂಗಳ ಎಕ್ಸ್‌ಪ್ರೆಸ್ ಬುಧವಾರ ಮಧ್ಯಾಹ್ನವರೆಗೂ ಮುಂದಕ್ಕೆ ಚಲಿಸಿಲ್ಲ. ಉಡುಪಿಯ ಛಾಯಾಗ್ರಾಹಕರಾದ ಸುಂದರ್, ಫೋಕಸ್ ರಾಘು ಮತ್ತು ತಂಡ ಕೂಡಾ ಇದೇ ರೈಲಿನಲ್ಲಿ ಚಲಿಸಿ ಸಿಕ್ಕಿಬಿದ್ದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ