ಆ್ಯಪ್ನಗರ

ವೆಡ್ಡಿಂಗ್‌ ಕಾರ್ಡ್‌ನಲ್ಲಿಸೈಬರ್‌ ಕ್ರೈಂ ಜಾಗೃತಿ..!

ಗುರುದತ್ತ ಭಟ್‌ ಕಾರವಾರ: ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನೇ ಬಳಸಿಕೊಂಡು ಸೈಬರ್‌ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲು ಇಲ್ಲಿನ ಪೊಲೀಸ್‌ ಕಾನ್‌ಸ್ಟೇಬಲ್‌ ಒಬ್ಬರು ಕೈಗೊಂಡಿರುವ ವಿಶಿಷ್ಟ ಪ್ರಯತ್ನ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Vijaya Karnataka 21 Nov 2019, 5:00 am
ಗುರುದತ್ತ ಭಟ್‌ ಕಾರವಾರ: ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನೇ ಬಳಸಿಕೊಂಡು ಸೈಬರ್‌ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲು ಇಲ್ಲಿನ ಪೊಲೀಸ್‌ ಕಾನ್‌ಸ್ಟೇಬಲ್‌ ಒಬ್ಬರು ಕೈಗೊಂಡಿರುವ ವಿಶಿಷ್ಟ ಪ್ರಯತ್ನ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
Vijaya Karnataka Web wedding card is a cyber crime awareness
ವೆಡ್ಡಿಂಗ್‌ ಕಾರ್ಡ್‌ನಲ್ಲಿಸೈಬರ್‌ ಕ್ರೈಂ ಜಾಗೃತಿ..!


ಮೂಲತಃ ಹಾವೇರಿ ಜಿಲ್ಲೆತಿಳವಳ್ಳಿಯವರಾದ ಕಾರವಾರದ ಜಿಲ್ಲಾಸೈಬರ್‌ ಅಪರಾಧ ಠಾಣೆ ಸಿಬ್ಬಂದಿ ನಾರಾಯಣ ಎಂ. ಎಸ್‌. ಈ ವಿಶಿಷ್ಟ ಪ್ರಯತ್ನ ಕೈಗೊಂಡವರು. ಡಿ. 12ರಂದು ತಿಳವಳ್ಳಿಯಲ್ಲಿಪ್ರತಿಭಾ ಅವರ ಜತೆ ನಾರಾಯಣ ಅವರ ವಿವಾಹ ಇದೆ. ಇವರ ವಿವಾಹ ಆಮಂತ್ರಣ ಪತ್ರಿಕೆ ಸಾಮಾನ್ಯದ್ದಲ್ಲ. ಎಲ್ಲಆಮಂತ್ರಣಗಳಂತೆ ಸಾಮಾನ್ಯ ವಿವರ ಜತೆಗೆ ಸೈಬರ್‌ ವಂಚನೆಗಳು ಯಾವ ರೀತಿ ಆಗುತ್ತವೆ ಮತ್ತು ಅವುಗಳಿಂದ ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದನ್ನು ಆಮಂತ್ರಣದಲ್ಲಿವಿವರಿಸಲಾಗಿದೆ.

ಏನಿದೆ ಪತ್ರಿಕೆಯಲ್ಲಿ?:
ವಿವಾಹ ಮುಹೂರ್ತ, ಸ್ಥಳ ಕುಟುಂಬದ ವಿವರಗಳಲ್ಲದೇ ಒಂದಿಡೀ ಪುಟವನ್ನು ಸೈಬರ್‌ ಅಪರಾಧಗಳ ಬಗೆಗಿನ ವಿವರಣೆಗೆ ಮೀಸಲಿಡಲಾಗಿದೆ. ಮೊದಲು ಸೈಬರ್‌ ವಂಚನೆ ವಿಧಾನಗಳನ್ನು ವಿವರಿಸಲಾಗಿದೆ. ಮೊಬೈಲ್‌ಗೆ ಬ್ಯಾಂಕಿನ ಹೆಸರಿನಲ್ಲಿಅಪರಿಚಿತ ಕರೆಗಳು ಬಂದಾಗ ಪಿನ್‌ ನಂಬರ್‌ ಇತ್ಯಾದಿ ನೀಡಿದರೆ ಹೇಗೆ ಹಣ ದೋಚುತ್ತಾರೆ, ವೈವಾಹಿಕ ಜಾಲತಾಣದಲ್ಲಿಮದುವೆ ಆಗುವುದಾಗಿ ನಂಬಿಸಿ ವಂಚಿಸುವುದು, ಉದ್ಯೋಗ ಕೊಡಿಸುವುದಾಗಿ ಸುಳ್ಳು ಭರವಸೆ, ಆನ್‌ಲೈನ್‌ ಖರೀದಿ ವಂಚನೆ ಇತ್ಯಾದಿ ವಿವರ ಜತೆಗೆ ಅವುಗಳಿಂದ ಹೇಗೆ ಎಚ್ಚರ ವಹಿಸಬೇಕು ಎಂಬ ಮಾಹಿತಿ ನೀಡಲಾಗಿದೆ.

ತಮ್ಮ ವೃತ್ತಿಯಲ್ಲಿಕಂಡು ಬಂದ ವಂಚನೆ ಪ್ರಕರಣಗಳ ಪೂರ್ವಾಪರ ಬಿಚ್ಚಿಟ್ಟಿರುವ ನಾರಾಯಣ, ವಂಚನೆಗೆ ಒಳಗಾದಂತೆ ಜಾಗೃತಿ ವಹಿಸುವುದೇ ಸರಿ ಮಾರ್ಗ ಎಂಬುದು ನನಗೆ ಮನವರಿಕೆ ಆಗಿದೆ ಎಂದಿದ್ದಾರೆ.

''ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಸೈಬರ್‌ ಅಪರಾಧ ಜಾಗೃತಿ ಉಪನ್ಯಾಸ ನೀಡುತ್ತ ಬಂದಿದ್ದೇನೆ. ವಿವಾಹ ಆಮಂತ್ರಣ ಪತ್ರಿಕೆ ಸಾವಿರಾರು ಜನರನ್ನು ತಲುಪುವುದರಿಂದ ಅದನ್ನು ಈಗ ಒಂದು ಮಾಧ್ಯಮವಾಗಿ ಬಳಸಿಕೊಂಡಿದ್ದೇನೆ'' ಎಂದು 'ವಿಜಯ ಕರ್ನಾಟಕ'ಕ್ಕೆ ನಾರಾಯಣ ತಿಳಿಸಿದ್ದಾರೆ.

ಪೊಲೀಸರಿಗೂ ಜಾಗೃತಿ: ಸೈಬರ್‌ ಪೊಲೀಸರಿಗೆ ವಿಶೇಷ ತರಬೇತಿ ನೀಡಲಾಗಿರುತ್ತದೆ. ಬೇರೆ ವಿಭಾಗದ ಪೊಲೀಸರಿಗೆ ಅಷ್ಟು ಮಾಹಿತಿ ಇರುವುದಿಲ್ಲ. ಈ ಹಿನ್ನೆಲೆಯಲ್ಲಿಕಾರವಾರದ ಎಲ್ಲಠಾಣೆಗಳ ನೊಟೀಸ್‌ ಬೋರ್ಡಿಗೂ ಆಮಂತ್ರಣ ಪತ್ರಿಕೆ ಲಗತ್ತಿಸಿ ಮಾಹಿತಿ ನೀಡುವ ಪ್ರಯತ್ನ ಮಾಡಲಾಗುತ್ತಿದೆ. ಅಲ್ಲದೇ ಬೀಟ್‌ ಪೊಲೀಸರು ಜನಸಂಪರ್ಕ ಸಭೆ ನಡೆಸುವುದರಿಂದ ಅವರಿಗೂ ಆಮಂತ್ರಣ ಪತ್ರಿಕೆ ಕೊಟ್ಟು ಸಭೆಯಲ್ಲಿಜನರಿಗೆ ಮಾಹಿತಿ ನೀಡುವಂತೆ ನಾರಾಯಣ ವಿನಂತಿಸಿದ್ದಾರೆ.

ಅಗಾಧ ಪ್ರತಿಭೆ: ಎಂಎ ಬಿಎಡ್‌ ಓದಿರುವ ನಾರಾಯಣ ರಂಗ ಕಲಾವಿದರಾಗಿಯೂ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಅಲ್ಲದೇ ಉತ್ತರ ಕನ್ನಡಕ್ಕೆ ಬಂದ ಮೇಲೆ ಇಲ್ಲಿನ ಯಕ್ಷಗಾನ ಕಲಿತು ಐದು ಪ್ರಸಂಗಗಳಲ್ಲಿವೇಷ ಕಟ್ಟಿದ್ದಾರೆ. ಅಲ್ಲದೇ ಪೊಲೀಸ್‌ ಟ್ರೇನಿಂಗ್‌ನಲ್ಲಿಸರ್ವೋತ್ತಮ ಪ್ರಶಿಕ್ಷಣಾರ್ಥಿ ಎಂಬ ರಾಷ್ಟ್ರ ಪ್ರಶಸ್ತಿ ಪಡೆದ ಜಿಲ್ಲೆಯ ಏಕೈಕ ಸಿಬ್ಬಂದಿ ಆಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ