Please enable javascript.ಸೇತುವೆ ಮೇಲೆ ನೀರು: ಸಂಚಾರಕ್ಕೆ ಪರದಾಟ - Bridge over water - Vijay Karnataka

ಸೇತುವೆ ಮೇಲೆ ನೀರು: ಸಂಚಾರಕ್ಕೆ ಪರದಾಟ

Vijaya Karnataka Web 8 Sep 2015, 4:24 pm
Subscribe

ಎರಡು ದಿನಗಳಿಂದ ಅಲ್ಲಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿಗೆ ಸಮೀಪದ ಏದಲಭಾವಿ ಗ್ರಾಮದ ಹಳ್ಳ ತುಂಬಿ ಹರಿಯುತ್ತಿದ್ದು, ಸಂಪರ್ಕ ಸೇತುವೆ ಮೇಲೆ ನೀರು ಹರಿದು ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

bridge over water
ಸೇತುವೆ ಮೇಲೆ ನೀರು: ಸಂಚಾರಕ್ಕೆ ಪರದಾಟ
ಕಕ್ಕೇರಾ: ಎರಡು ದಿನಗಳಿಂದ ಅಲ್ಲಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿಗೆ ಸಮೀಪದ ಏದಲಭಾವಿ ಗ್ರಾಮದ ಹಳ್ಳ ತುಂಬಿ ಹರಿಯುತ್ತಿದ್ದು, ಸಂಪರ್ಕ ಸೇತುವೆ ಮೇಲೆ ನೀರು ಹರಿದು ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

ಭಾನುವಾರ ರಾತ್ರಿ ಸುರಿದ ಗುಡಗು ಸಿಡಿಲು ಸಹಿತ ಮಳೆಗೆ ನಾನಾ ಹಳ್ಳಗಳಿಂದ ಮಳೆ ನೀರು ಸಂಗ್ರಹಗೊಂಡು ಈ ಹಳ್ಳಕ್ಕೆ ಬಂದಿದ್ದರಿಂದ ಸೇತುವೆ ಮೇಲೂ ನೀರು ಹರಿಯುತ್ತಿದೆ. ಸುಮಾರು 20 ವರ್ಷಗಳಷ್ಟು ಹಳೆಯದಾದ ಸೇತುವೆ ಇದೆ. ರಾಜ್ಯ ಹೆದ್ದಾರಿ ಬಂಡೋಳಿ ಕ್ರಾಸ್‌ದಿಂದ ಏದಲಭಾವಿ, ಹಣಮಸಾಗರ, ಜೋಗಂಡಭಾವಿ ಮೂಲಕ 26 ಕಿ.ಮೀ. ಕ್ರಮಿಸಿ ಮುಖ್ಯ ರಸ್ತೆ ಕೂಡುತ್ತದೆ.

ಕಕ್ಕೇರಾ, ಹೊಂಬಳಕಲ್, ಸೊನ್ನಾಪುರ ಸೇರಿದಂತೆ ನಾನಾ ಗ್ರಾಮಗಳಿಂದ ಜನರು ಇದೇ ರಸ್ತೆ ಸೇತುವೆಯನ್ನು ಬಳಸುತ್ತಾರೆ. ಪ್ರಮುಖ ಸೇತುವೆ ಇದಾಗಿದ್ದರೂ ಮೇಲ್ಮಟ್ಟಕ್ಕೇರಿಸಲು ಸಾಧ್ಯವಾಗಿಲ್ಲ. ಹೀಗಾಗಿ, ಸೇತುವೆ ಶಿಥಿಲಾವಾಸ್ಥೆಗೆ ತಲುಪಿದೆ. ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಹಾವು-ಚೇಳುಗಳ ಭೀತಿಯೂ ತಲೆದೋರಿದೆ. ಆದರೂ, ಗ್ರಾಮಸ್ಥರಿಗೆ ಈ ಸೇತುವೆ ರಸ್ತೆಯ ಬಳಕೆ ಅನಿವಾರ್ಯವಾಗಿದೆ. ಎತ್ತಿನ ಬಂಡಿಯೂ ಸಂಚರಿಸುವಂತಿಲ್ಲ. ಆಯ ತಪ್ಪಿದರೆ ಹಳ್ಳಕ್ಕೆ ಬೀಳುವುದು ಖಂಡಿತ.

ಸೇತುವೆ ಮೇಲೆ ನೀರು ಹರಿಯುವುದು ಹೊಸದೇನಲ್ಲ. ಪ್ರತಿ ಮಳೇಗಾಲದಲ್ಲಿ ಈ ಸಮಸ್ಯೆ ಇದೆ. ಸೇತುವೆ ಮೇಲ್ಮಟ್ಟಕ್ಕೇರಿಸಲು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ದೂರು.

ಶಾಲೆ ಸ್ಥಗಿತ

ಸೇತುವೆ ಮೇಲ್ಭಾಗಕ್ಕೆ ನೀರು ನುಗ್ಗಿದ್ದರಿಂದ ಶಾಲಾ ವಿದ್ಯಾರ್ಥಿಗಳು ಸೇತುವೆ ದಾಟಲಾಗುತ್ತಿಲ್ಲ. ನೀರಿನಲ್ಲೇ ನಡೆದು ಹೋಗದ ಸ್ಥಿತಿ. ಹೀಗಾಗಿ, ನೀರಿನ ರಭಸ ಕಡಿಮೆಯಾಗುವವರೆಗೂ ವಿದ್ಯಾರ್ಥಿಗಳು ಸೇತುವೆ ಆಚೆಗಿನ ಶಾಲೆಗೆ ಹೋಗಲಾಗದು.

ತೀರಾ ಹಳೆಯದಾದ ಸೇತುವೆ ದುರಸ್ತಿ ಹಾಗೂ ಮೇಲ್ದರ್ಜೆಗೇರಿಸುವುದು ಅನಿವಾರ್ಯ. ನಾನಾ ಹಳ್ಳದ ನೀರು ಇದೇ ಸೇತುವೆ ಹಳ್ಳಕ್ಕೆ ನುಗ್ಗುತ್ತದೆ. ಮಳೆಗಾಲದಲ್ಲಿ ಈ ಸಮಸ್ಯೆ ಇದ್ದಿದ್ದೇ. ಅಧಿಕಾರಿಗಳು ಈ ಸೇತುವೆ ಮೇಲ್ಮಟ್ಟಕ್ಕೇರಿಸಬೇಕು.

-ಅಮರೇಶ ಹಡಪದ ಗ್ರಾ.ಪಂ.ಮಾಜಿ ಸದಸ್ಯ

ಪ್ರತಿವರ್ಷ ಇದೇ ಸಮಸ್ಯೆಯಾಗಿದೆ, ಮಳೆಗಾಲದಲ್ಲಿ ಸೇತುವೆ ಮೇಲೆ ಸಾಕಷ್ಟು ನೀರು ಹರಿದು ಬರುತ್ತದೆ, ಹಳೆಯ ಸೇತುವೆ ಶಿಥಿಲವಾಗಿದೆ. ಇದರ ದುರಸ್ತಿ ಹಾಗೂ ಮಟ್ಟ ಮೇಲಕ್ಕೇರಿಸಲು ಧಿಕಾರಿಗಳು ಗಮನ ಹರಿಸುತ್ತಿಲ್ಲ.

ಸಂಗಮೇಶ, ಕರಡಕಲ್ ಗ್ರಾಮಸ್ಥ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ