ಆ್ಯಪ್ನಗರ

ಐದನೇ ತಲೆಮಾರಿನ ಯುದ್ಧವಿಮಾನ ಎಎಂಸಿಎಗೆ ಸಿಸಿಎಸ್ ಅನುಮತಿ: ಮತ್ತಷ್ಟು ವಿಸ್ತಾರ ಭಾರತದ ರಕ್ಷಣಾ ದಿಗಂತ

ಜನವರಿ 7ರಂದು, ರಕ್ಷಣಾ ಸಂಸದೀಯ ಸಮಿತಿ (CCS) ಭಾರತದ ಮಹತ್ವಾಕಾಂಕ್ಷಿ ಐದನೇ ತಲೆಮಾರಿನ ಯುದ್ಧ ವಿಮಾನವಾದ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್‌ನ (AMCA) ವಿನ್ಯಾಸ, ಮತ್ತು ನಿರ್ಮಾಣಕ್ಕೆ ಅನುಮತಿ ನೀಡಿದೆ ಎಂದು ರಕ್ಷಣಾ ಮೂಲಗಳು ಮಾರ್ಚ್ 7ರಂದು ವರದಿ ಮಾಡಿವೆ. ಎಎಂಸಿಎ ಅನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) 15,000 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಿದೆ. ಈ ಬಗ್ಗೆ ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ ಗಿರೀಶ್ ಲಿಂಗಣ್ಣ ಅವರ ವಿಶೇಷ ಲೇಖನ ಇಲ್ಲಿದೆ.

Authored byಗಿರೀಶ್ ಲಿಂಗಣ್ಣ | Edited byಗಣೇಶ್ ಪ್ರಸಾದ್ ಕುಂಬ್ಳೆ | Vijaya Karnataka Web 8 Mar 2024, 2:03 pm
  • ಗಿರೀಶ್ ಲಿಂಗಣ್ಣ
ಭಾರತದ ಮಹತ್ವಾಕಾಂಕ್ಷಿ ಐದನೇ ತಲೆಮಾರಿನ ಐದನೇ ತಲೆಮಾರಿನ ಯುದ್ಧವಿಮಾನವಾದ ಅಡ್ವಾನ್ಸ್ ಡ್ ಮೀಡಿಯಂ ಕಾಂಬಾಟ್ ಏರ್ ಕ್ರಾಫ್ಟ್ ನ ವಿನ್ಯಾಸ ಮತ್ತು ನಿರ್ಮಾಣಕ್ಕೆ ರಕ್ಷಣಾ ಸಂಸದೀಯ ಸಮಿತಿ ಜನವರಿ 7ರಂದು ಹಸಿರು ನಿಶಾನೆ ತೋರಿಸಿದೆ. ದೇಶದ ಹೆಮ್ಮೆಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಸುಮಾರು 15 ಸಾವಿರ ಕೋಟಿ ರೂ ವೆಚ್ಚದಲ್ಲಿ ಈ ವಿಮಾನವನ್ನು ತಯಾರಿಸಲಿದೆ.
Vijaya Karnataka Web AMCA
ಅಡ್ವಾನ್ಸ್ ಡ್ ಮೀಡಿಯಂ ಕಾಂಬಾಟ್ ಏರ್ ಕ್ರಾಫ್ಟ್.


ಎಎಂಸಿಎ 25 ಟನ್ ತೂಕದ, ಎರಡು ಇಂಜಿನ್‌ಗಳ, ಸ್ಟೆಲ್ತ್ ಸಾಮರ್ಥ್ಯವುಳ್ಳ, 360 ಡಿಗ್ರಿ ಪರಿಸ್ಥಿತಿಯ ಅರಿವು ಹೊಂದಿರುವ ಯುದ್ಧ ವಿಮಾನವಾಗಿದೆ. ಇದು ಕನಿಷ್ಠ ರೇಡಾರ್ ಸಿಗ್ನೇಚರ್ ಹೊಂದಿದ್ದು, ಒಂದು ಆಂತರಿಕ ಆಯುಧಾಗಾರವನ್ನೂ ಹೊಂದಿದೆ. ಇದು ಭಾರತದಲ್ಲಿ ಅಭಿವೃದ್ಧಿ ಹೊಂದಿರುವ ಮೊತ್ತ ಮೊದಲ ಡೈವರ್ಟ್‌ಲೆಸ್ ಸೂಪರ್‌ಸಾನಿಕ್ ಇನ್‌ಟೇಕ್ ಆಗಿದ್ದು, 1,500 ಕೆಜಿಗಳಷ್ಟು ಪೇಲೋಡ್ ಮತ್ತು 5,500 ಕೆಜಿಗಳಷ್ಟು ಬಾಹ್ಯ ಪೇಲೋಡ್ ಮತ್ತು 6,500 ಕೆಜಿ ಆಂತರಿಕ ಇಂಧನ ಒಯ್ಯಬಲ್ಲ ಸಾಮರ್ಥ್ಯ ಹೊಂದಿದೆ.

PoK Blunder- ಪಿಒಕೆ ಬ್ಲಂಡರ್​ಗಳಿಗೆ ನಿಜಕ್ಕೂ ನೆಹರು ಕಾರಣರೇ? ಇತಿಹಾಸ ಬಿಚ್ಚಿಟ್ಟ ಸತ್ಯಗಳೇನು?

ಹಗುರ ಮತ್ತು ಸುಲಭ ನಿರ್ವಹಣೆ

ಭಾರತದ 'ಮೊತ್ತ ಮೊದಲ ಡೈವರ್ಟ್‌ಲೆಸ್ ಸೂಪರ್‌ಸಾನಿಕ್ ಇನ್‌ಟೇಕ್' ಎಂದರೆ, ಯುದ್ಧ ವಿಮಾನಗಳಿಗೆ ಹೆಚ್ಚಿನ ಸಂಕೀರ್ಣ ಬಿಡಿಭಾಗಗಳ ಅವಶ್ಯಕತೆ ಇಲ್ಲದೆ ಅತ್ಯಂತ ವೇಗವಾಗಿ ಸಂಚರಿಸುವ ಅವಕಾಶ ಕಲ್ಪಿಸುವುದಾಗಿದೆ. ಭಾರತದಲ್ಲೇ ನಿರ್ಮಿತವಾಗಿರುವ ಇದು ಯುದ್ಧ ವಿಮಾನವನ್ನು ಹೆಚ್ಚು ಸ್ಟೆಲ್ತ್, ಹಗುರ ಮತ್ತು ನಿರ್ವಹಣೆಗೆ ಸುಲಭವಾಗಿಸುತ್ತದೆ.

ಈ ಮೊದಲು, ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಯ (ಎಡಿಎ) ಪ್ರತಿನಿಧಿಗಳು ಎಎಂಸಿಎ ಯೋಜನೆಗೆ ಅನುಮತಿ ದೊರೆತ ಮೂರು ವರ್ಷಗಳ ಒಳಗಾಗಿ, ಯುದ್ಧ ವಿಮಾನದ ಮೂಲ ಮಾದರಿಯನ್ನು ಅನಾವರಣಗೊಳಿಸಲಾಗುತ್ತದೆ ಎಂದಿದ್ದರು. ಅದಾದ ಒಂದು - ಒಂದೂವರೆ ವರ್ಷಗಳ ಒಳಗೆ ಆರಂಭಿಕ ಹಾರಾಟ ನಡೆಸಲಾಗುವುದು ಎನ್ನಲಾಗಿತ್ತು. ಎಎಂಸಿಎಯ ಉದ್ದೇಶಿತ ಉತ್ಪಾದಕ ಸಂಸ್ಥೆಯಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಈಗಾಗಲೇ ಉತ್ಪಾದನಾ ಚಟುವಟಿಕೆಗಳನ್ನು ಆರಂಭಿಸಿದೆ.

ನಿತ್ಯ ನೂತನ ಉಡಾವಣೆಗಳೊಂದಿಗೆ ಬೆಳೆಯುತ್ತಿದೆ ಭಾರತೀಯ ಬಾಹ್ಯಾಕಾಶ ಉದ್ಯಮ

2026ರ ವೇಳೆಗೆ ನಿರ್ಮಾಣ ಪೂರ್ಣ

ಈ ಯೋಜನೆಯಡಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಗರಿಷ್ಠ ಐದು ಎಎಂಸಿಎ ಮೂಲ ಮಾದರಿಗಳನ್ನು ನಿರ್ಮಿಸಲಿದ್ದು, 2026ರ ವೇಳೆಗೆ ಅವುಗಳ ನಿರ್ಮಾಣ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಗಳಿವೆ.

ಎಎಂಸಿಎ ಯೋಜನೆ ಭಾರತದ ರಕ್ಷಣಾ ಅಭಿವೃದ್ಧಿ ಯೋಜನೆಗಳ ಮಹತ್ವದ ಭಾಗವಾಗಿದ್ದು, ತೇಜಸ್ ಎಂಕೆ1ಎ ಮತ್ತು ಪ್ರಸ್ತುತ ಅಭಿವೃದ್ಧಿ ಹೊಂದುತ್ತಿರುವ ಎಂಕೆ2 ಯೋಜನೆಗಳ ಬಳಿಕ, ಭಾರತದ ಮೂರನೇ ಯುದ್ಧ ವಿಮಾನವಾಗಿದೆ. ಎಎಂಸಿಎ ಯೋಜನೆಯ ಮೂಲಕ, ಭಾರತ ಅತ್ಯಾಧುನಿಕ ಯುದ್ಧ ವಿಮಾನಗಳ ವಲಯದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸುವ ಗುರಿ ಹೊಂದಿದ್ದು, ವಿದೇಶೀ ವಿಮಾನಗಳ ಖರೀದಿಯ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವ ಮತ್ತು ತನ್ನ ಕಾರ್ಯತಂತ್ರದ ಸ್ವಾಯತ್ತತೆಯನ್ನು ಉತ್ತೇಜಿಸುವ ಗುರಿ ಹೊಂದಿದೆ.

ಎಎಂಸಿಎ ಯೋಜನೆ ಎರಡು ಹಂತಗಳಲ್ಲಿ ಜಾರಿಗೆ ಬರಲು ಸಿದ್ಧಗೊಳ್ಳುತ್ತಿದೆ. ಮೊದಲನೆಯ ಆವೃತ್ತಿಯಾದ ಎಂಕೆ1ಗೆ ಅಮೆರಿಕಾದ ಜನರಲ್ ಇಲೆಕ್ಟ್ರಿಕ್ ಎಫ್414 ಇಂಜಿನ್ ಶಕ್ತಿ ನೀಡಲಿದೆ. ಇದು 98 ಕೆಎನ್ ಥ್ರಸ್ಟ್ ಹೊಂದಿರಲಿದೆ. ಎರಡನೇ ಆವೃತ್ತಿಯಾದ ಎಂಕೆ2ಗೆ ಇನ್ನಷ್ಟು ಶಕ್ತಿಶಾಲಿಯಾದ ಇಂಜಿನ್‌ ಹೊಂದುವ ಗುರಿ ಹಾಕಿಕೊಳ್ಳಲಾಗಿದೆ.

ಮರಳಿ ಆರಂಭಗೊಂಡಿದೆ ಪರಮಾಣು ಶಸ್ತ್ರಾಸ್ತ್ರ ಸ್ಪರ್ಧೆ: ಜಾಗತಿಕ ನಾಯಕರು ದುರಂತ ನಡೆಯದಂತೆ ತಡೆಯಬಲ್ಲರೇ?

ಫ್ರಾನ್ಸ್ ನ ಸರನ್ ಜೊತೆ ಮಾತುಕತೆ

ಈ ಮಾದರಿಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿದ ವ್ಯವಸ್ಥೆಗಳನ್ನು ಹೊಂದುವ ರೀತಿ ವಿನ್ಯಾಸಗೊಳಿಸಲಾಗಿದ್ದು, ಇದಕ್ಕಾಗಿ 110-120 ಕೆಎನ್ ವ್ಯಾಪ್ತಿಯ ಹೊಸ ಇಂಜಿನ್ ಬಳಸುವ ನಿರೀಕ್ಷೆಗಳಿವೆ. ಈ ಇಂಜಿನ್ ವಿಮಾನಕ್ಕೆ ಸೂಪರ್‌ಸಾನಿಕ್ ಕ್ರೂಸಿಂಗ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಒದಗಿಸುತ್ತದೆ. ಈ ಆಧುನಿಕ ಇಂಜಿನ್ನನ್ನು ಫ್ರಾನ್ಸ್‌ನ ಸರನ್ ಮತ್ತು ಡಿಆರ್‌ಡಿಓ ಜಂಟಿಯಾಗಿ ಅಭಿವೃದ್ಧಿ ಪಡಿಸುವ ನಿರೀಕ್ಷೆಗಳಿದ್ದು, ಇದಕ್ಕಾಗಿ ಪ್ರಸ್ತುತ ಮಾತುಕತೆಗಳು ನಡೆಯುತ್ತಿವೆ.

ಭಾರತೀಯ ವಾಯುಪಡೆ ಈಗಾಗಲೇ ಎಎಂಸಿಎ ಎಂಕೆಐನ 40 ವಿಮಾನಗಳನ್ನು ಖರೀದಿಸಲು ಆಸಕ್ತಿ ವ್ಯಕ್ತಪಡಿಸಿದೆ. ಇದು ಭಾರತೀಯ ವಾಯು ಸೇನೆ ದೇಶೀಯ ಉತ್ಪಾದಕರ ಮೇಲೆ ವಿಶ್ವಾಸ ಇಟ್ಟಿರುವುದಕ್ಕೆ ಸಾಕ್ಷಿಯಾಗಿದೆ.



ಎಎಂಸಿಎಯ ಅಭಿವೃದ್ಧಿ ಭಾರತವನ್ನು ಐದನೇ ತಲೆಮಾರಿನ ಯುದ್ಧ ವಿಮಾನವನ್ನು ಅಭಿವೃದ್ಧಿ ಪಡಿಸಿದ ಕೆಲವೇ ರಾಷ್ಟ್ರಗಳ ಸಾಲಿಗೆ ಸೇರ್ಪಡೆಗೊಳಿಸಲಿದೆ. ಭಾರತಕ್ಕೆ ಮುನ್ನ, ಕೇವಲ ಅಮೆರಿಕಾ, ರಷ್ಯಾ ಮತ್ತು ಚೀನಾಗಳು ಮಾತ್ರವೇ ಐದನೇ ತಲೆಮಾರಿನ ವಿಮಾನಗಳನ್ನು ಅಭಿವೃದ್ಧಿ ಪಡಿಸಿವೆ.

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಲೇಖಕರ ಬಗ್ಗೆ
ಗಿರೀಶ್ ಲಿಂಗಣ್ಣ
ನಾನು, ಗಿರೀಶ್ ಲಿಂಗಣ್ಣ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರ. ಕಟ್ಟಿಂಗ್ ಟೂಲ್ ಇಂಡಸ್ಟ್ರೀಯಲ್ಲಿ 28 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದೇನೆ.\nಬೆಂಗಳೂರು ಮೂಲದ ನಾನು ಏರೋಸ್ಪೇಸ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದೇನೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಬ್ರಹ್ಮೋಸ್, ಭಾರತೀಯ ವಾಯುಸೇನೆ, ಜೆಎಸ್\u200cಡಬ್ಲ್ಯೂ ಸಹಿತ ಹಲವು ಸಂಸ್ಥೆಗಳಿಗೆ ಹೈಟೆಕ್ ಟೂಲಿಂಗ್ಸ್ ಮತ್ತು ಪ್ರಮುಖ ಕಾಂಪೊನೆಂಟ್ಸ್ ಗಳನ್ನು ಪೂರೈಸುತ್ತಿದ್ದೇವೆ.\nಸದ್ಯ, ಜರ್ಮನಿಯ ADD Engineering GmbH ಉದ್ಯಮದ ಸಹ-ಸಂಸ್ಥೆಯಾಗಿರುವ ಆಡ್ ಎಂಜಿನೀಯರಿಂಗ್ ಕಾಂಪೊನೆಂಟ್ಸ್ (ಇಂಡಿಯಾ) ಪ್ರೈ, ಲಿ.ನಲ್ಲಿ ವ್ಯವಸ್ಥಾಪಕ ನಿರ್ದೇಶಕನಾಗಿದ್ದೇನೆ. ಈ ಸಂಸ್ಥೆಯು ರಷ್ಯಾ, ಉಕ್ರೇನ್ ಮತ್ತು ಬೆಲಾರೂಸ್\u200cನಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದೆ.\nಕೆನ್ನಾಮೆಟಲ್\u200cನ ಮಾಜಿ ನಿರ್ದೇಶಕರಾಗಿರುವ ಜರ್ಮನಿಯ ಶ್ರೀ ನಾರ್ಬರ್ಟ್ ಕ್ರೆಲ್ಲರ್, ನಾಸಾದ ಮಾಜಿ ಅಧಿಕಾರಿ ಡಾ. ವೆರ್ನರ್ ಗ್ರಿಕ್ಸಾ ಮತ್ತು ಕುಕಾ ಏರೋಸ್ಪೇಸ್ ಸಂಸ್ಥೆಯ ಮಾಜಿ ಎಂಡಿ, ರಷ್ಯಾದ ತಂತ್ರಜ್ಞ ಶ್ರೀ ಅಲೆಕ್ಸಾಂಡರ್ ಲಾಕ್ಟೇವ್ ಅವರು ನನ್ನ ಅಂತಾರಾಷ್ಟ್ರೀಯ ಪಾಲುದಾರರಾಗಿದ್ದಾರೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ