Holi in Hampi: ಹಂಪಿಯಲ್ಲಿ ಹೋಳಿ ಬಣ್ಣಗಳಲ್ಲಿ ಮಿಂದೆದ್ದ ಪ್ರವಾಸಿಗರು; ವಿದೇಶಿಗರು ಕೂಡ ಭಾಗಿ

ವಿಜಯನಗರ: ವಿಶ್ವವಿಖ್ಯಾತ ಹಂಪಿ ವೀಕ್ಷಣೆಗೆ ಬಂದಿರುವ ದೇಶ, ವಿದೇಶದ ಪ್ರವಾಸಿಗರು ಸ್ಥಳೀಯರ ಜತೆಗೂಡಿ ಪರಸ್ಪರ ಬಣ್ಣ ಎರಚಿಕೊಂಡು ಹೋಳಿಯನ್ನು ಸಂಭ್ರಮದಿಂದ ಆಚರಿಸಿದರು. ಸ್ಮಾರಕಗಳ ವೀಕ್ಷಣೆಗೆ ಕಳೆದ ನಾಲ್ಕೈದು ದಿನಗಳಿಂದ ಹಂಪಿಯಲ್ಲಿ ಬೀಡುಬಿಟ್ಟಿದ್ದ ವಿದೇಶಿ ಪ್ರವಾಸಿಗರು ಹೋಳಿ ಬಣ್ಣಗಳಲ್ಲಿ ಮಿಂದೆದ್ದರು. ಸ್ಥಳೀಯ ಮಕ್ಕಳು, ಯುವಕರು ಹಾಗೂ ಸಾರ್ವಜನಿಕರೊಂದಿಗೆ ಬಣ್ಣದೋಕುಳಿಯಾಡಿ ಸಂಭ್ರಮಿಸಿದರು.

ಶ್ರೀ ವಿರೂಪಾಕ್ಷೇಶ್ವರ ದೇಗುಲ ಮುಂಭಾಗ, ರಾಜಬೀದಿ, ನದಿ ಪ್ರದೇಶ, ಎದುರು ಬಸವಣ್ಣ, ಬಸ್ ನಿಲ್ದಾಣ, ಗ್ರಾಮ ಪಂಚಾಯಿತಿ ಕಚೇರಿ, ಕಡಲೆಕಾಳು, ಸಾಸಿವೆ ಕಾಳು ಗಣಪತಿ ಪ್ರದೇಶ ಸೇರಿ ಕಮಲಾಪುರ ಹಾಗೂ ಕಡ್ಡಿರಾಂಪುರದ ಮಾರ್ಗಗಳಲ್ಲಿ ಬಣ್ಣದಾಟವಾಡುತ್ತಿದ್ದ ಪ್ರವಾಸಿಗರ ದಂಡೇ ಕಂಡುಬಂತು. ರಂಗು ರಂಗಿನ ಬಣ್ಣಗಳ ಖರೀದಿ ಜೋರಾಗಿತ್ತು. ಹೋಳಿ ಆಚರಣೆ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಹಂಪಿಯಲ್ಲಿ ನಾನಾ ಕಡೆಗಳಲ್ಲಿ ವಿದೇಶಿ ಪ್ರವಾಸಿಗರ ಹೋಳಿ ಸಂಭ್ರಮ ಮನೆ ಮಾಡಿತ್ತು. ಪರಸ್ಪರ ಬಣ್ಣ ಹಚ್ಚಿಕೊಂಡು ಹೋಳಿ ಶುಭಾಶಯ ವಿನಿಮಯ ಮಾಡಿಕೊಂಡರು. ಡೋಲಿಗೆ ಕುಣಿದು ಕುಪ್ಪಳಿಸಿದರು.

Vijaya Karnataka Web 8 Mar 2023, 4:41 pm
Loading ...