Please enable javascript.Naga Panchami 2023: ನಾಗರ ಪಂಚಮಿಯನ್ನೇಕೆ ಆಚರಿಸಬೇಕು..? ಇದರ ಮಹತ್ವವೇನು ಗೊತ್ತೇ..? - naga panchami 2023 know why should we celebrate this festival and its importance - Vijay Karnataka

Naga Panchami 2023: ನಾಗರ ಪಂಚಮಿಯನ್ನೇಕೆ ಆಚರಿಸಬೇಕು..? ಇದರ ಮಹತ್ವವೇನು ಗೊತ್ತೇ..?

Authored byಮನಿಷಾ ಆನಂದ | Produced bySomanagouda Biradar | Agencies 18 Aug 2023, 2:03 pm
Subscribe

Naga Panchami 2023 Importance: ಶ್ರಾವಣ ಮಾಸದ ಪಂಚಮಿ ತಿಥಿಯಂದು ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ನಾಗರ ಪಂಚಮಿ ಹಬ್ಬದ ಮಹತ್ವವೇನು.? ನಾಗರ ಪಂಚಮಿಯನ್ನೇಕೆ ನಾವು ಆಚರಿಸಬೇಕು..?

ಹೈಲೈಟ್ಸ್‌:

  • ನಾಗರ ಪಂಚಮಿ ಮಹತ್ವ
  • ನಾಗರ ಪಂಚಮಿ ಮಂತ್ರ
  • ನಾಗರ ಪಂಚಮಿ ಕಥೆ
Naga Panchami 2023
ನಾಗರ ಪಂಚಮಿ 2023 ದಿನಾಂಕ
ಪ್ರಕಾಶ್ ಅಮ್ಮಣ್ಣಾಯ, ಖ್ಯಾತ ಜ್ಯೋತಿರ್ವಿಜ್ಞಾನಿಗಳು
ಪಂಚಮಿಯ ನಂತರ ಕೃಷ್ಣ ಪಕ್ಷದಲ್ಲಿ ಚಂದ್ರನು ಕ್ಷೀಣ ಗತಿಗೆ, ಶುಕ್ಲ ಪಕ್ಷದಲ್ಲಿ ವೃದ್ಧಿ ಗತಿಯತ್ತ ಸಾಗುತ್ತಾನೆ. ' ಚಂದ್ರ ಮಾಮನಸೋ ಜಾತಶ್ಚಕ್ಷೋ ಸೂರ್ಯೋ ಆಜಾಯತ' ಎಂದಿದೆ ವೇದ ಸೂಕ್ತಗಳು. ಮನೋ ಕಾರಕ ಚಂದ್ರನ ಆಧಾರದಲ್ಲಿ ಬುದ್ಧಿಶಕ್ತಿ ಇರುವ ಮನುಜನ ಧೀ ಶಕ್ತಿಯು ವೃದ್ಧಿ ಕ್ಷಗಳನ್ನು ಉಂಟುಮಾಡುತ್ತದೆ. ಅಮವಾಸ್ಯೆಯಿಂದ ಶುದ್ಧ ಪಂಚಮಿಯ ವರೆಗೆ ಚಂದ್ರನು ಪೂರ್ಣ ಕ್ಷೀಣನಾಗಿ ವೃದ್ಧಿಯತ್ತ, ಹುಣ್ಣಿಮೆಯಿಂದ ಬಹುಳ ಪಂಚಮಿಯ ವರೆಗೆ ಸಾಗುವ ಈ ಸಮಯವು ಮನಸ್ಸಿನ ಹತೋಟಿಯನ್ನು ಕಳೆದುಕೊಳ್ಳುವ ಸಮಯವಾಗಿದೆ. ಅಂದರೆ, ಆಯಾ ವ್ಯಕ್ತಿಯ ಜಾತಕಕ್ಕೆ ಅನುಗುಣವಾಗಿ ಆಯಾಯ ವ್ಯಕ್ತಿಯಲ್ಲಿ ಇರುವ ಮನೋಭಾವನೆಗಳು ತೀವ್ರತೆಯನ್ನು ಪಡೆದುಕೊಳ್ಳುವ ಕಾಲ ಇದಾಗಿದೆ. ಇಂತಹ ಸಂದರ್ಭಗಳಲ್ಲಿ ಮನಸ್ಸಿನ ನಿಯಂತ್ರಣಕ್ಕಾಗಿ ವೃತಗಳ ಮೂಲಕ ಪರಿಹಾರ ಕಂಡುಕೊಂಡರು. ಇಂತಹ ವ್ರತ, ಹಬ್ಬಗಳಲ್ಲಿ ನಾಗರ ಪಂಚಮಿಯೂ ಒಂದು. ಈ ಹಬ್ಬದ ಮಹತ್ವವೇನೆಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ..
Lord Hanuman: ಹನುಮಂತನ ಈ 5 ರಹಸ್ಯಗಳು ನಿಮಗೆ ತಿಳಿದಿರಲು ಸಾಧ್ಯವೇ ಇಲ್ಲ..!
ಪಂಚಮಿಯ ಮಹತ್ವ
ಪಂಚಮಿಯ ಮಹತ್ವ:
ನಮ್ಮ ಪ್ರಾಚೀನ ಋಷಿ ಮುನಿಗಳು ಪ್ರತಿಯೊಂದು ತಿಥಿಯೂ ಮಾಸ, ವರ್ಷವನ್ನು ಆಧರಿಸಿರುವಂತೆ ಮಾಡಿದ್ದರು. ಇದರಲ್ಲಿ ಪಂಚಮಿ ತಿಥಿಯೂ ಒಂದು. ಶ್ರಾವಣ ಮಾಸದ ಪಂಚಮಿ ತಿಥಿಯಂದು ನಾಗ ದೇವತೆಗಳನ್ನು ಆರಾಧಿಸಲಾಗುತ್ತದೆ. ನಾಗನು ಮೋಹ ನಿಯಂತ್ರಕನೂ ಹೌದು, ಮೋಹ ಸೃಷ್ಟಿಕರ್ತನೂ ಹೌದು. ನಾಗದೇವರು ಮಹಾ ಚೈತನ್ಯದ ( ವಿಷ್ಣು) ಸಂಕರ್ಷಣಾ ಶಕ್ತಿ. ಸಂಕರ್ಷಣಾ ಶಕ್ತಿ ಎಂದರೆ fast responding power. ಈ ನಾಗದೇವರ ಅಭಿಮಾನಿ ದೇವರು ಸುಬ್ರಹ್ಮಣ್ಯ. ಇವನನ್ನು ದೇವ ಸೇನಾನಿ ಎಂದು ಕರೆಯುತ್ತಾರೆ. ದೇವ ಎಂದರೆ ದೇವತೆಗಳು, ಬೆಳಕು, ಜ್ಞಾನ ಎಂದರ್ಥ. ಇಂತಹ ಪಂಚಮಿಯ ದಿನ ನಾಗದೇವರನ್ನು ಆರಾಧಿಸುವ ಮೂಲಕ ಶಕ್ತಿಯನ್ನು ಸಂಪನ್ನಗೊಳಿಸಿ, ಮೋಹಗಳ ನಿಯಂತ್ರಣ ಮಾಡಿಕೊಳ್ಳಲು ಪ್ರಾಜ್ಞರು ಸಲಹೆ ನೀಡಿದ್ದರು.

ವರ್ಷಕ್ಕೆ ಬರುವ 24 ಪಂಚಮಿ ವೃತಗಳ ಸಮಾರೋಪವೇ ಶ್ರಾವಣ ಶುಕ್ಲ ಪಂಚಮಿ. ಈ ದಿನ ನಾವು ಪ್ರತಿಷ್ಟಾಪನೆ ಮಾಡಿದ ನಾಗ ಸಾನ್ನಿಧ್ಯ ವನಗಳಲ್ಲಿ ಇರುವ ನಾಗ ಶಿಲೆಗೆ ಪಂಚಾಮೃತ, ಗೋಕ್ಷೀರ, ಜಲಾಭಿಷೇಕದ ಮೂಲಕ ಶುದ್ದ ಅಭಿಷೇಕ ಮಾಡಿಸಿ, ಗಂದ - ಚಂದನ, ಅರಿಶಿನ ಲೇಪಿಸಿ, ಪುಷ್ಪಾಲಂಕಾರ ಮಾಡಿ ಕಲ್ಪೋಕ್ತ ಪೂಜೆ ಮಾಡುವ ಸಂಪ್ರದಾಯವಿದೆ. ಗೋ ಎಂದರೆ ಭೂಮಿ ಎಂಬ ಅರ್ಥವಿದೆ. ಅದನ್ನು ಗೋವಿನ ಕ್ಷೀರದೊಂದಿಗೆ ನಾಗ ಶಿಲೆಯ ಅಭಿಷೇಕದ ಮೂಲಕ ಭೂಮಿಗೆ ಸಮರ್ಪಿಸಿದರೆ ಮಾನಸಿಕವಾಗಿ ಮೋಹ ನಿಯಂತ್ರಣವೂ,ಲೌಕಿಕವಾಗಿ ಭೂಮಿಯ ಫಲವತ್ತೆಯ ವೃದ್ಧಿಯೂ ಆಗುತ್ತದೆ. ವಾಸ್ತವವಾಗಿಯೂ ಲಕ್ಷಾಂತರ ಭಕ್ತರು ಈ ಸಂಪ್ರದಾಯ ಸುಕರ್ಮದಿಂದ ಕ್ಷೇಮವಾದದ್ದರಿಂದಲೇ ತಲೆತಲಾಂತರದಿಂದ ಇದನ್ನು ಆಚರಿಸಿಕೊಂಡು ಬರಲಾಗುತ್ತಿದೆ.

Good Direction: ಈ ದಿಕ್ಕಿನಲ್ಲಿ ಮಂಗಳ ಕಾರ್ಯಗಳನ್ನು ಮಾಡುವುದೇ ಅತ್ಯಂತ ಶುಭ..!
ಪುರಾಣೋಕ್ತ ಸಂಕ್ಷಿಪ್ತ ಕಥೆ
ಈ ನಾಗರ ಪಂಚಮಿಯಂದು ಭಕ್ತಿ - ಶ್ರದ್ಧೆಯಿಂದ,ನಾಗ ಸೇವೆ ಮಾಡುವ ಉದ್ದೇಶವನ್ನರಿತು, ಶುಭ್ರತೆಯಿಂದ, ಶುದ್ಧ ಮನಸ್ಸಿನಿಂದ ಆರಾಧಿಸೋಣ. ನಾಗದೇವರಿಗೆ ಹಾಲುಬಾಯಿ( ಅಕ್ಕಿ ಹಲ್ವಾ), ಪಂಚಾಮೃತ, ಹಣ್ಣು ಕಾಯಿ, ಅನ್ನ ನೈವೇದ್ಯ, ಕ್ಷೀರ ಪಾಯಸ ಇತ್ಯಾದಿ ಸಮರ್ಪಣೆ ಮಾಡಬಹುದು. ನಾಗದೇವರಿಗೆ ಕೆಂಪು ಹೂವು ಬಿಟ್ಟು ಬೇರೆ ಹಳದಿ, ಶ್ವೇತ ವರ್ಣಗಳ ಪರಿಮಳಯುಕ್ತ ಪುಷ್ಪಾರ್ಚನೆ ಮಾಡಬೇಕು. ನಾಗನಿಗೆ ಆಶ್ಲೇಷಾ ನಕ್ಷತ್ರ ವಿಶೇಷ. ಕೆಲವೆಡೆ ನಾಗ ತಂಬಿಲ, ಆಶ್ಲೇಷಾ ಬಲಿ, ತನು ತರ್ಪಣಾದಿಗಳು ನಡೆಯುತ್ತವೆ.

ಪುರಾಣೋಕ್ತ ಸಂಕ್ಷಿಪ್ತ ಕಥೆ:
ಪರೀಕ್ಷತ್ ರಾಜನಿಗೆ ಋಷಿ ಶಾಪದಿಂದಾಗಿ ಸರ್ಪದಿಂದ ಸಾಯುವ ಸಮಯ ಬರುತ್ತದೆ. ಆಗ ಅವನ ಮಗ ಜನಮೇಜಯನು ಕೋಪಿಷ್ಟನಾಗಿ ಸರ್ಪಸತ್ರ ಮಾಡಿಸುತ್ತಾನೆ. ಅದರಲ್ಲಿ 86 ಪ್ರಭೇದಗಳ ಸರ್ಪ ಸಂಕುಲ ನಾಶ ಆಗುತ್ತದೆ. ಅದಲ್ಲದೆ ಅರ್ಜುನನ ಕಾಂಡವ ದಹನದಲ್ಲೂ ಸರ್ಪಗಳು ನಾಶವಾಗುತ್ತದೆ. ಇದು ಕೇವಲ ಕೃತ್ಯ ಮಾಡಿದ ವಂಶಕ್ಕೆ ಮಾತ್ರವಲ್ಲ,ಇಡೀ ದೇಶಕ್ಕೇ ದೋಷವಾಗುತ್ತದೆ. ಇದಕ್ಕಾಗಿಯೇ ಋಷಿಗಳು ಪರಿಹಾರಾರ್ಥವಾಗಿ ನಾಗಾರಾಧನೆ ಮಾಡಲು ಹೇಳಿದರು. ಅಂದಿನಿಂದ ಇಂದಿಗೂ ಇದು ನಡೆಯುತ್ತಲೇ ಇದೆ. ಜ್ಯೋತಿಷ್ಯದಲ್ಲಿ ರಾಹುವಿನಿಂದ ನಾಗನ ಚಿಂತನೆ ಮತ್ತು ಕೇತುವಿನಿಂದ ನಾಗನ ವಾಸಸ್ಥಾನದ ಉಲ್ಲೇಖವಿದೆ.

Hanuman Chalisa: ದಿನಕ್ಕೆ ಇಷ್ಟು ಬಾರಿ ಹನುಮಾನ್ ಚಾಲೀಸಾ ಪಠಿಸಿದರೆ ಮಾತ್ರ ಲಾಭ.!
ಸರ್ಪ ಮಂತ್ರ

ಸರ್ಪ ಮಂತ್ರ:
ಇದನ್ನು ಭಕ್ತಿ ಶ್ರದ್ಧಾಪೂರ್ವಕವಾಗಿ ಸ್ವರ, ವರ್ಣ, ಅಕ್ಷರ ಲೋಪವಾಗದಂತೆ ಪಠಿಸಬೇಕು.
||ಓಂ ನಮೋ ಭಗವತೇ ಕಾಮರೂಪಿಣೇ ಮಹಾಬಲಾಯ ನಾಗಾಧಿಪತೇ ಅನಂತಾಯ ಸ್ವಾಹ||
ಈ ಮಂತ್ರವನ್ನು ಪ್ರತಿನಿತ್ಯ ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ಪಠಿಸುವುದರಿಂದ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ನಾಗ ದೋಷಗಳ ಪರಿಹಾರಕ್ಕಾಗಿ, ನಾಗಗಳ ಆಶೀರ್ವಾದಕ್ಕಾಗಿ ನಾಗಗಳನ್ನು ಅಂದರೆ ಸರ್ಪಗಳ ಆರಾಧನೆಯನ್ನು ಮಾಡಬೇಕು. ಇದರೊಂದಿಗೆ ಸರ್ಪಗಳಿಗೆ ಅಭಿಷೇಕವನ್ನು ಮಾಡುವ ಮೂಲಕ ಅವುಗಳಿಗೆ ಸಂತೋಷವನ್ನು ನೀಡಬೇಕು.
ಮನಿಷಾ ಆನಂದ
ಲೇಖಕರ ಬಗ್ಗೆ
ಮನಿಷಾ ಆನಂದ
ಮನಿಷಾ ಆನಂದ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ 6 ವರ್ಷಗಳ ನುರಿತ ಅನುಭವ ಹೊಂದಿರುವ ಬರಹಗಾರರು. ಇವರು 2016 ರಲ್ಲಿ ಆಟೋಮೊಬೈಲ್‌ ವಿಭಾಗಕ್ಕೆ ಬರಹಗಾರರಾಗಿ ಸೇರಿಕೊಳ್ಳುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ವೃತ್ತಿಜೀವನಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ತಮ್ಮ ಬರವಣಿಗೆಯ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಬರವಣಿಗೆಯ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಎಲ್ಲಾ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ, ಹೊಸ ವಿಷಯಗಳ ಮೇಲೆ ಸಂಶೋಧನೆ ಮಾಡಿ ಪ್ರಸ್ತುತ ಪಡಿಸುವ ಮೂಲಕ ಅವರದ್ದೇ ಆದ ಓದುಗರ ಸಮೂಹವನ್ನು ಹೊಂದಿದ್ದಾರೆ. ಮನಿಷಾ ಅವರ ಬರವಣಿಗೆಯ ಕೌಶಲ್ಯದ ಮೇಲೆ ಅವರನ್ನು ಆಟೋಮೊಬೈಲ್‌ ವಿಭಾಗದಿಂದ ಧರ್ಮ ವಿಭಾಗಕ್ಕೆ ಬದಲಾಯಿಸಲಾಯಿತು. ಕಳೆದ ಎರಡು ವರ್ಷಗಳಿಂದ ಅವರು ಧರ್ಮ ವಿಭಾಗದಲ್ಲಿ ಹೊಸ ವಿಚಾರಗಳನ್ನು ಪ್ರಸ್ತುತಪಡಿಸುವ ಮೂಲಕ ಓದುಗರಿಗೆ ಬಹಳ ಹತ್ತಿರವಾಗುತ್ತಿದ್ದಾರೆ. ಪ್ರಸ್ತುತ ಸಮಾಜಕ್ಕೆ ಅಗತ್ಯವಿರುವ ಮತ್ತು ನಿಖರವಾದ ವಿಷಯಗಳನ್ನು ಓದುಗರಿಗೆ ಒದಗಿಸುವ ಅವರ ಬದ್ಧತೆಯು ಪ್ರಕಟಣೆಗೆ ಅಮೂಲ್ಯವಾದುದ್ದಾಗಿದೆ. ವೃತ್ತಿಯನ್ನು ಹೊರತುಪಡಿಸಿ ಅವರು ಹೊಸ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದರಲ್ಲಿ, ಯೋಗಾಭ್ಯಾಸ ಮಾಡುವುದರಲ್ಲಿ ಮತ್ತು ಸಂಗೀತವನ್ನು ಕೇಳುವುದರಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಬ್ಯಾಡ್ಮಿಂಟನ್‌ ಆಡುವ ಮೂಲಕ ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಯಾವಾಗಲೂ ಹೊಸ ಹೊಸ ವಿಷಯಗಳನ್ನು ಕಲಿತುಕೊಳ್ಳಲು ಇಷ್ಟಪಡುತ್ತಾರೆ. ಇವರ ಕಲಿಕೆಯ ಉತ್ಸಾಹ ಮತ್ತು ಕೌಶಲ್ಯವು ಅವರನ್ನು ಪ್ರತಿಭಾವಂತ ಬರಹಗಾರರನ್ನಾಗಿ ಮಾಡಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ