ಆ್ಯಪ್ನಗರ

ಜೋಯಿಡಾ ತಾಪಂಗೆ ಸಿಬ್ಬಂದಿ ಕೊರತೆ

ಜೋಯಿಡಾ : ಇಲ್ಲಿನ ತಾಲೂಕು ಪಂಚಾಯಿತಿ ಕಚೇರಿಯು ಸಿಬ್ಬಂದಿ ಕೊರತೆಯಿಂದ ಬಳಲುತ್ತಿದ್ದು, ಸಾರ್ವಜನಿಕರ ಸೇವೆಗೆ ತೊಡಕಾಗಿ ಪರಿಣಮಿಸಿದೆ.

ವಿಕ ಸುದ್ದಿಲೋಕ 18 Jun 2016, 4:00 am

ಜೋಯಿಡಾ : ಇಲ್ಲಿನ ತಾಲೂಕು ಪಂಚಾಯಿತಿ ಕಚೇರಿಯು ಸಿಬ್ಬಂದಿ ಕೊರತೆಯಿಂದ ಬಳಲುತ್ತಿದ್ದು, ಸಾರ್ವಜನಿಕರ ಸೇವೆಗೆ ತೊಡಕಾಗಿ ಪರಿಣಮಿಸಿದೆ.

ತಾಲೂಕು ಪಂಚಾಯಿತಿ ಕಚೇರಿಯಲ್ಲಿ 22 ಸಿಬ್ಬಂದಿಗಳ ಅಗತ್ಯವಿದೆ. ಆದರೆ ಈಗ ಕೇವಲ 6 ಜನ ಸಿಬ್ಬಂದಿ ನಾಮಕೇವಾಸ್ತೆ ಎನ್ನುವಂತಿದ್ದಾರೆ. ಡೆಪ್ಯುಟೆಶನ್‌ ಮೇರೆಗೆ ಕಾರವಾರ ಮತ್ತು ಶಿರಸಿಗೆ ಇಬ್ಬರು ತೆರಳಿದ್ದು, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸೇರಿ ಕೇವಲ 4 ಸಿಬ್ಬಂದಿ ಕೆಲಸ ಮಾಡುವಂತಾಗಿದೆ.

ಇದರಿಂದಾಗಿ ತಾಲೂಕಿನ ಪ್ರಗತಿ ಕೇವಲ ಕಾಟಾಚಾರಕ್ಕೆ ಎನ್ನುವಂತಾಗಿದೆ. ಸಿಬ್ಬಂದಿಯಿಲ್ಲದೇ ಕಚೇರಿಯೆಲ್ಲ ಭಣಭಣ ಎನ್ನುತ್ತಿರುತ್ತದೆ. ಹೀಗಾಗಿ ಸಾರ್ವಜನಿಕರ ಕೆಲಸ ಕಾರ್ಯಗಳು ಸಮರ್ಪಕವಾಗಿ ಸಾಗದೇ ಪರದಾಡುವಂತಾಗಿದೆ.

ಉದ್ಯೋಗ ಖಾತ್ರಿಯಂತ ಪ್ರಮುಖ ಜವಾಬ್ದಾರಿಯನ್ನು ಗ್ರಾ.ಪಂ.ಗಳಿಂದ ಬಂದ ಮಾಹಿತಿಯನ್ನು ಸರಿಯಾಗಿ ನಿರ್ವಹಿಸಬೇಕಾದದ್ದು ತಾ.ಪಂ. ಕೆಲಸ. ಆದರೆ ತಾಪಂಗಳಲ್ಲಿ ಈ ಬಗ್ಗೆ ಅಗತ್ಯ ಕ್ರಮ ಜರುಗಿಸಬೇಕಾದ ಅಧಿಕಾರಿಯೇ ಇಲ್ಲ, ಸೂಕ್ತ ಮಾಹಿತಿ ಜವಾಬ್ದಾರಿ ನಿರ್ವಹಣೆ ಈ ಅಧಿಕಾರಿ ಕೆಲಸ, ಆದರೆ ಅಂಥ ಅಧಿಕಾರಿ ಇಲ್ಲದಿರುವುದು ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ.

ಕಚೇರಿಯಲ್ಲಿ ಸಾಕಷ್ಟು ಸಿಬ್ಬಂದಿ ಇಲ್ಲದ ಕಾರಣ ಎಲ್ಲಾ ಗ್ರಾ.ಪಂ.ಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕೆಲಸ ಇನ್ನಿತರ ವ್ಯವಹಾರಿಕ ಕಾರ್ಯಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ತಾ.ಪಂ. ಕಾ.ನಿ. ಅಧಿಕಾರಿ ಪ್ರಕಾಶ ಹಾಲಮ್ಮನವರ ಅವರ ಅಭಿಪ್ರಾಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ