Please enable javascript.ಉದ್ಯೋಗಮೇಳ ನಿರೀಕ್ಷೆಗಿಂತ ಯಶಸ್ವಿ: ನಾಡಗೌಡ - ಉದ್ಯೋಗಮೇಳ ನಿರೀಕ್ಷೆಗಿಂತ ಯಶಸ್ವಿ: ನಾಡಗೌಡ - Vijay Karnataka

ಉದ್ಯೋಗಮೇಳ ನಿರೀಕ್ಷೆಗಿಂತ ಯಶಸ್ವಿ: ನಾಡಗೌಡ

Vijaya Karnataka Web 9 Nov 2015, 3:00 am
Subscribe

ಪಟ್ಟಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ಉದ್ಯೋಗಮೇಳ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಯಶಸ್ವಿಯಾಗಿದೆ ಎಂದು ಸರಕಾರದ ದೆಹಲಿ ವಿಶೇಷ ಪ್ರತಿನಿಧಿ, ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅಭಿಪ್ರಾಯಪಟ್ಟರು.

ಉದ್ಯೋಗಮೇಳ ನಿರೀಕ್ಷೆಗಿಂತ ಯಶಸ್ವಿ: ನಾಡಗೌಡ
ತಾಳಿಕೋಟೆ: ಪಟ್ಟಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ಉದ್ಯೋಗಮೇಳ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಯಶಸ್ವಿಯಾಗಿದೆ ಎಂದು ಸರಕಾರದ ದೆಹಲಿ ವಿಶೇಷ ಪ್ರತಿನಿಧಿ, ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅಭಿಪ್ರಾಯಪಟ್ಟರು.

ಅವರು ಸ್ಥಳೀಯ ಎಸ್.ಕೆ.ಪ್ರೌಢಶಾಲೆ ಮೈದಾನದಲ್ಲಿ ಶನಿವಾರ ಮುಕ್ತಾಯಗೊಂಡ ರಾಜ್ಯ ಮಟ್ಟದ ಬೃಹತ್ ಉದ್ಯೋಗ ಹಾಗೂ ಕೌಶಲ್ಯ ಅಭಿವೃದ್ಧಿ ಮೇಳದ ಸಮಾರೋಪದಲ್ಲಿ ಸಮಾರಂಭದಲ್ಲಿ ಮಾತನಾಡಿದರು.

ಶೇ. 50 ರಷ್ಟು ಉದ್ಯೋಗಾಕಾಂಕ್ಷಿಗಳು ಇದರಲ್ಲಿ ಉದ್ಯೋಗ ಪಡೆದುಕೊಂಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ನಾನಾ ಕಾರಣಗಳಿಂದ ಹಾಗೂ ಕಂಪನಿಗಳ ಹೊಸ ಯೋಚನೆಗಳಿಂದ ಗ್ರಾಮೀಣ ಭಾಗದ ತಾಳಿಕೋಟೆಗೆ ಕೆಲ ಹೆಸರಾಂತ ಕಂಪನಿಗಳು ಬಂದಿಲ್ಲ. ಹಾಗಂತ ಗ್ರಾಮೀಣ ಭಾಗದ ಉದ್ಯೋಗಾರ್ಥಿಗಳನ್ನು ಅವರು ಉದ್ಯೋಗಾವಕಾಶಕ್ಕೆ ನಿರಾಕರಿಸುವುದಿಲ್ಲ, ಯಾವ ಕಂಪನಿಗಳಿಗೆ ಅವಶ್ಯಕತೆಯಿದೆಯೋ ಅಂತಹ ಕಂಪನಿಗಳು ಇಲ್ಲಿ ಬಂದಿವೆ. ಇಲ್ಲಿ ಉದ್ಯೋಗ ಸಿಗದವರು ನಿರಾಶರಾಗಬೇಡಿ. ಇದು ಒಂದು ಅನುಭವ ಎಂದು ತಿಳಿದು, ಇಲ್ಲಿ ಆದ ಲೋಪಗಳನ್ನು ಸರಿಪಡಿಸಿಕೊಂಡು ಮತ್ತೆ ಪ್ರಯತ್ನ ಮಾಡಬೇಕು ಎಂದರು.

ಮೇಳದ ಯಶಸ್ಸಿಗೆ ವ್ಯಾಪಕ ಪ್ರಚಾರ ಮಾಡಿದ ಮಾಧ್ಯಮದವರಿಗೆ ನಾನಾ ಇಲಾಖೆಗಳಿಗೆ ಕೃತಜ್ಞತೆ ಅರ್ಪಿಸಿದ ಅವರು ರಾಜ್ಯದಲ್ಲಿ ಈ ಮೇಳವನ್ನು ಒಂದೇ ದಿನಕ್ಕೆ ಸೀಮಿತಗೊಳಿಸುತ್ತಾರೆ. ಆದರೆ ಇಲ್ಲಿ ಎರಡು ದಿನಕ್ಕೆ ಮಾಡಿದ್ದು ಇದೇ ಮೊದಲು.

ಮೊದಲ ದಿನ 1208 ಜನ ಉದ್ಯೋಗ ಪಡೆದರೆ ಎರಡನೇ ದಿನ 1588 ಜನ ಉದ್ಯೋಗ ಪಡೆದಿದ್ದು ಒಟ್ಟು 2796 ಜನತೆಗೆ ಅವಕಾಶ ದೊರೆತಿದೆ ಎಂದರು.

ಎ.ಎಲ್‌ಪುಷ್ಪಾ ಲಕ್ಷ್ಮಣಸ್ವಾಮಿ, ಉಪವಿಭಾಗಾಧಿಕಾರಿ ಪರಶುರಾಮ ಮಾದರ ಮಾತನಾಡಿದರು. ವೇದಿಕೆಯಲ್ಲಿ ವೀವ ಸಂಘದ ಅಧ್ಯಕ್ಷ ಐ.ಆರ್.ಜಾಲವಾದಿ, ಕಾರ್ಯದರ್ಶಿ ಬಿ.ಎಸ್.ಗಬಸಾವಳಗಿ, ಬಿ.ಎಸ್.ಪಾಟೀಲ(ಯಾಳಗಿ)ಶಂಕ್ರಗೌಡ ಹಿಪ್ಪರಗಿ, ಸಿದ್ದನಗೌಡ

ಪಾಟೀಲ, ಡಾ.ಎಂ.ಆರ್.ನಾಡಗೌಡ, ಕಾಶಿನಾಥ ಮುರಾಳ, ಜಿ.ಎಸ್.ಕಶೆಟ್ಟಿ, ಜಂಟಿ ನಿರ್ದೇಶಕ ಎಂ.ಎಲ್.ಹಾಲಳ್ಳಿ, ತಹಶೀಲ್ದಾರ ಎಂ.ಎಸ್.ಬಾಗವಾನ, ಶ್ರೀಕಾಂತ ಮಾಲಗತ್ತಿ, ಉಪಸ್ಥಿತರಿದ್ದರು. ಶ್ರೀನಿವಾಸಮೂರ್ತಿ ಸ್ವಾಗತಿಸಿದರು.

ಮೊದಲ ದಿನಕ್ಕಿಂತ ಇಂದು ಗದ್ದಲ ಕಡಿಮೆಯಿತ್ತು. ಊಟ, ನೀರು ಇತರೆ ವ್ಯವಸ್ಥೆ ಅಚ್ಚುಕಟ್ಟಾಗಿ ನಿರ್ವಹಿಸಲಾಗಿತ್ತು.

18315, ಭಾಗವಹಿಸಿದ ಉದ್ಯೋಗಾರ್ಥಿಗಳ ಸಂಖ್ಯೆ 433 ಎಸ್ಸೆಸ್ಸೆಲ್ಸಿಗಿಂತ ಕಡಿಮೆ ವಿದ್ಯಾರ್ಹತೆ 7076 ಎಸ್ಸೆಸ್ಸೆಲ್ಸಿ, ಪಿಯುಸಿ ಉತ್ತೀರ್ಣ 4327 ಐಟಿಐ, ಜೆಓಸಿ 1299 ಡಿಪ್ಲೊಮಾ, 2829 ಪದವಿಧರರು, 1145 ಸ್ನಾತಕೋತ್ತರ ಪದವಿಧರರು 1264 ಬಿ.ಇ,ಬಿಟೆಕ್ ಪದವಿಧರರು 2796 ಸ್ಥಳದಲ್ಲಿಯೇ ಉದ್ಯೋಗಕ್ಕೆ ಆಯ್ಕೆಯಾದವರು 1981 ತರಬೇತಿಗೆ ಆಯ್ಕೆಯಾದವರು 5653 ಶಾರ್ಟ್‌ಲಿಸ್ಟ್‌ನಲ್ಲಿದ್ದವರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ