ಆ್ಯಪ್ನಗರ

Uttara Kannada: ‘ಕೈ’ ತೊರೆದ ಘೋಟ್ನೇಕರ್​ಗೆ ಬಿಜೆಪಿ ಗಾಳ? ಟಿಕೆಟ್​ ಕೊಟ್ಟರಷ್ಟೇ ಬಿಜೆಪಿ ಸೇರ್ಪಡೆ!?

ಕಾಂಗ್ರೆಸ್​ ತೊರೆದಿರೋ ಘೋಟ್ನೇಕರ್‌ ಅವರನ್ನು ಬಿಜೆಪಿಗೆ ಕರೆತರಲು ಇಬ್ಬರು ಪ್ರಭಾವಿ ನಾಯಕರ ಸರ್ಕಸ್​ ನಡೆಸುತ್ತಿದ್ದು, ಬಿಜೆಪಿಯಿಂದ ಟಿಕೆಟ್ ಪಕ್ಕಾ ಆದಲ್ಲಿ ಮಾತ್ರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಅನ್ನೋ ಮಾತಿದೆ. ಈ ಹಿಂದೆ ಜೆಡಿಎಸ್‌ನಿಂದ ಕಣಕ್ಕೆ ಇಳಿಯುತ್ತಾರೆ ಅನ್ನೋ ಮಾತುಗಳು ಕೆಲ ದಿನಗಳಿಂದ ಕೇಳಿ ಬರುತ್ತಿದ್ದವು. ಇದಕ್ಕೆ ಪುಷ್ಟಿ ನೀಡುವಂತೆ ಮಾಜಿ ಸಿಎಂ ಕುಮಾರಸ್ವಾಮಿ ಜೊತೆಗೂ ಘೋಟ್ನೇಕರ್ ಮಾತುಕತೆ ನಡೆಸಿದ್ದರು. ಆದ್ರೀಗ ಸದ್ಯದ ಮಾಹಿತಿ ಪ್ರಕಾರ ಜೆಡಿಎಸ್​ನಿಂದ ಕಣಕ್ಕಿಳಿಯೋದು ಅನುಮಾನ ಅನ್ನೋ ಮಾತು ಕೇಳಿ ಬಂದಿದೆ.

Vijaya Karnataka Web 8 Jan 2023, 2:14 pm

ಹೈಲೈಟ್ಸ್‌:

  • ಎಸ್ ಎಲ್ ಘೋಟ್ನೇಕರ್ ಅವರನ್ನು ಬಿಜೆಪಿಗೆ ಕರೆತರಲು ಬಿಜೆಪಿಯ ಇಬ್ಬರು ಪ್ರಭಾವಿ ನಾಯಕರ ಸರ್ಕಸ್!?
  • ಬಿಜೆಪಿಯಿಂದ ಟಿಕೆಟ್ ಪಕ್ಕಾ ಆದಲ್ಲಿ ಮಾತ್ರ ಬಿಜೆಪಿಗೆ ಸೇರ್ಪಡೆ?
  • ಕಾಂಗ್ರೆಸ್‌ ತೊರೆದ ಘೋಟ್ನೇಕರ್.. ಸೇಫ್ ಆದ ದೇಶಪಾಂಡೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web SL Ghotnekar
ಚುನಾವಣಾ ಅಖಾಡಕ್ಕೆ ಇಳಿದ ಎಸ್‌ ಎಲ್ ಘೋಟ್ನೇಕರ್
ಕಾರವಾರ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ. ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್ ಎಲ್ ಘೋಟ್ನೇಕರ್ ಅವರನ್ನು ಬಿಜೆಪಿಗೆ ಕರೆತರಲು ಇಬ್ಬರು ಪ್ರಭಾವಿ ಮುಖಂಡರುಗಳು ಸಾಥ್ ನೀಡಿದ್ದಾರೆ ಅನ್ನೋ ಸುದ್ದಿ ಜೋರಾಗಿ ಕೇಳಿ ಬರುತ್ತಿದೆ.
ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಶಾಸಕ ಆರ್ ವಿ ದೇಶಪಾಂಡೆ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆ ನಡುವೆ ನೇರಾನೇರ ಪೈಪೋಟಿ ನಡೆಯುತ್ತಿತ್ತು. ಆದರೆ, ಈ ಬಾರಿ ಘೋಟ್ನೇಕರ್ ಸಹ ಅಖಾಡಕ್ಕೆ ಇಳಿಯಲು ಸಿದ್ಧತೆ ಮಾಡಿಕೊಂಡಿದ್ದು, ಈಗಾಗಲೇ ಬೆಂಬಲಿಗರ ಜೊತೆ ಬೃಹತ್ ಸಭೆ ಆಯೋಜಿಸಿ ಸಕಲ ತಯಾರಿ ಮಾಡುತ್ತಿದ್ದಾರೆ. ಇಷ್ಟು ದಿನಗಳ ಕಾಲ ಕಾಂಗ್ರೆಸ್ ಪಕ್ಷದಿಂದಲೇ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದ ಘೋಟ್ನೇಕರ್, ಈ ಬಾರಿ ತಮಗೇ ಟಿಕೆಟ್ ಕೊಡಿ ಅಂತಾ ನಾಯಕರ ಮುಂದೆ ಪಟ್ಟು ಹಿಡಿದಿದ್ದರು. ಆದರೆ ಯಾವಾಗ ಘೋಟ್ನೇಕರ್‌ಗೆ ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಗುವುದಿಲ್ಲ ಅನ್ನುವುದು ಖಾತರಿ ಆಯಿತೋ ಆಗಲೇ ಕಾಂಗ್ರೆಸ್‌ಗೆ ಗುಡ್‌ ಬೈ ಹೇಳಿದ್ದಾರೆ.

ಕಾಂಗ್ರೆಸ್‌ನಿಂದ ಹೊರ ಬಂದಿರೋ ಘೋಟ್ನೇಕರ್, ಈ ಬಾರಿ ಚುನಾವಣಾ ಅಖಾಡಕ್ಕೆ ಇಳಿಯುತ್ತೇನೆ ಅಂತಾ ಬಹಿರಂಗವಾಗಿಯೇ ಘೋಷಣೆ ಮಾಡಿದ್ದಾರೆ. ಘೋಟ್ನೇಕರ್ ರಾಜೀನಾಮೆ ಘೋಷಣೆ ಬೆನ್ನಲ್ಲೇ ಯಾವ ಪಕ್ಷದಿಂದ ಕಣಕ್ಕೆ ಇಳಿಯಲಿದ್ದಾರೆ ಅನ್ನೋ ಚರ್ಚೆ ಸಹ ಕ್ಷೇತ್ರದಲ್ಲಿ ಜೋರಾಗಿ ನಡೆಯುತ್ತಿದೆ.
ಚುನಾವಣೆ ಸಮೀಪಿಸುತ್ತಿದ್ದಂತೆ ಜಾತಿಯಾಧಾರಿತ ಟಿಕೆಟ್‌ಗೆ ಹೆಚ್ಚಿದ ಒತ್ತಡ!ಬಿಜೆಪಿಗೆ ಕರೆತರಲು ಇಬ್ಬರು ಪ್ರಭಾವಿ ನಾಯಕರ ಸರ್ಕಸ್!?
ಕಾಂಗ್ರೆಸ್ ತೊರೆದಿರುವ ಘೋಟ್ನೇಕರ್, ಜೆಡಿಎಸ್ ಪಕ್ಷದಿಂದ ಕಣಕ್ಕೆ ಇಳಿಯುತ್ತಾರೆ ಅನ್ನೋ ಮಾತುಗಳು ಕೆಲ ದಿನಗಳಿಂದ ಕೇಳಿ ಬರುತ್ತಿದ್ದವು. ಇದಕ್ಕೆ ಪುಷ್ಟಿ ನೀಡುವಂತೆ ಮಾಜಿ ಸಿಎಂ ಕುಮಾರಸ್ವಾಮಿ ಜೊತೆಗೂ ಘೋಟ್ನೇಕರ್ ಮಾತುಕತೆ ನಡೆಸಿದ್ದರು. ಆದ್ರೀಗ ಸದ್ಯದ ಮಾಹಿತಿ ಪ್ರಕಾರ ಜೆಡಿಎಸ್‌ನಿಂದ ಕಣಕ್ಕಿಳಿಯೋದು ಅನುಮಾನ ಅನ್ನೋ ಮಾತು ಕೇಳಿ ಬಂದಿದೆ. ಇನ್ನೊಂದೆಡೆ ಪಕ್ಷೇತರವಾಗಿ ಕಣಕ್ಕಿಳಿಯಲು ಘೋಟ್ನೇಕರ್ ಸಿದ್ಧತೆ ಮಾಡಿಕೊಂಡಿದ್ದಾರೆ ಅಂತಾನೂ ಸುದ್ದಿಯಾಗ್ತಿದೆ. ಇದೆಲ್ಲದರ ಮಧ್ಯೆ ಈಗ ಬಿಗ್ ನ್ಯೂಸ್ ಒಂದು ಹೊರ ಬಿದ್ದಿದೆ. ಘೋಟ್ನೇಕರ್ ಅವರನ್ನು ಬಿಜೆಪಿಗೆ ಕರೆತಂದು ಟಿಕೆಟ್ ನೀಡೋದಕ್ಕೆ ಇಬ್ಬರು ಪ್ರಭಾವಿ ಮುಖಂಡರುಗಳು ಪ್ರಯತ್ನ ಮಾಡುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಮಾಜಿ ಶಾಸಕ ಸುನೀಲ್ ಹೆಗಡೆ, ಸಂಸದ ಅನಂತ್ ಕುಮಾರ್ ಹೆಗಡೆಯವರ ಕಟ್ಟಾಳು ಎಂದೇ ಗುರುತಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಸುನೀಲ್ ಹೆಗಡೆಗೆ ಟಾಂಗ್ ಕೊಡಲು ಘೋಟ್ನೇಕರ್ ಅವರನ್ನು ಪಕ್ಷಕ್ಕೆ ಕರೆತಂದು ಸ್ಪರ್ಧೆಗಿಳಿಸೋದಕ್ಕೆ ಕಮಲ ಪಕ್ಷದವರೇ ಆದ ಇಬ್ಬರು ಪ್ರಭಾವಿ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

ಈಗಾಗಲೇ ಘೋಟ್ನೇಕರ್ ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ನಾಯಕರ ಚರ್ಚೆ ನಡೆದಿದೆ. ಆದರೆ ಪಕ್ಷದಿಂದ ಟಿಕೆಟ್ ನೀಡುವ ಬಗ್ಗೆ ಈವರೆಗೂ ಹಸಿರು ನಿಶಾನೆ ಸಿಕ್ಕಿಲ್ಲವಂತೆ. ರಾಜಕೀಯವಾಗಿ ಇದು ಕೊನೆಯ ಚುನಾವಣೆ ಎಂದು ಹೇಳುತ್ತಿರುವ ಘೋಟ್ನೇಕರ್ಗೆ ಬಿಜೆಪಿಯಲ್ಲಿ ಟಿಕೆಟ್ ಸಿಗದಿದ್ದರೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಸದ್ಯ ಮೌನವಾಗಿದ್ದು, ಬಿಜೆಪಿಯಿಂದ ಟಿಕೆಟ್ ಪಕ್ಕಾ ಆದಲ್ಲಿ ಮಾತ್ರ ಪಕ್ಷ ಸೇರ್ಪಡೆಯಾಗಲಿದ್ದಾರೆ ಅನ್ನೋ ಮಾತಿದೆ.
KPCC Suspends KGF Babu-ಪಕ್ಷ ವಿರೋಧಿ ಹೇಳಿಕೆ ಬೆನ್ನಲ್ಲೇ ಕೆಜಿಎಫ್‌ ಬಾಬು ಅಮಾನತು‘ಕೈ’ ತೊರೆದ ಘೋಟ್ನೇಕರ್.. ಸೇಫ್ ಆದ ದೇಶಪಾಂಡೆ!
ಘೋಟ್ನೇಕರ್ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿರುವುದರಿಂದ ಮಾಜಿ ಸಚಿವ, ಹಾಲಿ ಶಾಸಕ ಆರ್.ವಿ.ದೇಶಪಾಂಡೆ ಸೇಫ್ ಆಗಿದ್ದಾರೆ ಅಂತಾನೇ ವಿಶ್ಲೇಷಿಸಲಾಗುತ್ತಿದೆ. ಘೋಟ್ನೇಕರ್ ಈ ಬಾರಿ ತಮಗೇ ಕಾಂಗ್ರೆಸ್ ಟಿಕೆಟ್ ನೀಡಬೇಕು ಅಂತಾ ಮೇಲಿಂದ ಮೇಲೆ ಒತ್ತಡ ಹೇರುತ್ತಿದ್ದರಿಂದ ದೇಶಪಾಂಡೆಗೆ ಇದು ನುಂಗಲಾರದ ತುತ್ತಾಗಿತ್ತು. ಪಕ್ಷದೊಳಗೆ ಎರಡು ಬಣಗಳಂತಾಗಿದ್ದರಿಂದ ದೇಶಪಾಂಡೆಗೆ ಹಲವು ಬಾರಿ ಇರಿಸು ಮುರುಸು ಉಂಟಾಗಿತ್ತು. ಆದ್ರೀಗ ಘೋಟ್ನೇಕರ್ ಕಾಂಗ್ರೆಸ್ ತೊರೆದಿರುವುದು ದೇಶಪಾಂಡೆಗೆ ನಿಟ್ಟುಸಿರು ಬಿಡುವಂತೆ ಮಾಡಿದೆ. ಪಕ್ಷದಲ್ಲಿ ಯಾವುದೇ ವಿರೋಧವಿಲ್ಲದೆ ಸಲೀಸಾಗಿ ಚುನಾವಣೆ ಎದುರಿಸಬಹುದು ಅನ್ನೋದು ಕಾಂಗ್ರೆಸ್ ಕಾರ್ಯಕರ್ತರ ಮಾತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ