Please enable javascript.ಪ್ರೊ. ಸಬಿಹಾ ಭೂಮಿಗೌಡ ಮವಿವಿ ನೂತನ ಕುಲಪತಿ - ಪ್ರೊ. ಸಬಿಹಾ ಭೂಮಿಗೌಡ ಮವಿವಿ ನೂತನ ಕುಲಪತಿ - Vijay Karnataka

ಪ್ರೊ. ಸಬಿಹಾ ಭೂಮಿಗೌಡ ಮವಿವಿ ನೂತನ ಕುಲಪತಿ

ವಿಕ ಸುದ್ದಿಲೋಕ 21 Jun 2016, 9:00 am
Subscribe

ಇಲ್ಲಿನ ಮಹಿಳಾ ವಿವಿಯ ನೂತನ ಕುಲಪತಿಯಾಗಿ ಮಂಗಳೂರು ವಿವಿಯ ಕನ್ನಡ ಪ್ರಾಧ್ಯಾಪಕಿ ಹಾಗೂ ಸಾಹಿತಿ ಪ್ರೊ.ಸಬಿಹಾ ಭೂಮಿಗೌಡ ಸೋಮವಾರ ಅಧಿಕಾರ ವಹಿಸಿಕೊಂಡರು. ಇದರೊಂದಿಗೆ ಮಾ.8ರಿಂದ ತೆರುವಾಗಿದ್ದ ಕುಲಪತಿ ಹುದ್ದೆ ಭರ್ತಿಯಾದಂತಾಯಿತು.

ಪ್ರೊ. ಸಬಿಹಾ ಭೂಮಿಗೌಡ ಮವಿವಿ ನೂತನ ಕುಲಪತಿ

ವಿಜಯಪುರ: ಇಲ್ಲಿನ ಮಹಿಳಾ ವಿವಿಯ ನೂತನ ಕುಲಪತಿಯಾಗಿ ಮಂಗಳೂರು ವಿವಿಯ ಕನ್ನಡ ಪ್ರಾಧ್ಯಾಪಕಿ ಹಾಗೂ ಸಾಹಿತಿ ಪ್ರೊ.ಸಬಿಹಾ ಭೂಮಿಗೌಡ ಸೋಮವಾರ ಅಧಿಕಾರ ವಹಿಸಿಕೊಂಡರು. ಇದರೊಂದಿಗೆ ಮಾ.8ರಿಂದ ತೆರುವಾಗಿದ್ದ ಕುಲಪತಿ ಹುದ್ದೆ ಭರ್ತಿಯಾದಂತಾಯಿತು.

ಅಧಿಕಾರ ಸ್ವೀಕರಿಸಿದ ಬಳಿಕ ನೂತನ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ, ರಾಜ್ಯದ ಏಕೈಕ ಮಹಿಳಾ ವಿವಿಯನ್ನು ಎಲ್ಲ ವರ್ಗಗಳ ಮಹಿಳಾ ಸ್ನೇಹಿಯನ್ನಾಗಿಸುವುದಾಗಿ ತಿಳಿಸಿದರು.

ಮಹಿಳಾ ಸಂಶೋಧನೆಗಳ ಪ್ರಕಟಣೆ, ನಾನಾ ಕೋರ್ಸ್‌ಗಳ ಪಠ್ಯಕ್ರಮ ಪರಿಷ್ಕರಣೆ ಮುಂತಾದ ಕ್ರಮಗಳ ಮೂಲಕ ಮಹಿಳಾ ವಿವಿಯನ್ನು ವಿಶಿಷ್ಟ ರೀತಿಯಲ್ಲಿ ರೂಪಿಸುವುದಾಗಿ ತಿಳಿಸಿದ ಅವರು, ಈ ನಿಟ್ಟಿನಲ್ಲಿ ಬರುವ ದಿನಗಳಲ್ಲಿ ಹಲವು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಶೈಕ್ಷ ಣಿಕ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳನ್ನು ಬಲಪಡಿಸುವ ಮೂಲಕ ಮಹಿಳಾ ವಿವಿಯ ಕಾರ್ಯ ಚಟುವಟಿಕೆಗಳನ್ನು ರಾಜ್ಯಮಟ್ಟಕ್ಕೆ ವಿಸ್ತರಿಸುವ ಮಹತ್ವದ ಹೊಣೆಗಾರಿಕೆ ನಿಭಾಯಿಸಬೇಕಿದೆ. ಈ ಹಂತದಲ್ಲಿ ಎಲ್ಲರ ನೆರವು, ಸಹಕಾರ, ಮಾರ್ಗದರ್ಶನ ಪಡೆಯುವುದಾಗಿ ಪ್ರೊ.ಸಬಿಹಾ ತಿಳಿಸಿದರು.

ಈಗಾಗಲೇ ಸ್ಥಾಪನೆಯಾಗಿರುವ ಮಹಿಳಾ ತಂತ್ರಜ್ಞಾನ ಪಾರ್ಕ್‌ನ ಕಾರ್ಯ ಚಟುವಟಿಕೆಗಳನ್ನು ಇನ್ನಷ್ಟು ಬಲಪಡಿಸುವ ಮೂಲಕ ಕೆಳ ವರ್ಗದ ಮತ್ತು ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಲಾಗುವುದು. ಮಹಿಳಾ ವಿವಿಯನ್ನು ಜನಪರ ವಿವಿಯನ್ನಾಗಿ ರೂಪಿಸುವುದು ತಮ್ಮ ಆದ್ಯತೆಯಾಗಿದೆ ಎಂದವರು ತಿಳಿಸಿದರು.

ಕುಲಸಚಿವ ಪ್ರೊ.ಕೆ.ಪಿ.ಶ್ರೀನಾಥ್‌, ಮೌಲ್ಯಮಾಪನ ಕುಲಸಚಿವ ಪ್ರೊ.ಎಸ್‌.ಬಿ.ಮಾಡಗಿ, ಹಣಕಾಸು ಅಧಿಕಾರಿ ಡಾ.ಕೆ.ಎಂ.ಸಂಜೀವಕುಮಾರ ಮತ್ತಿತರರಿದ್ದರು.

ನೂತನ ಕುಲಪತಿಗಳನ್ನು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸಂಘದ ಪರವಾಗಿ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.

ಹಿಂದಿನ ಕುಲಪತಿ ಪ್ರೊ.ಮೀನಾ ಚಂದಾವರಕರ್‌ ನಿವೃತ್ತಿ ನಂತರ ಎರಡೂವರೆ ತಿಂಗಳು ಕಳೆದರೂ ಕುಲಪತಿ ಹುದ್ದೆ ಭರ್ತಿಯಾಗಿರಲಿಲ್ಲ. ಇದರಿಂದಾಗಿ ವಿಜಯ ಕರ್ನಾಟಕ ಪತ್ರಿಕೆ ಮೇ 23ರ ಸಂಚಿಕೆಯಲ್ಲಿ ಮಹಿಳಾ ವಿವಿಯ ಕುಲಪತಿ ಹುದ್ದೆಗೆ ಲಾಬಿ ಜೋರು ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ವರದಿಯಲ್ಲಿ ಪ್ರೊ.ಸಬಿಹಾ ಭೂಮಿಗೌಡ ಪ್ರಬಲ ಆಕಾಂಕ್ಷಿಯಾಗಿದ್ದನ್ನು ವರದಿಯಲ್ಲಿ ಉಲ್ಲೇಖಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ