ಆ್ಯಪ್ನಗರ

ದೂರದರ್ಶನ ಬಿಟ್ಟು ಭಾರತದ ಖಾಸಗಿ ದೃಶ್ಯ ಮಾಧ್ಯಮಗಳ ಪ್ರಸಾರದ ಮೇಲೆ ನೇಪಾಳದ ನಿರ್ಬಂಧ!

ಭಾರತದೊಂದಿಗೆ ಗಡಿ ತಕರಾರು ತೆಗೆದಿರುವ ನೇಪಾಳ ಇದೀಗ ದೂರದರ್ಶನವೊಂದನ್ನು ಬಿಟ್ಟು ಭಾರತದ ಉಳಿದೆಲ್ಲಾ ಖಾಸಗಿ ದೃಶ್ಯ ಮಾಧ್ಯಮಗಳ ಪ್ರಸಾರದ ಮೇಲೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. ಭಾರತೀಯ ಮಾಧ್ಯಮಗಳು ನೇಪಾಳದ ಹಿತಾಸಕ್ತಿಗೆ ವಿರುದ್ಧವಾದ ವರದಿ ಪ್ರಸಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

Vijaya Karnataka Web 10 Jul 2020, 1:53 pm
ಕಠ್ಮಂಡು: ದಿನದಿಂದ ದಿನಕ್ಕೆ ಭಾರತದಿಂದ ದೂರ ಸರಿಯುತ್ತಿರುವ ನೇಪಾಳ, ಭಾರತ ವಿರೋಧಿ ನಿರ್ಣಯಗಳನ್ನು ಕೈಗೊಳ್ಳುತ್ತಿರುವುದು ನಿಜಕ್ಕೂ ವಿಷಾದನೀಯ ಸಂಗತಿಯಾಗಿದೆ.

ಭಾರತದೊಂದಿಗೆ ಗಡಿ ತಕರಾರು ತೆಗೆದಿರುವ ನೇಪಾಳ ಇದೀಗ ದೂರದರ್ಶನವೊಂದನ್ನು ಬಿಟ್ಟು ಭಾರತದ ಉಳಿದೆಲ್ಲಾ ಖಾಸಗಿ ದೃಶ್ಯ ಮಾಧ್ಯಮಗಳ ಪ್ರಸಾರದ ಮೇಲೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.

ಅಧಿಕಾರ ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿ ಜಾರಿಗೆ ಮುಂದಾದ ನೇಪಾಳ ಪ್ರಧಾನಿ ಒಲಿ
ಭಾರತೀಯ ಖಾಸಗಿ ದೃಶ್ಯ ಮಾಧ್ಯಮಗಳು ನೇಪಾಳದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ವರದಿ ಪ್ರಸಾರ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ದೂರದರ್ಶನವೊಂದನ್ನು ಬಿಟ್ಟು ಉಳಿದೆಲ್ಲಾ ಭಾರತೀಯ ಖಾಸಗಿ ದೃಶ್ಯ ಮಾಧ್ಯಮಗಳ ಪ್ರಸಾರದ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಇಂದು(ಶುಕ್ರವಾರ) ಬೆಳಗ್ಗೆಯಿಂದಲೇ ಭಾರತೀಯ ಖಾಸಗಿ ದೃಶ್ಯ ಮಾಧ್ಯಮಗಳ ಪ್ರಸಾರವನ್ನು ನಿಲ್ಲಿಸಲಾಗಿದೆ ಎಂದು ಅಲ್ಲಿನ ಕೇಬಲ್ ಆಪರೇಟರ್‌ಗಳು ಕೂಡ ಮಾಹಿತಿ ನೀಡಿದ್ದಾರೆ.

ಚೀನಾ ಮಾತುಕೇಳಿ ಖೆಡ್ಡಾಗೆ ಬಿದ್ದ ನೇಪಾಳ ಪ್ರಧಾನಿ, ಭಾರತದೊಂದಿಗೆ ಕ್ಯಾತೆ ತೆಗೆದ ಒಲಿಗೆ ರಾಜೀನಾಮೆ ಭಾಗ್ಯ?

ಅಧಿಕಾರ ಉಳಿಸಿಕೊಳ್ಳಲು ಕಸರತ್ತು ನಡೆಸಿರುವ ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ, ದೇಶದಲ್ಲಿ ಹೆಲ್ತ್ ಎಮರ್ಜೆನ್ಸಿ ಘೋಷಿಸಲು ಯೋಚಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ದೃಶ್ಯ ಮಾಧ್ಯಮಗಳು ತಮ್ಮ ಸರ್ಕಾರವನ್ನು ಕಟು ಟೀಕೆಗೆ ಗುರಿಪಡಿಸಬಹದು ಎಂಬ ಕಾರಣಕ್ಕೆ ದೃಶ್ಯ ಮಾಧ್ಯಮಗಳ ಪ್ರಸಾರದ ಮೇಲೆ ನಿರ್ಬಂಧ ವಿಧಿಸಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ