Please enable javascript.ಜಿಲ್ಲೆಗೆ 45 ಹೊಸ ಸಾರಿಗೆ ಬಸ್‌ - 45 new transport buses for district - Vijay Karnataka

ಜಿಲ್ಲೆಗೆ 45 ಹೊಸ ಸಾರಿಗೆ ಬಸ್‌

Vijaya Karnataka 29 Dec 2019, 5:00 am
Subscribe

ಶಿರಸಿ : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉತ್ತರ ಕನ್ನಡ ವಿಭಾಗಕ್ಕೆ 45 ಹೊಸ ಬಸ್‌ಗಳನ್ನು ನೀಡಲಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ವಿ.ಎಸ್‌.ಪಾಟೀಲ್‌ ತಿಳಿಸಿದರು.

28SRS6C_26
ಶಿರಸಿಯಲ್ಲಿಸಾರಿಗೆ ಸಂಸ್ಥೆಯ ಹೊಸ ಬಸ್‌ಗಳನ್ನು ವಿ.ಎಸ್‌.ಪಾಟೀಲ್‌ ತಾವೇ ನಿಲ್ದಾಣದ ಅನತಿ ದೂರ ಚಲಾಯಿಸಿ ಗಮನ ಸೆಳೆದರು.
ಶಿರಸಿ : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉತ್ತರ ಕನ್ನಡ ವಿಭಾಗಕ್ಕೆ 45 ಹೊಸ ಬಸ್‌ಗಳನ್ನು ನೀಡಲಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ವಿ.ಎಸ್‌.ಪಾಟೀಲ್‌ ತಿಳಿಸಿದರು.

ನಗರದ ಹಳೆ ಬಸ್‌ ನಿಲ್ದಾಣದಲ್ಲಿಶನಿವಾರ ಶಿರಸಿ-ಮುಂಡಗೊಡ-ಹುಬ್ಬಳ್ಳಿ ಮಾರ್ಗದಲ್ಲಿಎರಡು ಹೊಸ ಬಸ್‌ಗಳ ಸಂಚಾರಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಜಿಲ್ಲೆಯ ನಗರ ಸಾರಿಗೆ ವ್ಯವಸ್ಥೆಗೆ 12 ಹೊಸ ಡಬಲ್‌ ಡೋರ್‌ ಬಸ್‌ಗಳನ್ನು ನೀಡಲಾಗುತ್ತದೆ ಎಂದರು.

ವಾಕರಸಾ ಸಂಸ್ಥೆಯಡಿ 9 ವಿಭಾಗಗಳು ಬರುತ್ತವೆ. ಆ ಎಲ್ಲವಿಭಾಗಗಳಿಗೂ ಇದೇ ರೀತಿ ಹೊಸ ಬಸ್‌ ಸೌಲಭ್ಯ ಒದಗಿಸಲಾಗುತ್ತದೆ. ಸಂಸ್ಥೆಗೆ ಪ್ರತಿ ದಿನ 50 ಲಕ್ಷ ರೂ. ಹಾನಿಯಾಗುತ್ತಿದೆ. ಶಿರಸಿ ಡಿಪೋ ವ್ಯಾಪ್ತಿಯಲ್ಲಿತಿಂಗಳಿಗೆ 2 ಲಕ್ಷ ರೂ. ಹಾನಿಯುಂಟಾಗುತ್ತಿದೆ ಎಂದು ವಿವರಿಸಿದರು.

ಬಸ್‌ ನಿಲ್ದಾಣದಲ್ಲಿಸಿಸಿಟಿವಿ ಅಳವಡಿಕೆ ಟೆಂಡರ್‌ ಪ್ರಕ್ರಿಯೆ ಬೆಂಗಳೂರಿನ ಹಂತದಲ್ಲಿನಡೆಯುತ್ತದೆ. ಆದರೆ ಅಲ್ಲಿಟೆಂಡರ್‌ ಕರೆದರೂ ಯಾರೂ ಹಾಕದೇ ಇರುವುದರಿಂದ ವಿಳಂಬವಾಗಿದೆ. ಹೀಗಾಗಿ ಅದರಲ್ಲಿನ ನಿಯಮ ಸರಳೀಕರಣಗೊಳಿಸುವಂತೆ ಮನವಿ ಮಾಡಲಾಗಿದೆ ಎಂದು ಪಾಟೀಲ್‌ ತಿಳಿಸಿದರು.

ಬಸ್‌ ಓಡಿಸಿದ ಪಾಟೀಲ್‌ : ಹೊಸ ಬಸ್‌ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿದ ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್‌.ಪಾಟೀಲ್‌ ಹೊಸ ಬಸ್‌ ಏರಿ ಡ್ರೈವರ್‌ ಸೀಟ್‌ನಲ್ಲಿಕುಳಿತು ನಿಲ್ದಾಣದ ಅನತಿ ದೂರ ಬಸ್‌ ಚಲಾಯಿಸಿದರು. ಈ ಸಂದರ್ಭದಲ್ಲಿಸೇರಿದ್ದ ಪ್ರಯಾಣಿಕರು ಕುತೂಹಲದಿಂದ ವೀಕ್ಷಿಸಿದರು.

ಹೊಸ ಬಸ್‌ ನಿಲ್ದಾಣ ನಿರ್ಮಾಣ : ಶಿರಸಿಯ ಹಳೆ ಬಸ್‌ ನಿಲ್ದಾಣ ಕೆಡವಿ ಹೊಸ ಬಸ್‌ ನಿಲ್ದಾಣವನ್ನು ಇಲ್ಲೇ ಅಂಚಿನಲ್ಲಿಕಟ್ಟಲಾಗುತ್ತದೆ. ಇದಕ್ಕಾಗಿ ಈಗಾಗಲೇ ಕ್ರಿಯಾಯೋಜನೆ ಕಳುಹಿಸಿದ್ದೇವೆ. ಅನುದಾನ ದೊರೆತರೆ ಕೆಲವೇ ತಿಂಗಳಲ್ಲಿಕೆಲಸ ಆರಂಭಿಸುತ್ತೇವೆ ಎಂದು ವಾಕರಸಾ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕ ಹೆಗಡೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ