ಆ್ಯಪ್ನಗರ

ಸ್ಕೌಟ್ಸ್‌ ,ಗೈಡ್ಸ್‌ ಎಲ್ಲ ಮಕ್ಕಳಿಗೂ ತಲುಪುವ ವ್ಯವಸ್ಥೆಯಾಗಲಿ

ಸಿದ್ದಾಪುರ : ಮಕ್ಕಳಲ್ಲಿ ಶಿಸ್ತು,ಸಹನೆ ಬೆಳೆಸುವ ಸ್ಕೌಟ್ಸ್‌ ಮತ್ತು ಗೈಡ್ಸ್‌ ಕೆಲವರಿಗಷ್ಟೆ ಸೀಮಿತವಾಗಿದ್ದು ಎಲ್ಲಾ ಮಕ್ಕಳಿಗೂ ತಲುಪುವಂತಹ ವ್ಯವಸ್ಥೆ ಮಾಡಬೇಕು ಎಂದು ತಹಸೀಲ್ದಾರ್‌ ಗೀತಾ ಸಿ.ಜಿ. ಹೇಳಿದರು.

Vijaya Karnataka 19 Jul 2019, 5:00 am
ಸಿದ್ದಾಪುರ : ಮಕ್ಕಳಲ್ಲಿ ಶಿಸ್ತು,ಸಹನೆ ಬೆಳೆಸುವ ಸ್ಕೌಟ್ಸ್‌ ಮತ್ತು ಗೈಡ್ಸ್‌ ಕೆಲವರಿಗಷ್ಟೆ ಸೀಮಿತವಾಗಿದ್ದು ಎಲ್ಲಾ ಮಕ್ಕಳಿಗೂ ತಲುಪುವಂತಹ ವ್ಯವಸ್ಥೆ ಮಾಡಬೇಕು ಎಂದು ತಹಸೀಲ್ದಾರ್‌ ಗೀತಾ ಸಿ.ಜಿ. ಹೇಳಿದರು.
Vijaya Karnataka Web scouts and guides should be available to all children
ಸ್ಕೌಟ್ಸ್‌ ,ಗೈಡ್ಸ್‌ ಎಲ್ಲ ಮಕ್ಕಳಿಗೂ ತಲುಪುವ ವ್ಯವಸ್ಥೆಯಾಗಲಿ


ಪಟ್ಟಣದ ಬಾಲಿಕೊಪ್ಪ ಸರಕಾರಿ ಶಾಲೆಯಲ್ಲಿ ಸ್ಥಳೀಯ ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆ ಆಯೋಜಿಸಿದ್ದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಕಾರ್ಯಾಗಾರವನ್ನು ಉದ್ಘಾಟಿಸಿ ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಕಾರ್ಯಯೋಜನೆಯ ಮಾಹಿತಿ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸ್ಕೌಟ್ಸ್‌ ಮತ್ತು ಗೈಡ್ಸ್‌ಗೆ ಸೇರಲು ಮಕ್ಕಳಿಗೆ ಸಮವಸ್ತ್ರ, ಶೂ ಸೇರಿದಂತೆ ವಿವಿಧ ಪರಿಕರಗಳನ್ನು ಹೊಂದಲು ಸಾಕಷ್ಟು ಹಣದ ಅವಶ್ಯಕತೆ ಇರುತ್ತದೆ. ಇದರಿಂದ ಪೋಷಕರಿಗೆ ಆರ್ಥಿಕ ಹೊರೆಯಾಗುತ್ತದೆ ಮತ್ತು ಈ ಪರಿಕರಗಳ ಉಪಯೋಗ ಸೀಮಿತವಾಗಿರುತ್ತದೆ. ಇದರಿಂದ ಎಷ್ಟೋ ಪೋಷಕರು ಮಕ್ಕಳನ್ನು ಸೇರಿಸಲು ಹಿಂಜರಿಯುತ್ತಾರೆ. ಆದ್ದರಿಂದ ಸಂಬಂಧಿಸಿದ ಸಂಸ್ಥೆ ಸ್ಕೌಟ್ಸ್‌ ಮತ್ತು ಗೈಡ್ಸ್‌ಗೆ ಸೇರಲಿಚ್ಚಿಸುವ ಮಕ್ಕಳಿದ್ದು ಆರ್ಥಿಕ ತೊಂದರೆಯಿಂದ ಸೇರಲು ಹಿಂಜರಿಯುತ್ತಿದ್ದರೆ ಅಂತಹ ಮಕ್ಕಳಿಗೆ ದಾನಿಗಳ ಸಹಕಾರದಿಂದ ಆರ್ಥಿಕ ಸೌಲಭ್ಯ ಒದಗಿಸಿ ಸೇರುವಂತೆ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷ ತೆವಹಿಸಿದ್ದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಯ ಅಧ್ಯಕ್ಷ ಜಿ.ಜಿ.ಹೆಗಡೆ ಬಾಳಗೋಡು ಮಾತನಾಡಿ,ಇಂದು ಶಿಕ್ಷ ಣವನ್ನು ಅಂಕಗಳಿಕೆಗೆ ಸೀಮಿತಗೊಳಿಸುತ್ತಿದ್ದು ಇದರಿಂದ ನೈತಿಕ ದಿವಾಳಿಯತ್ತ ನಾವು ಸಾಗುತ್ತಿದ್ದೇವೆ ಮಕ್ಕಳಲ್ಲಿ ದೇಶ ಭಕ್ತಿ,ಶಾಂತಿ,ಸಹನೆ,ಸೌಹಾರ್ದತೆ ಮಾಯವಾಗುತ್ತಿದೆ ಹೊರದೇಶಕ್ಕೆ ಹಣಗಳಿಕೆಗೆ ಹೋಗುತ್ತಿರುವ ಇಂದಿನ ಯುವಜನತೆಯಿಂದ ದೇಶಾಭಿಮಾನವನ್ನು ನಿರೀಕ್ಷಿಸುವುದು ಕಷ್ಟ. ಮನೆಯಿಮದಲೇ ಚಾರಿತ್ರ್ಯದ ಪಾಠ ಪ್ರಾರಂಭವಾಗಬೇಕು ನಂತರದಲ್ಲಿ ಶಾಲೆಯಲ್ಲಿ ಇದು ಮುಂದುವರಿಯಬೇಕು ಹೀಗಾದಲ್ಲಿ ಮುಂದಿನ ಪ್ರಜೆಗಳನ್ನು ಪ್ರಬುದ್ಧರನ್ನಾಗಿಸಲು ಸಾಧ್ಯ ಎಂದು ಹೇಳಿದರು.

ಸಭೆಯಲ್ಲಿ ಬಾಗವಹಿಸಿದ್ದ ತಾಪಂ ಕಾರ್ಯನಿರ್ವಹಣಾಧಿಕಾರಿ ದಿನೇಶ ಡಿ.ಈ.,ಕ್ಷೇತ್ರ ಶಿಕ್ಷ ಣಾಧಿಕಾರಿ ವಿ.ಆರ್‌.ನಾಯ್ಕ,ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಅಧ್ಯಕ್ಷ ಎಂ.ಕೆ.ನಾಯ್ಕ,ಜಿಲ್ಲಾ ಗೈಡ್ಸ್‌ ಆಯುಕ್ತೆ ಜ್ಯೋತಿ ಭಟ್ಟ,ಜಿಲ್ಲಾ ಸಂಘಟಕ ವೀರೇಶ ಮಾದಾರ ಮಾತನಾಡಿದರು.

ಅಕ್ಷ ರದಾಸೋಹದ ಚೈತನ್ಯಕುಮಾರ,ದೈಹಿಕ ಶಿಕ್ಷ ಣ ಪರಿವೀಕ್ಷ ಕ ಕಮಲಾಕರ ನಾಯ್ಕ,ಶಾಲಾ ಮುಖ್ಯ ಶಿಕ್ಷ ಕ ಕೇಶವ ಮಾದಾರ ಉಪಸ್ಥಿತರಿದ್ದರು.

ಸ್ಥಳೀಯ ಸ್ಕೌಟ್ಸ್‌ ಮತ್ತು ಗೈಡ್ಸ್‌ ಕಾರ್ಯದರ್ಶಿ ಜಿ.ಜಿ.ಹೆಗಡೆ ಸ್ವಾಗತಿಸಿದರು.ಆರ್‌.ಹೆಚ್‌.ಗೌಡ ನಿರೂಪಿಸಿದರು. ಮಹೇಶ ಶೇಟ್‌ ವರದಿ ಓದಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ