Please enable javascript.ಕಾರವಾರ ಚಲೋಕ್ಕೆ 3000 ಜನ - 3000 people to karwar chalo - Vijay Karnataka

ಕಾರವಾರ ಚಲೋಕ್ಕೆ 3000 ಜನ

Vijaya Karnataka 31 Jan 2019, 5:00 am
Subscribe

ಭಟ್ಕಳ: ಜಿಲ್ಲಾಡಳಿತದಿಂದ ಉತ್ತರ ಕನ್ನಡ ಜಿಲ್ಲೆಯ ಅತಿಕ್ರಮಣದಾರರಿಗೆ ಅನ್ಯಾಯವಾಗಿದ್ದು, ಭಟ್ಕಳದಿಂದ 3000 ಅರಣ್ಯ ಅತಿಕ್ರಮಣದಾರರು ಫೆ.6ರಂದು ನಡೆಯುವ ಕಾರವಾರ ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಭಟ್ಕಳ ಅರಣ್ಯ ಅತಿಕ್ರಮಣ ಹೋರಾಟ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ ಹೇಳಿದ್ದಾರೆ.

3000 people to karwar chalo
ಕಾರವಾರ ಚಲೋಕ್ಕೆ 3000 ಜನ
ಭಟ್ಕಳ: ಜಿಲ್ಲಾಡಳಿತದಿಂದ ಉತ್ತರ ಕನ್ನಡ ಜಿಲ್ಲೆಯ ಅತಿಕ್ರಮಣದಾರರಿಗೆ ಅನ್ಯಾಯವಾಗಿದ್ದು, ಭಟ್ಕಳದಿಂದ 3000 ಅರಣ್ಯ ಅತಿಕ್ರಮಣದಾರರು ಫೆ.6ರಂದು ನಡೆಯುವ ಕಾರವಾರ ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಭಟ್ಕಳ ಅರಣ್ಯ ಅತಿಕ್ರಮಣ ಹೋರಾಟ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ ಹೇಳಿದ್ದಾರೆ.

ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನ ಮಂತ್ರಿ ಮನಮೋಹನ ಸಿಂಗ್‌ ಪ್ರಧಾನಿಯಾಗಿದ್ದ ಕಾಲದಲ್ಲಿ ಅತಿಕ್ರಮಣದಾರರಿಗೆ ನ್ಯಾಯ ಕೊಡಿಸಲು ಅರಣ್ಯ ಹಕ್ಕು ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಆದರೆ ಸಮಿತಿಯ ಸದಸ್ಯರಿಗೆ ಸರಿಯಾದ ತರಬೇತಿ, ಮಾರ್ಗದರ್ಶನ ಸಿಗದ ಕಾರಣ ಅವರಿಗೆ ಅರಣ್ಯ ಹಕ್ಕು ಕಾನೂನಿನ ಬಗ್ಗೆ ತಿಳಿವಳಿಕೆ ಇಲ್ಲದಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಾಗೋಡು ತಿಮ್ಮಪ್ಪ ಮುಂದಾಳತ್ವದಲ್ಲಿ ಶೇ.70ಕ್ಕೂ ಅಧಿಕ ಅತಿಕ್ರಮಣದಾರರಿಗೆ ಭೂಮಿಯ ಹಕ್ಕುಪತ್ರವನ್ನು ನೀಡಲಾಗಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನೀಡಿಲ್ಲ. ಅರಣ್ಯ ಅತಿಕ್ರಮಣದಾರರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡದಂತೆ ಅಧಿಕಾರಿಗಳು ಅರ್ಜಿಗಳನ್ನು ತಿರಸ್ಕರಿಸಿ ಮಾಹಿತಿಯನ್ನು ಗೌಪ್ಯವಾಗಿಡುತ್ತಿದ್ದಾರೆ. ಇದನ್ನು ಭಟ್ಕಳ ಅರಣ್ಯ ಅತಿಕ್ರಮಣ ಹೋರಾಟ ಸಮಿತಿ ಬಲವಾಗಿ ಖಂಡಿಸುತ್ತದೆ ಎಂದು ಹೇಳಿದರು.

ರಿಜ್ವಾನ್‌, ಮುನೀರ್‌, ಸುಲೇಮಾನ್‌, ಅಜಿತ್‌ ಬಂಡಿಗೇರಿ, ದೇವರಾಜ್‌, ಶ್ರೀಧರ ನಾಯ್ಕ, ನಾಗೇಶ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ