Please enable javascript.ಶಿವಾಜಿ ಮೂರ್ತಿ ಸ್ಥಾಪನೆ: 800ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ - shivaji murthy's foundation: a case against 800 people - Vijay Karnataka

ಶಿವಾಜಿ ಮೂರ್ತಿ ಸ್ಥಾಪನೆ: 800ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ

Vijaya Karnataka 22 Sep 2018, 5:00 am
Subscribe

ಹಳಿಯಾಳ :ಕಳೆದ ಮಂಗಳವಾರ ಮಧ್ಯರಾತ್ರಿ ಪಟ್ಟಣದ ಐತಿಹಾಸಿಕ ಕೋಟೆಯ ವಿವಾದಿತ ಸ್ಥಳದಲ್ಲಿ ನೂರಾರು ಜನರು ಅಶ್ವಾರೂಢ ಶ್ರೀ ಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 25 ಪ್ರಮುಖರು ಸೇರಿದಂತೆ ಒಟ್ಟೂ 800ಕ್ಕೂ ಅಧಿಕ ಜನರ ಮೇಲೆ ಹಳಿಯಾಳ ಪೊಲೀಸರು ಶುಕ್ರವಾರ ಎಫ್‌ಐಆರ್‌ ದಾಖಲಿಸಿದ್ದಾರೆ.

shivaji murthys foundation a case against 800 people
ಶಿವಾಜಿ ಮೂರ್ತಿ ಸ್ಥಾಪನೆ: 800ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ
ಹಳಿಯಾಳ :ಕಳೆದ ಮಂಗಳವಾರ ಮಧ್ಯರಾತ್ರಿ ಪಟ್ಟಣದ ಐತಿಹಾಸಿಕ ಕೋಟೆಯ ವಿವಾದಿತ ಸ್ಥಳದಲ್ಲಿ ನೂರಾರು ಜನರು ಅಶ್ವಾರೂಢ ಶ್ರೀ ಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 25 ಪ್ರಮುಖರು ಸೇರಿದಂತೆ ಒಟ್ಟೂ 800ಕ್ಕೂ ಅಧಿಕ ಜನರ ಮೇಲೆ ಹಳಿಯಾಳ ಪೊಲೀಸರು ಶುಕ್ರವಾರ ಎಫ್‌ಐಆರ್‌ ದಾಖಲಿಸಿದ್ದಾರೆ.

ಹಳಿಯಾಳ ಠಾಣೆಯ ಸಿಪಿಐ ಸುಂದ್ರೇಶ್‌ ಹೊಳೆಣ್ಣವರ ಮತ್ತು ಮುಖ್ಯಾಧಿಕಾರಿ ಕೇಶವ ಚೌಗುಲೆ ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ.

ಯಾವ ಕಲಂ ಅಡಿ ಪ್ರಕರಣ:

ಸಿಪಿಐ ನೀಡಿರುವ ದೂರಿನನ್ವಯ ಐಪಿಸಿ ಕಲಂ 143, 147, 332, 341, 353 ಮತ್ತು 427ರ ಪ್ರಕಾರ 27 ಜನರು ಸೇರಿದಂತೆ ಒಟ್ಟು 250ಕ್ಕೂ ಅಧಿಕ ಜನರ ಮೇಲೆ ದೂರು ದಾಖಲಿಸಲಾಗಿದೆ.

ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗುಲೆ ನೀಡಿದ ದೂರಿನನ್ವಯ ಐಪಿಸಿ 143, 147, 149, 447 ಕಲಂ ಪ್ರಕಾರ 27 ಜನ ಪ್ರಮುಖರು ಸೇರಿದಂತೆ ಒಟ್ಟೂ 800ಕ್ಕೂ ಅಧಿಕ ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆದರೆ ಘಟನೆ ಸ್ಥಳದಲ್ಲಿ ಹಾಜರಿದ್ದ ಮಾಜಿ ಶಾಸಕ ಸುನೀಲ್‌ ಹೆಗಡೆ ಹೆಸರು ಮಾತ್ರ ಪ್ರಕರಣದಲ್ಲಿ ಸೇರಿಸದೇ ಇರುವುದು ಚರ್ಚೆಗೆ ಗ್ರಾಸವಾಗಿದೆ.

ಸಿಪಿಐ ಸುಂದ್ರೇಶ್‌ ಹೊಳೆಣ್ಣವರ, ಪಿಎಸೈ ಆನಂದಮೂರ್ತಿ ಮತ್ತು ಪೊಲೀಸ್‌ ಸಿಬ್ಬಂದಿಗಳಾದ ಪರಶುರಾಮ್‌ ನಾಗರಾಳ, ನಿಂಗಪ್ಪಾ ಬಳ್ಳಾರಿ ಮತ್ತು ಅರವಿಂದ ಭಜಂತ್ರಿ ಅವರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಲಾಗಿದೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.

ಎಫ್‌ಐಆರ್‌ ದಾಖಲಾಗಿದ್ದು, ಇದರ ವರದಿಯನ್ನು ನ್ಯಾಯಾಲಯಕ್ಕೆ ರವಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಬಂಧನ ಕುರಿತು ಪ್ರಕ್ರಿಯೆಗಳು ನಡೆಯಲಿವೆ. ಪ್ರಕರಣ ದಾಖಲು ಮಾಡಿದ್ದಕ್ಕೆ ಬಿಜೆಪಿ ಖಂಡಿಸಿದ್ದು, ಮುಂದಿನ ದಿನಗಳಲ್ಲಿ ಭಾರೀ ಪ್ರತಿಭಟನೆ ನಡೆಸುವುದಾಗಿ ಸ್ಪಷ್ಟಪಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ