Please enable javascript.ಮಾಸ್ಟರ ಪ್ಲಾನ್ ತ್ವರಿತಗೊಳಿಸಲು ಜಿಲ್ಲಾಡಳಿತಕ್ಕೆ ಮನವಿ - ಮಾಸ್ಟರ ಪ್ಲಾನ್ ತ್ವರಿತಗೊಳಿಸಲು ಜಿಲ್ಲಾಡಳಿತಕ್ಕೆ ಮನವಿ - Vijay Karnataka

ಮಾಸ್ಟರ ಪ್ಲಾನ್ ತ್ವರಿತಗೊಳಿಸಲು ಜಿಲ್ಲಾಡಳಿತಕ್ಕೆ ಮನವಿ

Vijaya Karnataka Web 9 Dec 2015, 7:55 pm
Subscribe

ನಗರದಲ್ಲಿ ಮಾಸ್ಟರ್ ಪ್ಲಾನ್ ಕಾಮಗಾರಿ ತ್ವರಿತಗೊಳಿಸಿ ಶೀಘ್ರ ಮುಕ್ತಾಯಗೊಳಿಸಬೇಕೆಂದು ಒತ್ತಾಯಿಸಿ ಭಾರತೀಯ ಭಾವೈಕ್ಯತೆ ಸಮಿತಿ ಸಂಚಾಲಕ ಡಾ. ರವಿ ವಲ್ಯ್‌ಪುರ ನೇತತ್ವದಲ್ಲಿ ಸಮಿತಿ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಮಾಸ್ಟರ ಪ್ಲಾನ್ ತ್ವರಿತಗೊಳಿಸಲು ಜಿಲ್ಲಾಡಳಿತಕ್ಕೆ ಮನವಿ
ವಿಜಯಪುರ: ನಗರದಲ್ಲಿ ಮಾಸ್ಟರ್ ಪ್ಲಾನ್ ಕಾಮಗಾರಿ ತ್ವರಿತಗೊಳಿಸಿ ಶೀಘ್ರ ಮುಕ್ತಾಯಗೊಳಿಸಬೇಕೆಂದು ಒತ್ತಾಯಿಸಿ ಭಾರತೀಯ ಭಾವೈಕ್ಯತೆ ಸಮಿತಿ ಸಂಚಾಲಕ ಡಾ. ರವಿ ವಲ್ಯ್‌ಪುರ ನೇತತ್ವದಲ್ಲಿ ಸಮಿತಿ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಸಂಚಾಲಕ ಡಾ.ರವಿ ವಲ್ಯ್‌ಪುರ, ಈಗ ಸದ್ಯ ಅಂಬೇಡ್ಕರ್ ವೃತ್ತದಿಂದ ಶಿವಾಜಿ ವೃತ್ತದವರೆಗೆ ಮಾತ್ರ ಕಾಮಗಾರಿ ಕೈಗೊಳ್ಳಲಾಗಿದೆ. ಅದನ್ನು ಗೋಲಗುಮ್ಮಟದಿಂದ ಗೋದಾವರಿ ಹೋಟೆಲ್‌ವರೆಗೆ ಪೂರ್ಣಗೊಳಿಸಬೇಕು. ಸಿದ್ದೇಶ್ವರ ರಸ್ತೆಯಲ್ಲಿ ಮೊದಲಿದ್ದ ಅಳತೆಯಲ್ಲಿಯೇ ಮಾಸ್ಟರ್‌ಪ್ಲಾನ್ ಮಾಡಬೇಕು. ಇನ್ನುಳಿದ ಆಜಾದ್ ರಸ್ತೆ, ಸರಾಫ ಬಜಾರ ರಸ್ತೆ, ಬಸವೇಶ್ವರ ವೃತ್ತದಿಂದ ಟಿಪ್ಪು ಸುಲ್ತಾನ ಸರ್ಕಲ್‌ವರೆಗೆ ರಸ್ತೆ ಅಗಲೀಕರಣ ಮಾಡಬೇಕು ಎಂದವರು ಒತ್ತಾಯಿಸಿದರು. ನಗರದಲ್ಲಿ ಮಾಸ್ಟರ್ ಪ್ಲಾನ್ ಕಾರ್ಯ ನಡೆದು ಒಂದು ವರ್ಷ ಕಳೆದರೂ ಇನ್ನೂ ಬಸವೇಶ್ವರ ವೃತ್ತದಿಂದ ಶಿವಾಜಿ ವೃತ್ತದವರೆಗಿನ ರಸ್ತೆಯ ಫುಟ್‌ಪಾತ ನಿರ್ಮಿಸಿಲ್ಲ. ವಾಹನ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಕೂಡಲೇ ಇನ್ನುಳಿದ ರಸ್ತೆಗಳನ್ನೂ ಸಹ ಮಾಸ್ಟರ್ ಪ್ಲಾನ್‌ನಡಿ ಕೈಗೆತ್ತಿಕೊಂಡು ಪೂರ್ಣಗೊಳಿಸಿಬೇಕು. ವಿಜಯಪುರ ನಗರದ ವಾರ್ಡ್‌ಗಳಲ್ಲಿ ಒಳಚರಂಡಿ ವ್ಯವಸ್ಥೆ, ರಸ್ತೆಗಳು ಹಾಳಾಗಿದ್ದು ಅವುಗಳನ್ನು ದುರಸ್ತಿಗೊಳಿಸಿ, ಮೂಲ ಸೌಲಭ್ಯ ಕಲ್ಪಿಸಬೇಕೆಂದವರು ಆಗ್ರಹಿಸಿದರು. ನಗರವು ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ. ಹೀಗಾಗಿ ನಗರಕ್ಕೆ ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಇಲ್ಲಿಯ ಅವ್ಯವಸ್ಥೆ ಕಂಡು ಪ್ರವಾಸಿಗರು ಹಾಗೂ ಸಾರ್ವಜನಿಕರು ಹಿಡಿಶಾಪ ಹಾಕುವುದು ನಿಲ್ಲುತ್ತಿಲ್ಲ ಎಂದವರು ಆಕ್ರೋಶ ವ್ಯಕ್ತಪಡಿಸಿದರು. ನಗರದ ಪೊಲೀಸರು ವಾಹನ ಸವಾರರು ಹಾಗೂ ಬೀದಿ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ತೊಂದರೆ ಕೊಡುತ್ತಿದ್ದುದನ್ನು ಬಲವಾಗಿ ಖಂಡಿಸಿದ ವಲ್ಯ್‌ಪುರ, ಕೂಡಲೇ ಜಿಲ್ಲಾಧಿಕಾರಿ ಸೂಕ್ತ ಕ್ರಮಕ್ಕೆ ಜಿಲ್ಲಾ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು. ಮಹಿಬೂಬ ಮುಲ್ಲಾ, ಅಬ್ದುಲರಹಮಾನ ಸಂಖ, ಹುಸೇನ ಶೇಖ, ರಂಜೀತ ಕಾಂಬ್ಳೆ, ಮಹ್ಮದ ಮನಗೂಳಿ, ಆರೀಫ, ಅಹೆಮದ ಲಪ್ಪೆ, ಫಿರೋಜ ಸಂಖ, ಮಹಿಬೂಬ ತಿಕೋಟಕರ, ತೌಫೀಕ ಮನಿಯಾರ, ಹಸನ ಕೇಶಾಪೂರ, ಹಾಜಿಮಾಮು ಬಡೆಘರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ