Please enable javascript.ವಸ್ತು ಸಂಗ್ರಹಾಲಯ: ಮಂಗಳೂರು, ಕಾರವಾರದಲ್ಲಿ ಸ್ಥಾಪಿಸಲು ಮನವಿ - Museum: Mangalore, Karwar Install - Vijay Karnataka

ವಸ್ತು ಸಂಗ್ರಹಾಲಯ: ಮಂಗಳೂರು, ಕಾರವಾರದಲ್ಲಿ ಸ್ಥಾಪಿಸಲು ಮನವಿ

ವಿಕ ಸುದ್ದಿಲೋಕ 25 Jul 2015, 5:00 am
Subscribe

ಕಾರವಾರ:ಐಎನ್‌ಎಸ್ ವಿರಾಟ್ ಏರ್ ಕ್ರಾಪ್ಟ್ ಕ್ಯಾರಿಯರ್ ವಸ್ತು ಸಂಗ್ರಹಾಲಯವನ್ನು ರಾಜ್ಯದ ಮಂಗಳೂರು ಅಥವಾ ಕಾರವಾರದಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು

museum mangalore karwar install
ವಸ್ತು ಸಂಗ್ರಹಾಲಯ: ಮಂಗಳೂರು, ಕಾರವಾರದಲ್ಲಿ ಸ್ಥಾಪಿಸಲು ಮನವಿ
ಕಾರವಾರ:ಐಎನ್‌ಎಸ್ ವಿರಾಟ್ ಏರ್ ಕ್ರಾಪ್ಟ್ ಕ್ಯಾರಿಯರ್ ವಸ್ತು ಸಂಗ್ರಹಾಲಯವನ್ನು ರಾಜ್ಯದ ಮಂಗಳೂರು ಅಥವಾ ಕಾರವಾರದಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಆಳ್ವ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಗುರುವಾರ ಪತ್ರ ಬರೆದು ಕೋರಿದ್ದಾರೆ.

ಐಎನ್‌ಎಸ್ ವಿರಾಟ ಏರ್ ಕ್ರಾಪ್ಟ್ ಕ್ಯಾರಿಯರ್ ವಸ್ತು ಸಂಗ್ರಹಾಲಯ ಸ್ಥಾಪಿಸುವುದು ರಾಜ್ಯಕ್ಕೆ ಹೆಮ್ಮೆಯ ಜೊತೆಗೆ ಪ್ರತಿಷ್ಠೆಯ ವಿಷಯವಾಗಿದೆ.ಅದರಲ್ಲೂ ಮಂಗಳೂರು ಅಥವಾ ಕಾರವಾರದಲ್ಲಿ ಸ್ಥಾಪಿಸಲು ಆದ್ಯತೆಯ ಮೇಲೆ ಪರಿಗಣಿಸಬೇಕು ಎಂದು ಹೇಳಿದ್ದಾರೆ.

ಐಎನ್‌ಎಸ್ ವಿರಾಟ್ ಏರ್ ಕ್ರಾಪ್ಟರ್ ಯುದ್ಧ ವಿಮಾನ ವಾಹಕ ಹಡಗು ಬ್ರಿಟಿಷರಿಂದ ನಿರ್ಮಿಸಲ್ಪಟ್ಟಿದ್ದು,ಭಾರತದ ನೌಕಾ ಕಾರ್ಯಾಚರಣೆಯಲ್ಲಿ ವಿಶ್ವದ ಸೇವೆಯಲ್ಲಿ ಅತ್ಯಂತ ಹಳೆಯ ಯುದ್ಧವಾಹಕ ನೌಕೆಯಾಗಿದೆ. ಈ ನೌಕೆಯು 1959 ರಲ್ಲಿ ತನ್ನ ಸೇವೆ ಆರಂಭಿಸಿದ್ದು, ಸುಮಾರು 56 ವರ್ಷಗಳ ಸುದೀರ್ಘ ಸೇವೆಯಿಂದ ಮುಂದಿನ ವರ್ಷ ಕಾರ್ಯಾಚರಣೆಯಿಂದ ವಿಮುಕ್ತಿಗೊಳಿಸಲು ಕೇಂದ್ರ ಸರಕಾರ ನಿರ್ಣಯ ಕೈಗೊಂಡಿದೆ. ಅಲ್ಲದೇ ಇದನ್ನು ವಸ್ತುಸಂಗ್ರಹಾಲಯವನ್ನಾಗಿ ಮಾರ್ಪಡಿಸಲು ಸರಕಾರ ಯೋಜನೆ ರೂಪಿಸಿದೆ.

ಈಗಾಗಲೇ 2016 ರಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಿರುವ ಈ ನೌಕೆಯ ಮ್ಯೂಜಿಯಮ್ ನಿರ್ಮಾಣದ ಕುರಿತು ರಾಜ್ಯದ ಮುಖ್ಯ ಕಾರ್ಯದರ್ಶಿಯವರು ಮಂಗಳೂರಿನಲ್ಲಿ ಐಎನ್‌ಎಸ್ ವಿರಾಟ್ ಏರ್‌ಕ್ರಾಪ್ಟ್ ಕ್ಯಾರಿಯರ್ ಮ್ಯೂಜಿಯಮ್ ಆಗಿ ಪರಿವರ್ತಿಸುವ ಕುರಿತು ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಇದಕ್ಕೆ ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ. ಹಾಗಾಗಿ ರಾಜ್ಯದ ಮಂಗಳೂರು ಅಥವಾ ಕಾರವಾರದಲ್ಲಿ ಈ ಮ್ಯೂಜಿಯಮ್ ಸ್ಥಾಪಿಸಲು ಸಂಪೂರ್ಣವಾದ ಆಸಕ್ತಿ ತೋರಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ