Please enable javascript.Rama Mantra Benefits,Rama Mantras: ಈ 10 ರಾಮ ಮಂತ್ರಗಳನ್ನು ಪಠಿಸಿದರೆ ಜೀವನದ ಅದೆಷ್ಟೋ ಸಮಸ್ಯೆಗಳು ಮಾಯ.! - chant these 10 rama mantras to lead peaceful life - Vijay Karnataka

Rama Mantras: ಈ 10 ರಾಮ ಮಂತ್ರಗಳನ್ನು ಪಠಿಸಿದರೆ ಜೀವನದ ಅದೆಷ್ಟೋ ಸಮಸ್ಯೆಗಳು ಮಾಯ.!

Authored byಮನಿಷಾ ಆನಂದ | Agencies 8 Jan 2024, 9:57 am
Subscribe

ರಾಮ ಮಂತ್ರಗಳನ್ನು ಪಠಿಸುವುದರಿಂದ ಜೀವನದಲ್ಲಿನ ಅಡೆತಡೆಗಳೆಲ್ಲವೂ ದೂರಾಗುತ್ತದೆ. ಜೀವನ ಶಾಂತಿಯಿಂದ ಕೂಡಿರುತ್ತದೆ. ಶ್ರೀರಾಮನ ಯಾವ ಮಂತ್ರಗಳನ್ನು ನಾವು ಪಠಿಸಬೇಕು.? ಈ 10 ರಾಮ ಮಂತ್ರಗಳನ್ನು ನೀವು ಮರೆಯದೇ ಪಠಿಸಿ..

ಹೈಲೈಟ್ಸ್‌:

  • ಪ್ರಭಾವಶಾಲಿ ರಾಮ ಮಂತ್ರಗಳು
  • ರಾಮ ಮಂತ್ರಗಳ ಪ್ರಯೋಜನ
  • ರಾಮ ಮಂತ್ರ ಪಠಿಸುವ ವಿಧಾನ
Rama
ರಾಮ
ರಾಮನ ಹೆಸರಿನಲ್ಲಿ ಅಪಾರ ಶಕ್ತಿ ಇದೆ. ಹನುಮಂತನೂ ರಾಮನ ಭಕ್ತನಾಗಿದ್ದ. ನೀವು ಕೂಡ ಶ್ರೀರಾಮನ ಭಕ್ತರಾಗಿದ್ದರೆ ನಾವಿಂದು ನಿಮಗೆ ರಾಮನ ಅದ್ಭುತವಾದ ಮಂತ್ರಗಳ ಕುರಿತು ಇಲ್ಲಿ ಹೇಳಲಾಗುತ್ತಿದ್ದು, ಈ ಮಂತ್ರಗಳನ್ನು ಪಠಿಸುವುದರಿಂದ ನಿಮ್ಮ ಜೀವನದ ಅದೆಷ್ಟೋ ಸಮಸ್ಯೆಗಳು ನಿವಾರಣೆಯಾಗುತ್ತದೆ ಹಾಗೂ ಜೀವನವು ಸುಗಮವಾಗುತ್ತದೆ. ಭಗವಾನ್ ರಾಮ ಹಿಂದೂ ಧರ್ಮದ ಪ್ರಮುಖ ದೇವರುಗಳಲ್ಲಿ ಒಬ್ಬನು. ಅವನು ಆದರ್ಶ ವ್ಯಕ್ತಿ, ಮಾರ್ಗದರ್ಶಕ ಮತ್ತು ಧಾರ್ಮಿಕ ನಾಯಕ ಎಂದು ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾನೆ. ಗೋಸ್ವಾಮಿ ತುಳಸಿದಾಸರು ಬರೆದ ರಾಮಚರಿತಮಾನಸವು ರಾಮನ ಜೀವನದ ಕುರಿತು ನಮಗೆ ಸಾಕಷ್ಟು ವಿವರಣೆಯನ್ನು ನೀಡುತ್ತದೆ.
Monday Dos: ಸೋಮವಾರ ಈ ಕೆಲಸಗಳನ್ನು ಮಾಡಿದರೆ ಕಷ್ಟಗಳೇ ಹತ್ತಿರ ಸುಳಿಯದು.!
rama

ರಾಮ - PC: Facebook

ರಾಮನು ಅಯೋಧ್ಯೆಯಲ್ಲಿ ಜನಿಸಿದವನು ಮತ್ತು ಅವನ ತಂದೆಯ ಹೆಸರು ರಾಜ ದಶರಥ. ರಾಮನ ಪತ್ನಿ ಸೀತಾ ದೇವಿ. ರಾಮಾಯಣವು ರಾಮನ ಜೀವನದ ಬಗ್ಗೆ ನಮಗೆ ಜ್ಞಾನವನ್ನು ನೀಡುತ್ತದೆ. ಅವನು ವನವಾಸದಲ್ಲಿ ಕಳೆದ ಕ್ಷಣಗಳನ್ನು ಕೂಡ ರಾಮಾಯಣದಲ್ಲಿ ಹೇಳಲಾಗಿದೆ. ರಾಮನ ಆಶೀರ್ವಾದವನ್ನು ನೀವು ಈ 10 ಮಂತ್ರಗಳನ್ನು ಪಠಿಸುವ ಮೂಲಕ ಪಡೆದುಕೊಳ್ಳಬಹುದು. ಆ 10 ಮಂತ್ರಗಳು ಹೀಗಿವೆ..

1. ರಾಮ ಮಂತ್ರ:
ಮಂತ್ರ: "ಓಂ ಶ್ರೀ ರಾಮಾಯ ನಮಃ"
ಪ್ರಯೋಜನಗಳು: ಈ ಮಂತ್ರವು ಶಾಂತಿ, ಸಂತೋಷ ಮತ್ತು ಸಮೃದ್ಧಿಯ ಮೂಲವಾಗಿದೆ ಮತ್ತು ಭಕ್ತನನ್ನು ದೈವಿಕತೆಯ ಮೂಲಕ ಏಕತೆಯತ್ತ ಕರೆದೊಯ್ಯುತ್ತದೆ.

Chanakya Niti: ಇಂತವರ ಸಂಬಂಧ ಮಾಡಿದರೆ ಯಶಸ್ಸು ಸಾಧ್ಯವೇ ಇಲ್ಲ ಎನ್ನುತ್ತಾರೆ ಚಾಣಕ್ಯ.!
2. ರಾಮ ಧ್ಯಾನ ಮಂತ್ರ:
ಮಂತ್ರ: "ವದನಿ ರಾಮಣಂ ವರಣೇಂದು ಶಿರೋಧಿಯಾ ಚರಣೌ ಯೋ ಧೃತ್ವಾ, ದೇವಃ ಶಿರಸಾ ನಮತಿ ರಾಮಂ ಪತುರಾಮಃ"
ಪ್ರಯೋಜನಗಳು: ಈ ಮಂತ್ರವನ್ನು ಪಠಿಸುವುದರಿಂದ ಮಾನಸಿಕ ಶಾಂತಿ, ಏಕಾಗ್ರತೆ ಮತ್ತು ಸಮರ್ಪಣೆ ಹೆಚ್ಚಾಗುತ್ತದೆ.

rama

ರಾಮ - PC: Pexel

3. ರಾಮನ ಆರಾಧನೆಯ ಮಂತ್ರ:
ಮಂತ್ರ: "ಶ್ರೀ ರಾಮಚಂದ್ರ ಕೃಪಾಲು ಭಜಮನ ಹರಣ ಭವಭಯ ದಾರುಣಂ|
ನವಕಂಜ ಲೋಚನ, ಕಂಜಮುಖ ಕರ ಕಂಜಪದ ಕಂಜಾರೂಣಂ."
ಪ್ರಯೋಜನ: ಈ ಮಂತ್ರದಿಂದ ಶ್ರೀರಾಮನ ಆಶೀರ್ವಾದ ಸಿಗುತ್ತದೆ ಮತ್ತು ಭಕ್ತಿ ಹೆಚ್ಚಾಗುತ್ತದೆ.

4. ರಾಮ ನಾಮದ ಮಹಿಮೆ ಮಂತ್ರ:
ಮಂತ್ರ: "ರಾಮ ನಾಮ ಸತ್ಯ ಹೈ"
ಪ್ರಯೋಜನಗಳು: ಈ ಮಂತ್ರವನ್ನು ಪಠಿಸುವುದರಿಂದ ಭಕ್ತಿ ಹೆಚ್ಚಾಗುತ್ತದೆ ಮತ್ತು ಭಕ್ತನು ಮೋಕ್ಷವನ್ನು ಪಡೆದುಕೊಳ್ಳುತ್ತಾನೆ.

Dried Tulsi Tips: ಒಣ ತುಳಸಿಯಿಂದ ಹೀಗೆ ಮಾಡಿದರೆ ಹಣದ ಮಳೆ.!
5. ಭಗವಾನ್ ರಾಮನ ಧನ್ಯವಾದ ಮಂತ್ರ:
ಮಂತ್ರ: "ಧನ್ಯವಾದ ಭಗವಾನ್ ರಾಮ"
ಪ್ರಯೋಜನ: ಈ ಮಂತ್ರವನ್ನು ಪಠಿಸುವ ಮೂಲಕ, ಒಬ್ಬ ವ್ಯಕ್ತಿಯು ದೇವರತ್ತ ಕೃತಜ್ಞತೆಯನ್ನು ಹೊಂದುತ್ತಾನೆ ಮತ್ತು ಸ್ವಯಂ-ಅಭಿವೃದ್ಧಿಯನ್ನು ಪಡೆದುಕೊಳ್ಳುತ್ತಾನೆ.

rama

ರಾಮ

6. ರಾಮ ಭಕ್ತಿ ಮಂತ್ರ:
ಮಂತ್ರ: "ರಾಮ ಭಕ್ತಿ ದೇ ದೇ ರೆ ಮಂತ್ರ"
ಪ್ರಯೋಜನಗಳು: ಈ ಮಂತ್ರವನ್ನು ಪಠಿಸುವುದರಿಂದ ಭಕ್ತಿ ಹೆಚ್ಚಾಗುತ್ತದೆ ಮತ್ತು ವ್ಯಕ್ತಿಯು ದೇವರೊಂದಿಗೆ ಆಳವಾದ ಸಂಪರ್ಕವನ್ನು ಬೆಳೆಸಿಕೊಳ್ಳುತ್ತಾನೆ.

7. ರಾಮ ರಕ್ಷಾ ಸ್ತೋತ್ರ:
ಮಂತ್ರ: "ಶ್ರೀರಾಮ ಜಯರಾಮ ಜಯ ಜಯ ರಾಮ."
ಪ್ರಯೋಜನಗಳು: ಈ ಸ್ತೋತ್ರವನ್ನು ಪಠಿಸುವುದರಿಂದ ವ್ಯಕ್ತಿಗೆ ರಕ್ಷಣೆ, ಸಮೃದ್ಧಿ ಮತ್ತು ಶಾಂತಿಯನ್ನು ತರುತ್ತದೆ.

Ram Mandir Rules: ಅಯೋಧ್ಯೆ ರಾಮ ಮಂದಿರಕ್ಕೆ ಇವುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ.!
8. ರಾಮ ಭಕ್ತಿ ಸಾಧನಾ ಮಂತ್ರ:
ಮಂತ್ರ: "ಶ್ರೀ ರಾಮ, ರಾಮ ರಾಮ, ಹರಿ ಹರಿ."
ಪ್ರಯೋಜನಗಳು: ಈ ಮಂತ್ರವು ಭಕ್ತಿ ಮಾರ್ಗದಲ್ಲಿ ಸಾಗಲು ನಮಗೆ ಸಹಾಯ ಮಾಡುತ್ತದೆ ಮತ್ತು ಮನಸ್ಸನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.

Rama

ರಾಮ

9. ರಾಮಾಯಣ ಚೌಪೈ:
ಮಂತ್ರ: "ಮನುಜ ರೂಪ ನರ ಸುಂದರ ಜೇಹಿ, ಅಸ ಕಹಿ ಶ್ರುತಿ ಸಿದ್ಧಿ ಸಕಲ ತಾಹಿ."
ಪ್ರಯೋಜನಗಳು: ಈ ಚೌಪಾಯಿಯನ್ನು ಪಠಿಸುವುದರಿಂದ ವ್ಯಕ್ತಿಯು ಜ್ಞಾನ, ಬುದ್ಧಿವಂತಿಕೆ ಮತ್ತು ತಾಳ್ಮೆಯನ್ನು ಪಡೆದುಕೊಳ್ಳುತ್ತಾನೆ.

Shankaracharya Math: ಇವುಗಳೇ ನೋಡಿ ಆದಿ ಶಂಕರಾಚಾರ್ಯರು
10. ರಾಮ ಸ್ತುತಿ ಮಂತ್ರ:
ಮಂತ್ರ: "ಯಾ ಕುಂದೇಂದುತುಷಾರಹಾರಧವಳಾ ಯಾ ಶುಭ್ರವಸ್ತ್ರಾವೃತಾ."
ಪ್ರಯೋಜನಗಳು: ಈ ಮಂತ್ರವನ್ನು ಪಠಿಸುವುದರಿಂದ ದೇವರ ಮೇಲಿನ ಭಕ್ತಿ ಮತ್ತು ಪ್ರೀತಿ ಹೆಚ್ಚಾಗುತ್ತದೆ.

ಈ ಮೇಲಿನ 10 ಮಂತ್ರಗಳ ಪಠಣವು ಭಗವಾನ್ ರಾಮನ ಭಕ್ತಿಯನ್ನು ಪಡೆದುಕೊಳ್ಳಲು ನಮಗೆ ಸಹಾಯ ಮಾಡುತ್ತದೆ ಮತ್ತು ವ್ಯಕ್ತಿಯನ್ನು ಮಾನವ ಮತ್ತು ಆಧ್ಯಾತ್ಮಿಕ ಪ್ರಗತಿಗೆ ಮಾರ್ಗದರ್ಶನ ನೀಡುತ್ತದೆ.
ಮನಿಷಾ ಆನಂದ
ಲೇಖಕರ ಬಗ್ಗೆ
ಮನಿಷಾ ಆನಂದ
ಮನಿಷಾ ಆನಂದ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ 6 ವರ್ಷಗಳ ನುರಿತ ಅನುಭವ ಹೊಂದಿರುವ ಬರಹಗಾರರು. ಇವರು 2016 ರಲ್ಲಿ ಆಟೋಮೊಬೈಲ್‌ ವಿಭಾಗಕ್ಕೆ ಬರಹಗಾರರಾಗಿ ಸೇರಿಕೊಳ್ಳುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ವೃತ್ತಿಜೀವನಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ತಮ್ಮ ಬರವಣಿಗೆಯ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಬರವಣಿಗೆಯ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಎಲ್ಲಾ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ, ಹೊಸ ವಿಷಯಗಳ ಮೇಲೆ ಸಂಶೋಧನೆ ಮಾಡಿ ಪ್ರಸ್ತುತ ಪಡಿಸುವ ಮೂಲಕ ಅವರದ್ದೇ ಆದ ಓದುಗರ ಸಮೂಹವನ್ನು ಹೊಂದಿದ್ದಾರೆ. ಮನಿಷಾ ಅವರ ಬರವಣಿಗೆಯ ಕೌಶಲ್ಯದ ಮೇಲೆ ಅವರನ್ನು ಆಟೋಮೊಬೈಲ್‌ ವಿಭಾಗದಿಂದ ಧರ್ಮ ವಿಭಾಗಕ್ಕೆ ಬದಲಾಯಿಸಲಾಯಿತು. ಕಳೆದ ಎರಡು ವರ್ಷಗಳಿಂದ ಅವರು ಧರ್ಮ ವಿಭಾಗದಲ್ಲಿ ಹೊಸ ವಿಚಾರಗಳನ್ನು ಪ್ರಸ್ತುತಪಡಿಸುವ ಮೂಲಕ ಓದುಗರಿಗೆ ಬಹಳ ಹತ್ತಿರವಾಗುತ್ತಿದ್ದಾರೆ. ಪ್ರಸ್ತುತ ಸಮಾಜಕ್ಕೆ ಅಗತ್ಯವಿರುವ ಮತ್ತು ನಿಖರವಾದ ವಿಷಯಗಳನ್ನು ಓದುಗರಿಗೆ ಒದಗಿಸುವ ಅವರ ಬದ್ಧತೆಯು ಪ್ರಕಟಣೆಗೆ ಅಮೂಲ್ಯವಾದುದ್ದಾಗಿದೆ. ವೃತ್ತಿಯನ್ನು ಹೊರತುಪಡಿಸಿ ಅವರು ಹೊಸ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದರಲ್ಲಿ, ಯೋಗಾಭ್ಯಾಸ ಮಾಡುವುದರಲ್ಲಿ ಮತ್ತು ಸಂಗೀತವನ್ನು ಕೇಳುವುದರಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಬ್ಯಾಡ್ಮಿಂಟನ್‌ ಆಡುವ ಮೂಲಕ ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಯಾವಾಗಲೂ ಹೊಸ ಹೊಸ ವಿಷಯಗಳನ್ನು ಕಲಿತುಕೊಳ್ಳಲು ಇಷ್ಟಪಡುತ್ತಾರೆ. ಇವರ ಕಲಿಕೆಯ ಉತ್ಸಾಹ ಮತ್ತು ಕೌಶಲ್ಯವು ಅವರನ್ನು ಪ್ರತಿಭಾವಂತ ಬರಹಗಾರರನ್ನಾಗಿ ಮಾಡಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ