Please enable javascript.ಸುರಕ್ಷತೆಗೆ ಸ್ಯಾನಿಟೈಜೆಷನ್‌ ಗೂಡು - sanitization niche for safety - Vijay Karnataka

ಸುರಕ್ಷತೆಗೆ ಸ್ಯಾನಿಟೈಜೆಷನ್‌ ಗೂಡು

Vijaya Karnataka 10 May 2020, 5:00 am
Subscribe

ಶಿರಸಿ : ಮನೆಮನೆ ಕಸ ಸಂಗ್ರಹಕ್ಕೆ ತೆರಳುವ ಪೌರಕಾರ್ಮಿಕರ ಸುರಕ್ಷತೆ ದೃಷ್ಟಿಯಿಂದ ಇಲ್ಲಿಯ ನಗರಸಭೆ ಸ್ಯಾನಿಟೈಜೆಷನ್‌ ಗೂಡು ರೂಪಿಸಿದೆ. ಜಿಲ್ಲೆಯ ಪ್ರಥಮವಾಗಿ ಸ್ಥಳೀಯವಾಗಿ ಸಿದ್ಧಪಡಿಸಿರುವ ಸ್ಯಾನಿಟೈಜೆಷನ್‌ ಟನೆಲ್‌ ಕಳೆದ ವಾರದಿಂದ ಕಾರ್ಯನಿರ್ವಹಿಸುತ್ತಿದೆ.

sanitization niche for safety
ಸುರಕ್ಷತೆಗೆ ಸ್ಯಾನಿಟೈಜೆಷನ್‌ ಗೂಡು
ಶಿರಸಿ : ಮನೆಮನೆ ಕಸ ಸಂಗ್ರಹಕ್ಕೆ ತೆರಳುವ ಪೌರಕಾರ್ಮಿಕರ ಸುರಕ್ಷತೆ ದೃಷ್ಟಿಯಿಂದ ಇಲ್ಲಿಯ ನಗರಸಭೆ ಸ್ಯಾನಿಟೈಜೆಷನ್‌ ಗೂಡು ರೂಪಿಸಿದೆ. ಜಿಲ್ಲೆಯ ಪ್ರಥಮವಾಗಿ ಸ್ಥಳೀಯವಾಗಿ ಸಿದ್ಧಪಡಿಸಿರುವ ಸ್ಯಾನಿಟೈಜೆಷನ್‌ ಟನೆಲ್‌ ಕಳೆದ ವಾರದಿಂದ ಕಾರ್ಯನಿರ್ವಹಿಸುತ್ತಿದೆ.

ಕಸ ಸಂಗ್ರಹಕ್ಕೆ ತೆರಳುವ ಕಾರ್ಮಿಕರು ಬೆಳಗ್ಗೆ ತೆರಳುವಾಗ ಹಾಗೂ ವಾಪಸ್‌ ಬಂದ ನಂತರ ನಗರಸಭೆ ಎದುರಿನಲ್ಲಿಇಟ್ಟಿರುವ ಈ ಗೂಡಿನಲ್ಲಿಹೊಕ್ಕು ಸ್ಯಾನಿಟೈಜೆಷನ್‌ ಮಾಡಿಕೊಳ್ಳಬೇಕು. ಈ ಟನೆಲ್‌ಗೆ ಪ್ರಾಕ್ಸಿಮಿಟಿ ಸೆನ್ಸರ್‌ ಅಳವಡಿಸಿದ್ದು ಪೌರಕಾರ್ಮಿಕರು ಇದರೊಳಗೆ ತೆರಳಿದಾಗ ತನ್ನಿಂದತಾನೆ ಅಟೊ ಆಫ್‌ ಆನ್‌ ಆಗುತ್ತದೆ. ಸ್ಯಾನಿಟೈಜೆಷನ್‌ಗೆ ತೆರಳುವ ಪೌರಕಾರ್ಮಿಕರು ಗಮ್‌ಬೂಟ್‌, ಹ್ಯಾಂಡ್‌ಗ್ಲೌಸ್‌, ಮಾಸ್ಕ್‌ ಧರಿಸಿರಬೇಕಾಗುತ್ತದೆ. ಅದರಲ್ಲೂಮುಖ್ಯವಾಗಿ ಓವರ್‌ಗೌನ್‌ ತೊಟ್ಟುಕೊಂಡೇ ಒಳಗೆ ತೆರಳಬೇಕಾಗುತ್ತದೆ. ನಿತ್ಯ ಕಸ ಸಂಗ್ರಹಣೆಗೆ ತೆರಳುವ ನಗರಸಭೆಯ 11ಪೌರಕಾರ್ಮಿಕರು ಸ್ಯಾನಿಟೈಜೆಷನ್‌ಗೆ ಒಳಗಾಗುತ್ತಾರೆ ಎಂದು ನಗರಸಭೆಯ ಪರಿಸರ ಅಭಿಯಂತ ಶಿವರಾಜ ನೀಡುವ ವಿವರಣೆ.ಮೈಸೂರಿನಲ್ಲಿಸ್ಯಾನಿಟೈಜೆಷನ್‌ ಗೂಡು ರೂಪಿಸಿದ್ದನ್ನು ತಿಳಿದು ಉತ್ತೇಜಿತರಾಗಿ ಇಲ್ಲಿಯೂ ಇದನ್ನು ತಯಾರಿಸಲಾಗಿದೆ. ನಗರಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿಜಿಲ್ಲೆಯಲ್ಲೇ ಇದೇ ಪ್ರಥಮವಾಗಿದೆ ಎಂದು ಮೂಲಗಳು ಹೇಳುತ್ತವೆ.

ಕ್ವಾರಂಟೈನ್‌ ಮನೆಗಳಿಂದ... ಮನೆಮನೆ ಕಸ ಸಂಗ್ರಹದ ಸಂದರ್ಭದಲ್ಲಿಕ್ವಾರಂಟೈನ್‌ ಮನೆಗಳಿಂದ ಪ್ರತ್ಯೇಕವಾಗಿ ಹಳದಿ ಬಣ್ಣದ ಚೀಲಗಳಲ್ಲಿಕಸವನ್ನು ಸಂಗ್ರಹಿಸಿ ಪ್ರತ್ಯೇಕವಾಗಿ ವೈಜ್ಞಾನಿಕ ವಿಲೇವಾರಿ ಮಾಡಲಾಗುತ್ತಿದೆ ಎಂದು ಪರಿಸರ ಅಭಿಯಂತ ಶಿವರಾಜ ಹೇಳುತ್ತಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ