Please enable javascript.ಅನಾನಸ್ ಬೆಲೆಯೂ ಆಕಾಶಕ್ಕೆ - ಅನಾನಸ್ ಬೆಲೆಯೂ ಆಕಾಶಕ್ಕೆ - Vijay Karnataka

ಅನಾನಸ್ ಬೆಲೆಯೂ ಆಕಾಶಕ್ಕೆ

ವಿಕ ಸುದ್ದಿಲೋಕ 11 Jun 2014, 12:26 pm
Subscribe

ಮಾರಕಟ್ಟೆಯಲ್ಲಿ ಹಣ್ಣುಗಳ ಸುಗ್ಗಿಯೇ ಸುಗ್ಗಿ. ಹಣ್ಣಿನ ರಾಜಾ ಮಾವಿನ ಭರಾಟೆ ಒಂದೆಡೆಯಾದರೆ, ಅಂಜೂರ್, ಚಿಕ್ಕು, ನೇರಳೆ, ಅನಾನಸ್ (ಫೈನ್‌ಆಪಲ್) ಹಣ್ಣುಗಳು ಭಾರಿ ಬೇಡಿಕೆಯಲ್ಲಿ ಮಾರಾಟವಾಗುತ್ತಿದ್ದು ಜನರು ಮುಗಿಬಿದ್ದು ಖರೀದಿಸುತ್ತಿದ್ದಾರೆ.

ಅನಾನಸ್ ಬೆಲೆಯೂ ಆಕಾಶಕ್ಕೆ
ಸುರಪುರ: ಮಾರಕಟ್ಟೆಯಲ್ಲಿ ಹಣ್ಣುಗಳ ಸುಗ್ಗಿಯೇ ಸುಗ್ಗಿ. ಹಣ್ಣಿನ ರಾಜಾ ಮಾವಿನ ಭರಾಟೆ ಒಂದೆಡೆಯಾದರೆ, ಅಂಜೂರ್, ಚಿಕ್ಕು, ನೇರಳೆ, ಅನಾನಸ್ (ಫೈನ್‌ಆಪಲ್) ಹಣ್ಣುಗಳು ಭಾರಿ ಬೇಡಿಕೆಯಲ್ಲಿ ಮಾರಾಟವಾಗುತ್ತಿದ್ದು ಜನರು ಮುಗಿಬಿದ್ದು ಖರೀದಿಸುತ್ತಿದ್ದಾರೆ.

ಶಿರಸಿಯಿಂದ ಅನಾನಸ್ ಹಣ್ಣು ಪಟ್ಟಣಕ್ಕೆ ಆಮದಾಗುತ್ತಿದ್ದು, 12 ಜನರ ತಂಡವೊಂದು ಒತ್ತು ಬಂಡಿಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಹಣ್ಣನ್ನು ಕತ್ತರಿಸಿ ಒಂದು ಓಳಿಗೆ ರೂ.5 ದಂತೆ ಮತ್ತು ಒಂದು ಹಣ್ಣಿನ ದರ ರೂ.80. ವ್ಯಾಪಾರ ಮಾಡುತ್ತಿದ್ದಾರೆ. ಫೈನ್‌ಆಪಲ್ ಮಾತ್ರ ಭರ್ಜರಿಯಾಗಿ ಬಿಕರಿಯಾಗುತ್ತಿದೆ. ದಿನಕ್ಕೆ ಪ್ರತಿಯೊಬ್ಬರು ಒಂದು ಬಂಡಿ ಹಣ್ಣು, ಒಟ್ಟು 3 ಸಾವಿರ ರೂಪಾಯಿಗೂ ಹೆಚ್ಚು ಬೆಲೆಯ ಹಣ್ಣು ಮಾರಾಟ ಮಾಡುತ್ತೇನೆ ಎಂದು ಹಣ್ಣಿನ ವ್ಯಾಪಾರಿಗಳು ಹೇಳುತ್ತಾರೆ.

ಅನಾನಸ್ ಹಣ್ಣು ತುಂಬಾನೆ ರುಚಿ ಜತೆಗೆ ಸಮಧುರ ಮತ್ತು ಸುವಾಸಿತ ಫಲ ಎಂದೇ ಹೆಸರು ಗಳಿಸಿದೆ. ಇದನ್ನು ಹಸಿಯಾಗಿಯೂ ಉಪ್ಪಚ್ಚಿಯು ತಿನ್ನಬಹುದು. ಪಾನಕ ಇಲ್ಲವೇ ಶರಬತ್‌ನ ರೂಪದಲ್ಲಿಯೂ ಜ್ಯೂಸ್ ಮಾದರಿಯಲ್ಲಿ ಉಪಯೋಗಿಸಲಾಗುತ್ತದೆ ಎನ್ನುತ್ತಾರೆ ಮಾರಾಟಗಾರರು.

ಸಸಾರಜನಕ, ಶರ್ಕರ ಪಿಷ್ಟ, ರಂಜಕ, ಕೆರೋಟಿನ್, ಸಿ ಜೀವಸತ್ವ, ಕ್ಯಾಲ್ಸಿಯಂ, ಕೊಬ್ಬು ಪೋಷಕಾಂಶಗಳನ್ನು ಹೊಂದಿರುತ್ತದೆ. ಮೂತ್ರ ರೋಗ, ವಸಡಿನಲ್ಲಿ ರಕ್ತ ಸ್ರವಿಸುತ್ತಿದ್ದರೆ ಔಷಧೀಯ ಗುಣ ಹೊಂದಿರುವ ಅನಾನಸ್ ಸೇವನೆಯಿಂದ ವಾಸಿ ಕಾಣಬಹುದು. ರಕ್ತ ಹೀನತೆ ಇರುವವರು ದಿನವೂ ನಿಯಮಿತ ರೂಪದಲ್ಲಿ ಈ ಹಣ್ಣು ಬಳಸುವುದರಿಂದ ಲಾಭ ಪಡೆಯಬಹುದು ಎನ್ನುತ್ತಾರೆ ವೈದ್ಯರು.

ಹದಯರೋಗ ಪೀಡಿತರಿಗೆ ಈ ಹಣ್ಣು ತುಂಬಾ ಗುಣಕಾರಿ. ಋತು ತೊಂದರೆ ಇರುವ ಮಹಿಳೆಯರಿಗೂ ಅನಾನಸ್ ಜ್ಯೂಸ್ ಉತ್ತಮ. ಮೂತ್ರಪಿಂಡ, ಲಿವರ್ ಸಂಬಂಧಿತ ಖಾಯಿಲೆಯಿಂದ ನರಳುವವರಿಗೆ ಈ ಹಣ್ಣಿನ ಸೇವನೆ ನಿಷೇಧವೇ ಸರಿ ಎಂದು ವೈದ್ಯರು ತಿಳಿಸುತ್ತಾರೆ.

ಹಣ್ಣುಗಳು ಸೇವನೆ ನಾನಾ ರೋಗಗಳ ನಿವಾರಣೆಗೆ ಅನುಕೂಲ. ಇವುಗಳ ನೆರವು ಅಪಾರ ಹಾಗೂ ಅದ್ಭುತ. ಆರೋಗ್ಯ ಸುಧಾರಣೆಯಲ್ಲಿ ಫಲಗಳ ಕಾರ್ಯ ಲಾಭದಾಯಕ. ತಾಜಾ ಹಣ್ಣುಗಳಲ್ಲಿ ತರಕಾರಿಗಳಲ್ಲಿರುವಂತೆಯೇ ಸಾಕಷ್ಟು ಪೋಷಕ ದ್ರವ್ಯಗಳು ಅಂದರೆ ಜೀವಸತ್ವಗಳು, ಖನಿಜಗಳು, ಸಕ್ಕರೆ ಹಾಗೂ ಎನಜೈಮುಗಳಿರುತ್ತವೆ.

ಇಂತಹ ಹಣ್ಣುಗಳ ಸೇವನೆಯಿಂದ ನಾವು ಊಟದಲ್ಲಿ ಉಪಯೋಗಿಸುವ ಆಹಾರಗಳು ಸುಲಭವಾಗಿ ಜೀರ್ಣವಾಗುತ್ತವೆ ಜತೆಗೆ ನೇರವಾಗಿ ರಕ್ತಗತವಾಗುತ್ತವೆ. ನಿತ್ಯವು ಒಂದಲ್ಲಾ ಒಂದು ರೀತಿಯಲ್ಲಿ ಹಣ್ಣುಗಳನ್ನಾಗಲಿ ಅವುಗಳ ರಸವನ್ನಾಗಲಿ ನಿಯಮಿತ ರೀತ್ಯ ಸೇವಿಸುತ್ತಿದ್ದರೆ ಸ್ವಾಸ್ಥ್ಯ ಸುಧಾರಣೆ ತ್ವರಿತಗತಿಯಲ್ಲಿ ಉಂಟಾಗುತ್ತದೆ ಎಂದು ಸಲಹೆ ನೀಡುತ್ತಾರೆ ವೈದ್ಯರು.

ಒಟ್ಟಾರೆ ಈಗ ಮಾರುಕಟ್ಟೆಯಲ್ಲಿ ನಾನಾ ನಮೂನೆಯ ಹಣ್ಣುಗಳ ಸುಗ್ಗಿ ಜೋರಾಗಿ ನಡೆದಿದ್ದು, ಅವುಗಳ ಬೆಲೆಯೂ ಗಗನಮುಖಿಯಾಗಿದೆ. ಆದರೂ ಜನರು ಮಾತ್ರ ಯಾವುದನ್ನು ಲೆಕ್ಕಿಸದೆ ಹಣ್ಣುಗಳ ಸವಿಯನ್ನು ಸವಿಯಲು ಅವುಗಳನ್ನು ಖರೀದಿಸುತ್ತಿದ್ದಾರೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ