ಆ್ಯಪ್ನಗರ

ಕ್ರಿಕೆಟ್‌:ಅಂಕೋಲಾ ಪೊಲೀಸ್‌ ಠಾಣೆ ಚಾಂಪಿಯನ್‌

ಅಂಕೋಲಾ : ಬೇಲೆಕೇರಿಯ ಕರಾವಳಿ ಕಾವಲು ಪೊಲೀಸ್‌ ಪಡೆಯ ಆಶ್ರಯದಲ್ಲಿಸಂಘಟಿಸಿದ್ದ ಸೌಹಾರ್ದ ಕ್ರಿಕೆಟ್‌ ಪಂದ್ಯಾವಳಿ-2020ರಲ್ಲಿಅಂಕೋಲಾ ಪೊಲೀಸ್‌ ಠಾಣೆ ಚಾಂಪಿಯನ್‌ ಟ್ರೋಫಿ ಪಡೆದುಕೊಂಡರೆ, ಅಂಕೋಲಾದ ಪತ್ರಕರ್ತರ ತಂಡ ರನ್ನರ್ಸ್ ಅಪ್‌ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

Vijaya Karnataka 6 Jan 2020, 5:00 am
ಅಂಕೋಲಾ : ಬೇಲೆಕೇರಿಯ ಕರಾವಳಿ ಕಾವಲು ಪೊಲೀಸ್‌ ಪಡೆಯ ಆಶ್ರಯದಲ್ಲಿಸಂಘಟಿಸಿದ್ದ ಸೌಹಾರ್ದ ಕ್ರಿಕೆಟ್‌ ಪಂದ್ಯಾವಳಿ-2020ರಲ್ಲಿಅಂಕೋಲಾ ಪೊಲೀಸ್‌ ಠಾಣೆ ಚಾಂಪಿಯನ್‌ ಟ್ರೋಫಿ ಪಡೆದುಕೊಂಡರೆ, ಅಂಕೋಲಾದ ಪತ್ರಕರ್ತರ ತಂಡ ರನ್ನರ್ಸ್ ಅಪ್‌ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
Vijaya Karnataka Web cricket angola police station champion
ಕ್ರಿಕೆಟ್‌:ಅಂಕೋಲಾ ಪೊಲೀಸ್‌ ಠಾಣೆ ಚಾಂಪಿಯನ್‌


ಬೇಲೇಕೇರಿ ಬಂದರಿನ ಮೈದಾನದಲ್ಲಿನಡೆದ ಪಂದ್ಯಾವಳಿಯಲ್ಲಿಒಟ್ಟು 4 ತಂಡಗಳು ಭಾಗವಹಿಸಿದ್ದವು. ಅಂಕೋಲಾ ಪೊಲೀಸ್‌ ಠಾಣೆ, ಕರಾವಳಿ ಕಾವಲು ಪೊಲೀಸ್‌ ಪಡೆ, ಪತ್ರಕರ್ತರ ಸಂಘ ಅಂಕೋಲಾ ಮತ್ತು ಕರಾವಳಿ ನಿಯಂತ್ರಣ ದಳ, ತಂಡವು ಪಾಲ್ಗೊಂಡಿದ್ದವು.

ಪತ್ರಕರ್ತರ ಸಂಘ ಹಾಗೂ ಕರಾವಳಿ ನಿಯಂತ್ರಣ ದಳದ ನಡುವೆ ನಡೆದ ಪ್ರಥಮ ಪಂದ್ಯದಲ್ಲಿಪತ್ರಕರ್ತರ ಸಂಘ ಜಯಗಳಿಸಿ ಫೈನಲ್‌ ಪ್ರವೇಶಿಸಿತು. ಬಳಿಕ ನಡೆದ ಅಂಕೋಲಾ ಪೊಲೀಸ್‌ ಠಾಣೆ, ಕರಾವಳಿ ಕಾವಲು ಪೊಲೀಸ್‌ ಪಡೆ ನಡುವೆ ನಡೆದ ಪಂದ್ಯದಲ್ಲಿಅಂಕೋಲಾ ಪೊಲೀಸ್‌ ಠಾಣೆ ಫೈನಲ್‌ ಪ್ರವೇಶಿಸಿತು.

ಪತ್ರಕರ್ತ ವಿಧ್ಯಾದರ ಮೊರಬಾ ನಾಯಕತ್ವದ ಪತ್ರಕರ್ತರ ತಂಡ ಮತ್ತು ಪಿಎಸ್‌ಐ ಸಂಪತಕುಮಾರ ನಾಯಕತ್ವದ ಅಂಕೋಲಾ ಪೊಲೀಸ ತಂಡದ ನಡುವಿನ ಅಂತಿಮ ಹಣಾಹಣಿಯಲ್ಲಿಪೊಲೀಸ್‌ ತಂಡ ಜಯ ಗಳಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಪೊಲೀಸ್‌ ತಂಡದ ಶಿವಾನಂದ ಬೆಸ್ಟ ಬೌಲರ್‌, ಪತ್ರಕರ್ತರ ತಂಡದ ಶಶಿಧರ ಬೆಸ್ಟ್‌ ಬ್ಯಾಟ್ಸಮನ್‌ ಮತ್ತು ಪೊಲೀಸ್‌ ತಂಡದ ಸಂತೋಷ ಆಲ್‌ರೌಂಡರ್‌ ಆಟಗಾರ ಪ್ರಶಸ್ತಿ ಪಡೆದರು.

ಕರಾವಳಿ ಕಾವಲು ಪೊಲೀಸ್‌ ಪಡೆಯ ಸಿಪಿಐ ಶ್ರೀಧರ ಎಸ್‌.ಆರ್‌. ಮಾತನಾಡಿ, ನಾವೆಲ್ಲಆರೋಗ್ಯದಿಂದಿರಲು ಇಂತಹ ಕ್ರೀಡಾ ಚಟುವಟಿಕೆಗಳಲ್ಲಿಸಕ್ರೀಯರಾಗಬೇಕು. ಆಗ ಮಾತ್ರ ನಾವು ಉತ್ತಮ ದೈಹಿಕ ಆರೋಗ್ಯ ಹೊಂದುವುದರೊಂದಿಗೆ ಸ್ಥಿರವಾದ, ಧನಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಲು ಸಾಧ್ಯ ಎಂದರು.

ಅಂಕೋಲಾ ಪೊಲೀಸ್‌ ಠಾಣೆಯ ಪಿಎಸ್‌ಐ ಸಂಪತಕುಮಾರ ಮಾತನಾಡಿ, ಪ್ರತಿಯೊಬ್ಬರೂ ಪ್ರತಿನಿತ್ಯ ತಮ್ಮ ಕೆಲಸದ ಒತ್ತಡದಲ್ಲಿರುವುದರಿಂದ ಕ್ರೀಡೆಗಳಲ್ಲಿಭಾಗವಹಿಸುವುದರಿಂದ ಮಾನಸಿಕವಾಗಿ ಒತ್ತಡ ಕಡಿಮೆಯಾಗುತ್ತದೆ ಎಂದರು.

ವಾಸುದೇವ ಗುನಗಾ, ಅರುಣ ಶೆಟ್ಟಿ, ವಿದ್ಯಾಧರ ಮೊರಬಾ, ಸುಭಾಷ ಕಾರೇಬೈಲ, ಮಂಜುನಾಥ ಇಟಗಿ, ಪ್ರೊಬೇಷನರಿ ಪಿಎಸ್‌ಐಗಳಾದ ಬಸವರಾಜ್‌ ಎನ್‌.ಎಂ., ಮಹಾಂತೇಶ ಕುಂಬಾರ, ಪೊಲೀಸ ಸಿಬ್ಬಂದಿಯಾದ ಮೋಹನದಾಸ ಶೇಣ್ವಿ, ಪರಮೇಶ ಮುಂತಾದವರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ