Gandhada Gudi: ಕಡಲಾಳದಲ್ಲೂ ಅಪ್ಪು ಹವಾ; ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್‌ ಮೂಲಕ ಗಂಧದಗುಡಿ ಪ್ರಚಾರ

ಉತ್ತರ ಕನ್ನಡ: ಸಮುದ್ರದ ಆಳದಲ್ಲಿ ಕಡಲಜೀವರಾಶಿಗಳ ನಡುವೆ ಅಪ್ಪು ಅಭಿನಯದ ಗಂಧದ ಗುಡಿ ಡ್ಯಾಕ್ಯುಮೆಂಟರಿ ಪೋಸ್ಟರ್ ಹಿಡಿದು ಅಭಿಮಾನಿಗಳಿಂದ ವಿಭಿನ್ನವಾಗಿ ಪ್ರಚಾರ ನಡೆಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದ ನೇತ್ರಾಣಿ ದ್ವೀಪದ ಬಳಿ ಸ್ಕೂಬಾ ಡೈವಿಂಗ್ ಮಾಡಿ ಗಂಧದಗುಡಿ ಪ್ರಚಾರ ಮಾಡಲಾಗಿದೆ. ನೇತ್ರಾಣಿ ಅಡ್ವೆಂಚರ್ಸ್‌ನಿಂದ ನಡೆದ ಸ್ಕೂಬಾ ಡೈವಿಂಗ್ ವೇಳೆ ಸಾಗರದೊಳಗೆ ಅಪ್ಪು ಅಭಿಮಾನಿಗಳು ಗಂಧದಗುಡಿ ಪೋಸ್ಟರ್ ಹಿಡಿದು ಪ್ರಚಾರ ಮಾಡಿದ್ದಾರೆ.

ನೇತ್ರಾಣಿಯಲ್ಲಿ ಖುದ್ದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸ್ಕೂಬಾ ಡೈವಿಂಗ್ ಮಾಡಿದ್ದರು. ಗಂಧದಗುಡಿ ಚಿತ್ರೀಕರಣ ಸಂದರ್ಭದಲ್ಲಿ ಆಗಮಿಸಿದ್ದ ಅಪ್ಪು, ಸ್ಕೂಬಾ ಡೈವ್ ಮಾಡಿ ಎಂಜಾಯ್ ಮಾಡಿದ್ರು. 2021ರ ಫೆಬ್ರವರಿ ಮೊದಲ ವಾರದಲ್ಲಿ ಮುರ್ಡೇಶ್ವರಕ್ಕೆ ಆಗಮಿಸಿ ಶೂಟಿಂಗ್ ಮಾಡಿದ್ರು. ಈಗ ಗಂಧದಗುಡಿ ಬಿಡುಗಡೆಗೆ ಸಿದ್ಧವಾಗಿದ್ದು, ಅಪ್ಪು ನೆನಪಿನಲ್ಲಿ ಮುರ್ಡೇಶ್ವರದಲ್ಲಿ ಗಂಧದಗುಡಿ ಪೋಸ್ಟರ್ ಹಿಡಿದು ಸ್ಕೂಬಾ ಡೈವ್ ಮಾಡಲಾಗಿದೆ.

Vijaya Karnataka Web 23 Oct 2022, 4:11 pm
Loading ...
ಮುಂದಿನ ವಿಡಿಯೋ