Please enable javascript.ಕಾಳ ಸಂತೆಯಲ್ಲಿ ಪಡಿತರ ಮಾರಾಟ - ಕಾಳ ಸಂತೆಯಲ್ಲಿ ಪಡಿತರ ಮಾರಾಟ - Vijay Karnataka

ಕಾಳ ಸಂತೆಯಲ್ಲಿ ಪಡಿತರ ಮಾರಾಟ

ವಿಕ ಸುದ್ದಿಲೋಕ 28 Oct 2014, 5:28 pm
Subscribe

ಯಾದಗಿರಿ ತಾಲೂಕಿನ ನ್ಯಾಯಬೆಲೆ ಅಂಗಡಿಗಳಲ್ಲಿನ ದಾಸ್ತಾನು ಪಡಿತರ ಚೀಟಿದಾರರಿಗೆ ಸಿಗದೇ ಅಧಿಕಾರಿಗಳ ಸಹಕಾರದೊಂದಿಗೆ ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕಾಳ ಸಂತೆಯಲ್ಲಿ ಪಡಿತರ ಮಾರಾಟ
ಗುರುಮಠಕಲ್: ಯಾದಗಿರಿ ತಾಲೂಕಿನ ನ್ಯಾಯಬೆಲೆ ಅಂಗಡಿಗಳಲ್ಲಿನ ದಾಸ್ತಾನು ಪಡಿತರ ಚೀಟಿದಾರರಿಗೆ ಸಿಗದೇ ಅಧಿಕಾರಿಗಳ ಸಹಕಾರದೊಂದಿಗೆ ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪ್ರತಿ ತಿಂಗಳು ಪಡಿತರ ಚೀಟಿದಾರರಿಗೆ ವಿತರಣೆಯಾಗಬೇಕಾದ ದಾಸ್ತಾನು ಬಡವರಿಗೆ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಂಗಡಿ ಮಾಲಿಕರು ತಮಗೆ ಇಷ್ಟ ಬಂದ ಹಾಗೆ ವಿತರಣೆ ಮಾಡುತ್ತಾರೆ. ಏನಾದರು ಕೇಳಿದರೆ ಎಷ್ಟು ಕಾರ್ಡ್‌ಗೆ ಮಾಲ್ ಬಂದಿದೆಯೋ ಅಷ್ಟು ಹಾಕುತ್ತೇವೆ ನಿಮ್ಮ ಕಾರ್ಡ್‌ಗೆ ಮಾಲ್ ಬಂದಿಲ್ಲ ಎಂಬ ಉತ್ತರಗಳನ್ನು ಹೇಳುತ್ತ ಸಾರ್ವಜನಿಕರಿಗೆ ವಂಚಿಸುತ್ತಿರುವ ಘಟನೆಗಳು ಕೇಳಿ ಬರುತ್ತಿವೆ.

ತಿಂಗಳ ಪ್ರಾರಂಭದಲ್ಲಿ ಬಂದಿರುವ ದಾಸ್ತಾನನ್ನು ತಿಂಗಳು ಮುಗಿಯುತ್ತಿದ್ದರು. ಇನ್ನುವರೆಗೆ ವಿತರಿಸದೇ ಹಾಗೇ ಇಟ್ಟುಕೊಂಡಿದ್ದಾರೆ ಅಲ್ಲದೇ 5 ಲೀಟರ್ ನೀಡಬೇ ಕಾಗಿರುವ ಸೀಮೆ ಎಣ್ಣೆ ಕಡಿಮೆ ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ.

ಬಹುತೇಕ ಗ್ರಾಮೀಣ ಭಾಗಗಳಲ್ಲಿ ನ್ಯಾಯಬೆಲೆ ಅಂಗಡಿ ತಮಗೆ ಇಷ್ಟ ಬಂದಾಗ ಅನಾಜು ಹಾಕುವುದು ಇಲ್ಲ. ಎಲ್ಲ ಮುಗಿದಿರುವುದಾಗಿ ಹೇಳುತ್ತ ಜನರನ್ನು ವಂಚಿಸಿ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ತಾಲೂಕಿನ ಚಿಂತಕುಂಟಾ ಗ್ರಾಮದ ನ್ಯಾಯಬೆಲೆ ಅಂಗಡಿಯವರು ಜನರಿಗೆ ಸಮರ್ಪಕವಾಗಿ ವಿತರಿಸದೇ ರಾತ್ರಿ ವೇಳೆಯಲ್ಲಿ ಅಕ್ರಮ ಪಡಿತರ ಅಕ್ಕಿಯನ್ನು ಬೇರೆಡೆ ಸಾಗಿಸುತ್ತಿದ್ದಾರೆಂದು ಗ್ರಾಮಸ್ಥರು ಕೆಲದಿನಗಳ ಹಿಂದೆ ತಹಸೀಲ್ದಾರರಿಗೆ ದೂರು ನೀಡಿದ್ದರೂ ತಹಸೀಲ್ದಾರರು ಸ್ಥಳಕ್ಕೆ ಬರುವವರೆಗೆ ವಾಹನದಲ್ಲಿ ಸಾಗಾಟವಾಗಿದ್ದರಿಂದ ಪಡಿತರ ಅಕ್ಕಿ ವಶಪಡಿಸಿಕೊಳ್ಳಲು ವಿಫಲರಾಗಿದ್ದಾರೆ ಎನ್ನಲಾಗಿದೆ.

ತಾಲೂಕಿನ ಯಲಸತ್ತಿ ಗ್ರಾಮದಲ್ಲಿ ಸಮರ್ಪಕ ಪಡಿತರ ದಾಸ್ತಾನು ವಿತರಿಸದೇ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು ಎಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ನ್ಯಾಯಬೆಲೆ ಅಂಗಡಿಯವರ ವಿರುದ್ಧ ಕ್ರಮಕೈಗೊಳ್ಳಲು ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ