Please enable javascript.ಡಾ.ಅಂಬೇಡ್ಕರ್‌ ವಿಶ್ವದ ಜ್ಞಾನ ಭಂಡಾರ - Ḍā.Ambēḍkar‌ viśvada jñāna bhaṇḍāra - Vijay Karnataka

ಡಾ.ಅಂಬೇಡ್ಕರ್‌ ವಿಶ್ವದ ಜ್ಞಾನ ಭಂಡಾರ

ವಿಕ ಸುದ್ದಿಲೋಕ 31 Jan 2017, 5:24 pm
Subscribe

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ, ಜ್ಞಾನವನ್ನು ಜಗತ್ತಿನ ವಿವಿಧ ದೇಶಗಳು ಎರವಲು ಪಡೆದುಕೊಂಡು ಅಭಿವೃದ್ಧಿ ರಾಷ್ಟ್ರಗಳಾಗುತ್ತಿವೆ. ಅಂಬೇಡ್ಕರರ ಜ್ಞಾನ ಬರೀ ಭಾರತಕ್ಕೆ ಸೀಮಿತಗೊಳಿಸದೆ ವಿಶ್ವ ಜ್ಞಾನ ಭಂಡಾರವಾಗಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಂದೇನವಾಜ್‌ ಹೇಳಿದರು.

 ambkar vivada jna bhara
ಡಾ.ಅಂಬೇಡ್ಕರ್‌ ವಿಶ್ವದ ಜ್ಞಾನ ಭಂಡಾರ

ಶಹಾಪುರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ, ಜ್ಞಾನವನ್ನು ಜಗತ್ತಿನ ವಿವಿಧ ದೇಶಗಳು ಎರವಲು ಪಡೆದುಕೊಂಡು ಅಭಿವೃದ್ಧಿ ರಾಷ್ಟ್ರಗಳಾಗುತ್ತಿವೆ. ಅಂಬೇಡ್ಕರರ ಜ್ಞಾನ ಬರೀ ಭಾರತಕ್ಕೆ ಸೀಮಿತಗೊಳಿಸದೆ ವಿಶ್ವ ಜ್ಞಾನ ಭಂಡಾರವಾಗಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಂದೇನವಾಜ್‌ ಹೇಳಿದರು.

ಸಮೀಪದ ಭೀಮರಾಯನಗುಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಸಮಾಜ ಕಲ್ಯಾಣ ಇಲಾಖೆವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್‌.ಅಂಬೇಡ್ಕರರ 125 ನೇ ಜಯಂತಿ ವರ್ಷಚರಣೆ ನಿಮಿತ್ತ ''ಡಾ.ಅಂಬೇಡ್ಕರವರ ಜ್ಞಾನ ದರ್ಶನ ಅಭಿಯಾನ''ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಡಾ.ಚಂದ್ರಶೇಖರ ದೊಡ್ಮನಿ, ಉಪನ್ಯಾಸಕ ಡಾ.ರವಿಂದ್ರನಾಥ ಹೊಸ್ಮನಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ ಆಚರಿಸಲಾಯಿತು.

ಜಿಲ್ಲಾ ಸಂಯೋಜಕ ಮರಿಲಿಂಗಪ್ಪ ಕೋಳೂರು ಪ್ರಾಸ್ತವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ದೇವಿಂದ್ರಪ್ಪ ಕಟ್ಟಿಮನಿ,ರಾಮಣ್ಣ ಸಾದ್ಯಾಪುರ ವೇದಿಕೆಯಲ್ಲಿದ್ದರು. ಪ್ರಾಂಶುಪಾಲ ರಾಮಚಂದ್ರರಾವ್‌ ಗುಂಡೇಕರ್‌ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಸಿಬ್ಬಂದಿ ಎಂ.ಎಸ್‌.ಬಿರಾದಾರ್‌, ಪಂಪಾಪತಿ ಶಿರಣಿ, ಕವಿತಾ ಜಿ, ವರ್ಷಾ, ತಿಮ್ಮಯ್ಯ, ಅಬ್ದುಲ್‌ ಬಾರಿ ಮೊದಲಾದವರಿದ್ದರು. ಶಿವರಾಜ ನಿರೂಪಿಸಿದರು. ನಾಗಪ್ಪ ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ