ಆ್ಯಪ್ನಗರ

ಸೂ ಕಿ, ಪಾರ್ಕ್‌, ಲೀ, ಸಿಸೌಲಿತ್‌ ಜತೆ ಮೋದಿ ದ್ವಿಪಕ್ಷೀಯ ಮಾತುಕತೆ

ಲಾವೋಸ್‌ನ ವಿಯೇಂಟಾನ್‌ನಲ್ಲಿ ಜರುಗಿದ ಆಸಿಯಾನ್‌ ಮತ್ತು ಪೂರ್ವ ಏಷ್ಯಾ ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡರು

ಏಜೆನ್ಸೀಸ್ 9 Sep 2016, 4:00 am

ವೀಂಟಿಯಾನ್‌: ಲಾವೋಸ್‌ನ ವಿಯೇಂಟಾನ್‌ನಲ್ಲಿ ಜರುಗಿದ ಆಸಿಯಾನ್‌ ಮತ್ತು ಪೂರ್ವ ಏಷ್ಯಾ ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಮ್ಯಾನ್ಮಾರ್‌ ವಿದೇಶಾಂಗ ಸಚಿವೆ ಆಂಗ್‌ ಸಾನ್‌ ಸೂ ಕಿ, ದಕ್ಷಿಣ ಕೊರಿಯಾ ಅಧ್ಯಕ್ಷೆ ಪಾರ್ಕ್‌ ಗ್ಯೂನ್‌-ಹೈ, ಚೀನಾ ಪ್ರಧಾನಿ ಲೀ ಕೆಖಿಯಾಂಗ್‌ ಸೇರಿದಂತೆ ಹಲವು ನಾಯಕರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಮಾನ್ಮಾರ್‌ ಪ್ರಜಾಸತ್ತಾತ್ಮಕ ಹೋರಾಟಗಾರ್ತಿ ಆಂಗ್‌ ಸಾನ್‌ ಸೂ ಕಿ ಅವರೊಂದಿಗೆ ದ್ವಿಪಕ್ಷೀಯ ಭದ್ರತಾ ಸಹಕಾರ, ಹೈನುಗಾರಿಕೆ, ಪಶುಸಂಗೋಪನೆ ಮತ್ತು ಕೃಷಿ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸಲು ಮತ್ತು ಬೌದ್ಧ ಪರಂಪರೆ ವಿನಿಮಯದ ಸಹಕಾರ ಬಲವರ್ಧನೆ ಕುರಿತು ವಿಸ್ತೃತ ಚರ್ಚೆ ನಡೆಸಿದರು.

ಬೇಳೆಕಾಳುಗಳ ಆಮದು ಕುರಿತಂತೆಯೂ ಪ್ರಧಾನಿ ಮೋದಿ ಸೂ ಕಿ ಅವರೊಂದಿಗೆ ಚರ್ಚಿಸಿ, ಗೋವಾದಲ್ಲಿ ಜರುಗಲಿರುವ ಬ್ರಿಕ್ಸ್‌ ರಾಷ್ಟ್ರಗಳ ಶೃಂಗಕ್ಕೆ ಆಗಮಿಸುವಂತೆ ಆಹ್ವಾನ ನೀಡಿದರು ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ವಿಕಾಸ್‌ ಸ್ವರೂಪ್‌ ಟ್ವೀಟ್‌ ಮಾಡಿದ್ದಾರೆ.

ಪಾರ್ಕ್‌ ಜತೆ ಚರ್ಚೆ: ದಕ್ಷಿಣ ಕೊರಿಯಾ ಅಧ್ಯಕ್ಷೆ ಪಾರ್ಕ್‌ ಗ್ಯೂನ್‌-ಹೈ ಅವರೊಂದಿಗೆ ದ್ವಿಪಕ್ಷೀಯ ಕಾರ್ಯತಂತ್ರ ಪಾಲುದಾರಿಕೆಯ ಪರಾಮರ್ಶೆ ನಡೆಸಿದ ಪ್ರಧಾನಿ ಮೋದಿ, ಭಯೋತ್ಪಾದನೆ ನಿಗ್ರಹ ಮತ್ತು ಸಾಗರ ಭದ್ರತೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಳಕ್ಕೆ ಇರುವ ಮಾರ್ಗೋಪಾಯಗಳ ಕುರಿತು ಮಾತುಕತೆ ನಡೆಸಿದರು.

ಭಾರತ-ಕೊರಿಯಾ ಆರ್ಥಿಕ ಪಾಲುದಾರಿಕೆ ಒಪ್ಪಂದದ ಸುಧಾರಣೆ, ಭಾರತಕ್ಕೆ ಕಳೆದ ವರ್ಷ ಪ್ರಕಟಿಸಿರುವ 10 ಬಿಲಿಯನ್‌ ಡಾಲರ್‌ ಆರ್ಥಿಕ ನೆರವಿನ ಕುರಿತು ಉಭಯ ನಾಯಕರು ಚರ್ಚಿಸಿದರು.

ಲೀ ಜತೆ ಮೋದಿ 'ಕಾರಿಡಾರ್‌' ಚರ್ಚೆ: ಪಾಕ್‌ ಆಕ್ರಮಿತ ಕಾಶ್ಮೀರದ ಮೂಲಕ ಹಾದು ಹೋಗುವ 46 ಶತಕೋಟಿ ಡಾಲರ್‌ ವೆಚ್ಚದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ಯೋಜನೆ ನಿರ್ಮಾಣಕ್ಕೆ ಮೋದಿ ಅವರು ಚೀನಾ ಪ್ರಧಾನಿ ಲೀ ಕೆಖಿಯಾಂಗ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಭಯೋತ್ಪಾದನೆ ವಿರುದ್ಧದ ಹೋರಾಟ ರಾಜಕೀಯ ಕಾರಣಗಳಿಗಾಗಿ ಪ್ರಚೋದನೆಗೆ ಒಳಗಾಗಬಾರದು. ಮೌಲ್ಯಯುತವಾದ ದ್ವಿಪಕ್ಷೀಯ ಒಪ್ಪಂದವನ್ನು ಖಾತ್ರಿಪಡಿಸಬೇಕಾದರೆ, ಉಭಯ ರಾಷ್ಟ್ರಗಳು ತಮ್ಮ ಆಕಾಂಕ್ಷೆ, ಕಳವಳ ಮತ್ತು ಕಾರ್ಯತಂತ್ರ ಹಿತಾಸಕ್ತಿಗಳನ್ನು ಗೌರವಿಸುವಂತಾಗಬೇಕು ಎಂದು ಮೋದಿ, ಲೀ ಅವರಿಗೆ ಮನವರಿಕೆ ಮಾಡಿದ್ದಾರೆ.

ಲಾವೋಸ್‌ ಪ್ರಧಾನಿ ಜತೆ ಚರ್ಚೆ: ಲಾವೋಸ್‌ ಪ್ರಧಾನಿ ಥೊಂಗ್ಲೊನ್‌ ಸಿಸೌಲಿತ್‌ ಅವರೊಂದಿಗೆ ದಕ್ಷಿಣ ಚೀನಾ ಸಾಗರ ವಿವಾದ ಸೇರಿದಂತೆ ಪ್ರಾದೇಶಿಕ ಬೆಳವಣಿಗೆಗಳ ಕುರಿತು ಚರ್ಚೆ ಮೋದಿ ನಡೆಸಿದರು. ಭಾರತ-ಲಾವೋಸ್‌ ರಾಜತಾಂತ್ರಿಕ ಸಂಬಂಧ ಏರ್ಪಟ್ಟು 60 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ 60ನೇ ವಾರ್ಷಿಕೋತ್ಸವ ಕಾರ್ಯಕ್ರಮ ಆಚರಣೆಗೆ ಉಭಯ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ