Please enable javascript.3.76 ಲಕ್ಷ ಲೀ.ಹಾಲು ಸಂಗ್ರಹ: ದ.ಕ.ಒಕ್ಕೂಟ ದಾಖಲೆ - 3.76 lt milk - Vijay Karnataka

3.76 ಲಕ್ಷ ಲೀ.ಹಾಲು ಸಂಗ್ರಹ: ದ.ಕ.ಒಕ್ಕೂಟ ದಾಖಲೆ

ವಿಕ ಸುದ್ದಿಲೋಕ 7 Aug 2015, 5:15 am
Subscribe

ರಾಜ್ಯದ 13 ಒಕ್ಕೂಟಗಳಲ್ಲೇ ಗುಣಮಟ್ಟದ ಹಾಲು ಸಂಗ್ರಹಿಸುತ್ತಿರುವ (ಶೇ. 99.80) ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಪ್ರತಿ ದಿನ ಒಟ್ಟು 3.76 ಲಕ್ಷ ಲೀ.ಹಾಲು ಸಂಗ್ರಹದ ದಾಖಲೆ ಮಾಡಿದೆ ಎಂದು ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ ತಿಳಿಸಿದ್ದಾರೆ.

3 76 lt milk
3.76 ಲಕ್ಷ ಲೀ.ಹಾಲು ಸಂಗ್ರಹ: ದ.ಕ.ಒಕ್ಕೂಟ ದಾಖಲೆ
ಉಡುಪಿ: ರಾಜ್ಯದ 13 ಒಕ್ಕೂಟಗಳಲ್ಲೇ ಗುಣಮಟ್ಟದ ಹಾಲು ಸಂಗ್ರಹಿಸುತ್ತಿರುವ (ಶೇ. 99.80) ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಪ್ರತಿ ದಿನ ಒಟ್ಟು 3.76 ಲಕ್ಷ ಲೀ.ಹಾಲು ಸಂಗ್ರಹದ ದಾಖಲೆ ಮಾಡಿದೆ ಎಂದು ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ ತಿಳಿಸಿದ್ದಾರೆ.

ಅವರು ಹೋಟೆಲ್ ಕಿದಿಯೂರಿನ ಶೇಷಶಯನ ಸಭಾಂಗಣದಲ್ಲಿ ಒಕ್ಕೂಟದ ವತಿಯಿಂದ ನಡೆದ ಉಡುಪಿ ತಾಲೂಕಿನ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಭೆಯಲ್ಲಿ ಗುರುವಾರ ಈ ವಿಷಯ ತಿಳಿಸಿದರು.

ಮಂಗಳೂರಿನ ಕುಲಶೇಖರದಲ್ಲಿ 28 ಕೋಟಿ ರೂ. ವೆಚ್ಚದ ಫ್ಲೆಕ್ಸಿ ಪ್ಯಾಕ್ ಹಾಲಿನ ಘಟಕವು 9 ತಿಂಗಳಲ್ಲಿ ಆರಂಭವಾಗಲಿದೆ. ಟೆಟ್ರಾ ಪ್ಯಾಕ್ ಹಾಲು (ಗುಡ್ ಲೈಫ್) ಮೂರು ತಿಂಗಳ ಬಾಳಿಕೆ ಬಂದರೆ, ಫ್ಲೆಕ್ಸಿ ಪ್ಯಾಕ್ ಹಾಲು ಒಂದು ತಿಂಗಳ ಬಾಳಿಕೆ ಬರಲಿದೆ. ಒಕ್ಕೂಟದ ಹಾಲು ಸಂಗ್ರಹ ಪ್ರಮಾಣ ಶೇ. 14 ರಷ್ಟು ಏರಿಕೆಯ ನಿರೀಕ್ಷೆಯನ್ನೂ ಮೀರಿ ಶೇ. 18 ರಿಂದ 20ರಷ್ಟು ಸಾಧನೆಯಾಗಿದೆ ಎಂದರು.

ಬ್ರಹ್ಮಾವರದ ಉಪ್ಪೂರಿನಲ್ಲಿ 80ರಿಂದ 90 ಕೋಟಿ ರೂ.ವೆಚ್ಚದಲ್ಲಿ ನೂತನ ಡೈರಿ ನಿರ್ಮಾಣ ಟೆಂಡರ್ ಹಂತದಲ್ಲಿದೆ. 2014, 15 ರಲ್ಲಿ 593 ಕೋಟಿ ರೂ. ವ್ಯವಹಾರ ನಡೆಸಿದ ಒಕ್ಕೂಟವು 4.25 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಸಂಘಗಳ ಕಾರ್ಯದರ್ಶಿ, ಸಿಬ್ಬಂದಿಗಳಿಗೆ ಗುಣಮಟ್ಟದ ಹಾಲು ಸಂಗ್ರಹಕ್ಕಾಗಿ ಸರಕಾರದಿಂದ 1.59 ಕೋಟಿ ರೂ. ಹಾಗೂ ಒಕ್ಕೂಟದಿಂದ 1.06 ಕೋಟಿ. ರೂ. ಪ್ರೋತ್ಸಾಹ ಧನ ನೀಡಲಾಗಿದೆ.

30 ಲಕ್ಷ ಕೃತಕ ಗರ್ಭಧಾರಣೆಗಾಗಿ ಪ್ರೋತ್ಸಾಹ ಧನ ನೀಡಿದ್ದು , ವಿವಿಧ ಯೋಜನೆಗಳಡಿ ಹೈನುಗಾರರಿಗೆ 4.42 ಕೋಟಿ ರೂ. ಸಹಾಯಧನ ಒದಗಿಸಲಾಗಿದೆ. ಹೈನುಗಾರರಿಗೆ ಹೆಚ್ಚುವರಿಯಾಗಿ ಪ್ರೋತ್ಸಾಹ ರೂಪದಲ್ಲಿ 43ರಿಂದ 50 ಲಕ್ಷ ರೂ. ಪಾವತಿಸಲಾಗಿದೆ. ಹಾಲಿನ ಪುಡಿ ದರ ಕೆ. ಜಿ. ಗೆ 240 ರಿಂದ 140 ರೂ. ಗಳಿಗಿಳಿದು ಅನ್ಯ ಒಕ್ಕೂಟಗಳು ಸಂಕಷ್ಟಕ್ಕೀಡಾಗಿವೆ. ಹಾಲು ಪ್ರತಿ ಲೀಟರಿಗೆ(ಬಳ್ಳಾರಿ 23.85ರೂ.) 19ರಿಂದ 21 ರೂ. ನೀಡುತ್ತಿವೆ. ಆದರೆ ದಕ್ಷಿಣ ಕನ್ನಡ ಒಕ್ಕೂಟವು ಹೈನುಗಾರರು ಪೂರೈಸುವ ಹಾಲಿನ ದರ (24.37ರೂ.) ಕಡಿಮೆ ಮಾಡದು. 2006ರ ಬಳಿಕ ಈ ಬಾರಿ 1ಲಕ್ಷ ಲೀ. ಹಾಲನ್ನು ಪುಡಿಯಾಗಿ ಮಾರ್ಪಾಡು ಮಾಡಲಾಗಿದೆ. ಮಂಗಳೂರಿನಲ್ಲಿ ಹಾಲಿನ ಉತ್ಪನ್ನಗಳ ವಿಸ್ತರಣೆಗೂ ಉದ್ದೇಶಿಸಲಾಗಿದೆ. ಆ. 22ರಂದು ಒಕ್ಕೂಟದ ಮಹಾಸಭೆಯು ಕುಲಶೇಖರ ಚರ್ಚಿನ ಕಾರ್ಡಿಯಲ್ ಹಾಲ್‌ನಲ್ಲಿ ನಡೆಯಲಿದೆ ಎಂದರು.

ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ. ವಿ. ಸತ್ಯನಾರಾಯಣ, ನಿರ್ದೇಶಕರಾದ ಹದ್ದೂರು ರಾಜೀವ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ, ಟಿ. ಸೂರ್ಯ ಶೆಟ್ಟಿ, ಜಾನಕಿ ಹಂದೆ, ನವೀನ್‌ಚಂದ್ರ ಜೈನ್, ಉದಯ ಎಸ್. ಕೋಟ್ಯಾನ್, ವ್ಯವಸ್ಥಾಪಕ ಡಾ. ನಿತ್ಯಾನಂದ ಭಕ್ತ, ಡೈರಿ ವ್ಯವಸ್ಥಾಪಕ ರಾಜಶೇಖರ್ ಮೂರ್ತಿ ಉಪಸ್ಥಿತರಿದ್ದರು. ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಹಸ್ತಾಂತರಿಸಲಾಯಿತು. ಒಕ್ಕೂಟದ ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಸ್ವಾಗತಿಸಿದರು. ವಿಸ್ತರಣಾಧಿಕಾರಿ ಸುಧಾಕರ್ ಹಾಗೂ ಸಹಾಯಕ ವ್ಯವಸ್ಥಾಪಕ ಶಿವಪ್ಪ ನಿರೂಪಿಸಿದರು. ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ