ಆ್ಯಪ್ನಗರ

‘ತಾಯಿ ಸಾಕ್ಷಿ’ ಕೃತಿ ಲೋಕಾರ್ಪಣೆ

ಅಂಕೋಲಾ : ನಾಟಕಗಳು ನಿರಂತರವಾಗಿ ಉಳಿಯಬೇಕು. ನಾಟಕದ ಮೂಲಕ ಜನರ ಮನಪರಿವರ್ತನೆ, ಮೌಢ್ಯತೆಯನ್ನು ದೂರ ಮಾಡುವ ಆಶಯವಾಗಬೇಕು ಎಂದು ನಾಮಾಂಕಿತ ಕಥೆಗಾರ ಡಾ. ಆರ್‌.ಜಿ. ಗುಂದಿ ಹೇಳಿದರು.

Vijaya Karnataka 30 Nov 2018, 5:00 am
ಅಂಕೋಲಾ : ನಾಟಕಗಳು ನಿರಂತರವಾಗಿ ಉಳಿಯಬೇಕು. ನಾಟಕದ ಮೂಲಕ ಜನರ ಮನಪರಿವರ್ತನೆ, ಮೌಢ್ಯತೆಯನ್ನು ದೂರ ಮಾಡುವ ಆಶಯವಾಗಬೇಕು ಎಂದು ನಾಮಾಂಕಿತ ಕಥೆಗಾರ ಡಾ. ಆರ್‌.ಜಿ. ಗುಂದಿ ಹೇಳಿದರು.
Vijaya Karnataka Web KWR-29ANK2


ತಾಲೂಕಿನ ಹಾರವಾಡದ ಮುಡೆಕಟ್ಟಾದಲ್ಲಿ ಶ್ರೀ ಸನ್ಯಾಸಿದೇವರ ರಥೋತ್ಸವ ಮತ್ತು ದಹಿಂಕಾಲ ಉತ್ಸವ ಸಂದರ್ಭದಲ್ಲಿ ಸುಜಿತ ನಾಯ್ಕ ಅವರ್ಸಾ ಅವರ 8ನೇ ಕೃತಿ 'ತಾಯಿ ಸಾಕ್ಷಿ' ಲೋಕಾರ್ಪಣೆ ಮತ್ತು ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷ ತೆವಹಿಸಿ ಸಿರಿಗನ್ನಡ ಜಾನಪದ ಪರಿಷತ್‌ ಪ್ರಧಾನ ಕಾರ್ಯದರ್ಶಿ ಜಗದೀಶ ಜಿ. ನಾಯಕ ಹೊಸ್ಕೇರಿ ಮಾತನಾಡಿ, ಸ್ವತಃ ನಟ, ನಾಟಕಕಾರರಾಗಿ ಜನಪ್ರಿಯತೆ ಪಡೆದಿರುವ ಸುಜಿತ ನಾಯ್ಕ ಅಂಕೋಲೆಯ ರಂಗಭೂಮಿ ಚರಿತ್ರೆಗೆ ಮಹತ್ವದ ಕೊಡುಗೆಗಳನ್ನು ನೀಡುತ್ತಿದ್ದು, ಅವರ ನಾಟಕಗಳು ಬೆಳಕು ಕಾಣುತ್ತಿರುವುದು ರಂಗಪ್ರಿಯರಿಗೆ ಸಂತಸ ಹಾಗೂ ಸಂಭ್ರಮದ ಸಂಗತಿಯಾಗಿದೆ ಎಂದರು.

ಅವರ್ಸಾ ಗ್ರಾಮ ಪಂಚಾಯತ ಉಪಾಧ್ಯಕ್ಷ ರವಿ ವಿ. ಖಾರ್ವಿ, ಪರ್ಶಿಯನ್‌ ಬೋಟ್‌ನ ಪ್ರಮೂಖ ಜಯ ಬಾನಾವಳಿಕರ, ಹಿರಿಯ ರಂಗಭೂಮಿ ಕಲಾವಿದ ನಾಗೇಂದ್ರ ಅಂಚೇಕರ, ಸಾಮಾಜಿಕ ಕಾರ್ಯಕರ್ತ ಸುಧಾಕರ ಎಸ್‌. ಶೆಟ್ಟಿ, ಹಾರವಾಡ ಗ್ರಾ.ಪಂ. ಮಾಜಿ ಅಧ್ಯಕ್ಷ ಉಮೇಶ ಕಾಂಚನ್‌, ಲೇಖಕ ಸುಜಿತ ಎನ್‌. ನಾಯ್ಕ, ಶ್ರೀ ಸನ್ಯಾಸಿ ದೇವಸ್ಥಾನದ ಕಮಿಟಿಯ ಪಧಾಧಿಕಾರಿಗಳು ಉಪಸ್ಥಿತರಿದ್ದರು. ಕಲಾವಿದ ನಾಗರಾಜ ಜಾಂಬಾವಳಿಕರ ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ