Please enable javascript.ಸಮರ್ಥ ಕಾಂಗ್ರೆಸ್ ನಾಯಕರ ಕೊರತೆ ಇದೆ - ಸಮರ್ಥ ಕಾಂಗ್ರೆಸ್ ನಾಯಕರ ಕೊರತೆ ಇದೆ - Vijay Karnataka

ಸಮರ್ಥ ಕಾಂಗ್ರೆಸ್ ನಾಯಕರ ಕೊರತೆ ಇದೆ

Vijaya Karnataka Web 15 Mar 2014, 3:36 pm
Subscribe

ಪುರಸಭೆ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ನಲ್ಲಿ ಸಮರ್ಥ ನಾಯಕರ ಕೊರತೆ ಇದೆ ಎಂದು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಪರಾಭವಗೊಂಡ ಸದಸ್ಯರಾದ ನೀಲಪ್ಪ ನಾಯಕ, ಪರಶುರಾಮ ಅಡಗಿಮನಿ ಹೇಳಿದರು.

ಸಮರ್ಥ ಕಾಂಗ್ರೆಸ್ ನಾಯಕರ ಕೊರತೆ ಇದೆ
ಬಸವನಬಾಗೇವಾಡಿ: ಪುರಸಭೆ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ನಲ್ಲಿ ಸಮರ್ಥ ನಾಯಕರ ಕೊರತೆ ಇದೆ ಎಂದು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಪರಾಭವಗೊಂಡ ಸದಸ್ಯರಾದ ನೀಲಪ್ಪ ನಾಯಕ, ಪರಶುರಾಮ ಅಡಗಿಮನಿ ಹೇಳಿದರು.
ಈ ಎರಡು ಸ್ಥಾನಕ್ಕೆ ಚುನಾವಣೆ ಮುಗಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಓದು ಬರಹ ಬಲ್ಲವರು ಅಧ್ಯಕ್ಷರಾಗಿದ್ದರೆ ಎಲ್ಲ ಸದಸ್ಯರು ಸೇರಿ ಪಟ್ಟಣ ಅಭಿವೃದ್ಧಿ ಮಾಡುವುದು ಸುಲಭ. ಅದೇ(ಕಾಂಗ್ರೆಸ್) ಪಕ್ಷದ 19ನೇ ವಾರ್ಡ್ ಸದಸ್ಯ ಓದು ಬಲ್ಲವರಾಗಿದ್ದರು. ಅವರನ್ನು ಮೊದಲ ಅವಧಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರೆ ಅವರು ಕಚೇರಿಗೆ ಬರುವ ಪತ್ರ ಓದಿ ಬೆಂಗಳೂರಿಗೆ ಅಲೆದಾಡಿ ಎಲ್ಲರ ಸಹಕಾರದಿಂದ ನಾನಾ ಕಾಮಗಾರಿ ತರುತ್ತಿದ್ದರು ಎಂದರು.
ಈ ಹಿಂದಿನ ಅವಧಿಯಲ್ಲಿಯೂ ಓದು ಬಲ್ಲವರು ಅಧ್ಯಕ್ಷರಾಗಿದ್ದು, ಅಭಿವೃದ್ಧಿ ದೃಷ್ಟಿಯಿಂದ ತೊಂದರೆಯಾಗಿತ್ತು ಎಂಬುದು ಎಲ್ಲರಿಗೆ ತಿಳಿದಿದೆ. ಶಾಸಕ ಶಿವಾನಂದ ಪಾಟೀಲರು ಇಂದಿನ ಚುನಾವಣೆಯಲ್ಲಿ ಅವಿರೋಧ ಆಯ್ಕೆಗೆ ಒಪ್ಪಿರಿ ಎಂದು ನಮಗೆ ಕೇಳಿದ್ದಕ್ಕೆ ನಮಗೆ ಉಪಾಧ್ಯಕ್ಷ ಸ್ಥಾನ ಕೊಟ್ಟರೆ ನಾವು ನಿಮ್ಮ ಮಾತಿಗೆ ಸಿದ್ಧ ಎಂದೆವು. ಅದಕ್ಕೆ ಅವರು ಒಪ್ಪಲಿಲ್ಲ. ಇದರಿಂದ ನಮ್ಮ 9 ಜನ ಸದಸ್ಯ ಬಲವನ್ನು ನಾವು ಪ್ರದರ್ಶಿಸಿದ್ದೇವೆ. ಅಭಿವೃದ್ಧಿ ಕೆಲಸಕ್ಕೆ ನಮ್ಮೆಲರ ಬೆಂಬಲಿವಿದೆ. ಆದರೆ ಅನ್ಯಾಯವನ್ನು ಮಾತ್ರ ನಾವು ಸಹಿಸುವುದಿಲ್ಲ. ನಾವು ಜನ ಸೇವಕರು ಎಂದರು. ಸದಸ್ಯರಾದ ಮುತ್ತು ಕಿಣಗಿ, ಜೈಸಿಂಗ್ ನಾಯಕ, ಚಂದ್ರಶೇಖರ ಅಂಬಳನೂರ, ಪ್ರವೀಣ ಪವಾರ ಸೇರಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ