ಆ್ಯಪ್ನಗರ

Ayyappa Pancharatnam: ಅಯ್ಯಪ್ಪನ ಅನುಗ್ರಹಕ್ಕಾಗಿ ಪಠಿಸಿ ಅಯ್ಯಪ್ಪ ಪಂಚರತ್ನಂ ಸ್ತೋತ್ರ..!

ಅಯ್ಯಪ್ಪ ಪಂಚರತ್ನಂ ಸ್ತೋತ್ರವನ್ನು ಪಠಿಸುವುದರಿಂದ ಓರ್ವ ವ್ಯಕ್ತಿಯು ಎಲ್ಲಾ ರೀತಿಯ ತೊಂದರೆಗಳಿಂದ ರಕ್ಷಿಸಲ್ಪಡುತ್ತಾನೆ. ಆತನ ದುರಾದೃಷ್ಟವು ಕಳೆಯುತ್ತದೆ ಹಾಗೂ ಉತ್ತಮ ಆರೋಗ್ಯ ಮತ್ತು ಸರ್ವತೋಮುಖ ಸಮೃದ್ಧಿಯನ್ನು ಪಡೆದುಕೊಳ್ಳುತ್ತಾನೆ ಎನ್ನುವ ನಂಬಿಕೆಯಿದೆ. ಅಯ್ಯಪ್ಪ ಪಂಚರತ್ನಂ ಸ್ತೋತ್ರವನ್ನು ಪಠಿಸೋದು ಹೇಗೆ..? ಅಯ್ಯಪ್ಪ ಪಂಚರತ್ನಂ ಸ್ತೋತ್ರದ ಪ್ರಯೋಜನ ಮತ್ತು ಮಹತ್ವವೇನು ಗೊತ್ತೇ..?

TNN & Agencies 16 Nov 2022, 12:33 pm

ಹೈಲೈಟ್ಸ್‌:

ಹೈಲೈಟ್ಸ್‌:
  • ಅಯ್ಯಪ್ಪ ಪಂಚರತ್ನಂ ಸ್ತೋತ್ರ
  • ಅಯ್ಯಪ್ಪ ಪಂಚರತ್ನಂ ಸ್ತೋತ್ರದ ಪ್ರಯೋಜನ
  • ಅಯ್ಯಪ್ಪ ಪಂಚರತ್ನಂ ಸ್ತೋತ್ರ ಪಠಿಸುವ ವಿಧಾನ
  • ಅಯ್ಯಪ್ಪ ಸ್ವಾಮಿ ಮಂತ್ರ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ayyappa pancharatnam stotram
ಅಯ್ಯಪ್ಪ ಪಂಚರತ್ನಂ ಸ್ತೋತ್ರ
ಅಯ್ಯಪ್ಪ ಪಂಚರತ್ನಂ ಎಂದರೆ ಅಯ್ಯಪ್ಪ ಸ್ವಾಮಿಯ ಐದು ಆಭರಣಗಳು ಎಂದು ಪರಿಗಣಿಸಲಾಗುತ್ತದೆ. ಅಯ್ಯಪ್ಪ ಸ್ವಾಮಿಗೆ ಸಂಬಂಧಿಸಿದ ಪಂಚರತ್ನಂ ಸ್ತೋತ್ರದ ಪ್ರತಿಯೊಂದು ಶ್ಲೋಕವನ್ನು ರತ್ನವೆಂದು ಪರಿಗಣಿಸಲಾಗುತ್ತದೆ. ಅಯ್ಯಪ್ಪ ಸ್ವಾಮಿಯ ವಿಶೇಷ ಅನುಗ್ರಹಕ್ಕಾಗಿ ಅಯ್ಯಪ್ಪ ಪಂಚರತ್ನಂ ಸ್ತೋತ್ರವನ್ನು ತಪ್ಪದೇ ಪಠಿಸಬೇಕು. ಅಯ್ಯಪ್ಪ ಪಂಚರತ್ನಂ ಸ್ತೋತ್ರವು ಅಯ್ಯಪ್ಪ ಸ್ವಾಮಿಯ ಅತ್ಯಂತ ಶಕ್ತಿಶಾಲಿ ಸ್ತೋತ್ರಗಳಲ್ಲಿ ಒಂದಾಗಿದೆ. ಮತ್ತು ಇದನ್ನು ಪಠಿಸಲು ಕೂಡ ಅತ್ಯಂತ ಸರಳವಾಗಿದೆ. ನಿಮಗೂ ಅಯ್ಯಪ್ಪ ಪಂಚರತ್ನಂನ್ನು ಪಠಿಸುವ ಆಸೆಯಿದ್ದರೆ ಮರೆಯದೇ ಈ ಲೇಖನವನ್ನು ಓದಿ..
Bhairav Jayanti 2022: ಭೈರವ ಪೂಜೆಯಿಂದ ಇಷ್ಟೆಲ್ಲಾ ಲಾಭಗಳಿವೆ ಎಂದರೆ ನಂಬುವಿರಾ..?

ಅಯ್ಯಪ್ಪ ಸ್ವಾಮಿ


Sabarimala Temple 2022 Open: ಮಂಡಲ ಪೂಜೆ ಮಾಡೋದು ಹೇಗೆ..? ಇದರ ಮಹತ್ವವೇನು..?
- ಅಯ್ಯಪ್ಪ ಪಂಚರತ್ನಂ:
ಲೋಕವೀರಂ ಮಹಾಪೂಜ್ಯಂ ಸರ್ವರಕ್ಷಾಕರಂ ವಿಭುಂ |
ಪಾರ್ವತೀ ಹೃದಯಾನಂದಂ ಶಾಸ್ತಾರಂ ಪ್ರಣಮಾಮ್ಯಹಂ || 1 ||

ವಿಪ್ರಪೂಜ್ಯಂ ವಿಶ್ವವಂದ್ಯಂ ವಿಷ್ಣುಶಂಭೋಃ ಪ್ರಿಯಂ ಸುತಂ |
ಕ್ಷಿಪ್ರಪ್ರಸಾದನಿರತಂ ಶಾಸ್ತಾರಂ ಪ್ರಣಮಾಮ್ಯಹಂ || 2 ||

Bhagavad Gita: ಇವುಗಳಿಂದ ಕೋಪ ಮತ್ತು ಅಸೂಯೆ ನಾಶವಾಗುತ್ತೆ ಎನ್ನುತ್ತಾನೆ ಶ್ರೀಕೃಷ್ಣ..!
ಮತ್ತಮಾತಂಗಗಮನಂ ಕಾರುಣ್ಯಾಮೃತಪೂರಿತಂ |
ಸರ್ವವಿಘ್ನಹರಂ ದೇವಂ ಶಾಸ್ತಾರಂ ಪ್ರಣಮಾಮ್ಯಹಂ || 3 ||

ಅಸ್ಮತ್ಕುಲೇಶ್ವರಂ ದೇವಮಸ್ಮಚ್ಛತ್ರು ವಿನಾಶನಂ |
ಅಸ್ಮದಿಷ್ಟಪ್ರದಾತಾರಂ ಶಾಸ್ತಾರಂ ಪ್ರಣಮಾಮ್ಯಹಂ || 4 ||

ಅಯ್ಯಪ್ಪ ಸ್ವಾಮಿ


Vrischika Sankranti 2022: ವೃಶ್ಚಿಕ ಸಂಕ್ರಾಂತಿ ಮಹತ್ವ, ಮಂತ್ರ, ಸ್ನಾನ ಮತ್ತು ದಾನದ ಮಾಹಿತಿ..!
ಪಾಂಡ್ಯೇಶವಂಶತಿಲಕಂ ಕೇರಲೇ ಕೇಲಿವಿಗ್ರಹಂ |
ಆರ್ತತ್ರಾಣಪರಂ ದೇವಂ ಶಾಸ್ತಾರಂ ಪ್ರಣಮಾಮ್ಯಹಂ || 5 ||

ಪಂಚರತ್ನಾಖ್ಯಮೇತದ್ಯೋ ನಿತ್ಯಂ ಶುದ್ಧಃ ಪಠೇನ್ನರಃ |
ತಸ್ಯ ಪ್ರಸನ್ನೋ ಭಗವಾನ್ ಶಾಸ್ತಾ ವಸತಿ ಮಾನಸೇ ||

||ಇತಿ ಶ್ರೀ ಅಯ್ಯಪ್ಪ ಪಂಚರತ್ನಂ ||

Vrischika Sankranti 2022: ವೃಶ್ಚಿಕ ಸಂಕ್ರಾಂತಿ ಶುಭ ಮುಹೂರ್ತ, ಮಹತ್ವ ಮತ್ತು
- ಅಯ್ಯಪ್ಪ ಪಂಚರತ್ನಂ ಸ್ತೋತ್ರ ಪಠಿಸಲು ಉತ್ತಮ ದಿನ:
ನೀವು ಪ್ರತಿದಿನವೂ ಮಂತ್ರವನ್ನು ಪಠಿಸಲು ಸಾಧ್ಯವಾಗದಿದ್ದರೆ, ನೀವು ಅದನ್ನು ಬುಧವಾರ, ಭಾನುವಾರ, ಷಷ್ಠಿ ತಿಥಿ ದಿನಗಳು, ಉತ್ತರ ಫಾಲ್ಗುಣಿ ಅಥವಾ ಕಾರ್ತಿಕ ನಕ್ಷತ್ರದ ದಿನಗಳಲ್ಲಿ ಮತ್ತು ಪೂರ್ಣಿಮಾ/ಪೌರ್ಣಮಿಯಂದು (ಹುಣ್ಣಿಮೆಯ ದಿನಗಳು) ಪಠಿಸಬಹುದು.

ಅಯ್ಯಪ್ಪ ಸ್ವಾಮಿ


Powerful Mantras: 15 ಹಿಂದೂ ದೇವರುಗಳು ಮತ್ತು 15 ಶಕ್ತಿಶಾಲಿ ಮಂತ್ರಗಳು ಹೀಗಿವೆ..!
ಅಲ್ಲದೆ, ಕಾರ್ತಿಕ (ನವೆಂಬರ್ ಮಧ್ಯದಿಂದ ಡಿಸೆಂಬರ್ ಮಧ್ಯದವರೆಗೆ) ಎಂದು ಕರೆಯಲ್ಪಡುವ ಹಿಂದೂ ಚಂದ್ರನ ಮಕರ ಮಾಸದಲ್ಲಿ ಅಯ್ಯಪ್ಪ ಪಂಚರತ್ನಂ ಅನ್ನು ಪಠಿಸಲು ಹೆಚ್ಚು ಶಿಫಾರಸು ಮಾಡಲಾಗಿದೆ.

Koragajja Story: ತುಳುನಾಡಿನ ದೈವ ಸ್ವಾಮಿ ಕೊರಗಜ್ಜನ ಬಗ್ಗೆ ನಿಮಗೇನಾದರೂ ಗೊತ್ತೇ..?
- ಅಯ್ಯಪ್ಪ ಪಂಚರತ್ನಂ ಪಠಿಸಲು ಉತ್ತಮ ಸಮಯ:
ನಿಮಗೆ ಅಗತ್ಯ ಎನಿಸಿದಾಗ ಮಂತ್ರವನ್ನು ಯಾವಾಗ ಬೇಕಾದರೂ ಪಠಿಸಬಹುದು. ಆದರೆ, ಈ ಮಂತ್ರವನ್ನು ಪಠಿಸಲು ಉತ್ತಮ ಸಮಯವೆಂದರೆ ಮುಂಜಾನೆ (ಮೇಲಾಗಿ ಬ್ರಹ್ಮ ಮುಹೂರ್ತದ ಸಮಯದಲ್ಲಿ ಅಥವಾ ಸೂರ್ಯೋದಯದ ಸಮಯದಲ್ಲಿ) ಮತ್ತು ಸಂಧ್ಯಾ ಕಾಲದ ಅವಧಿಯಲ್ಲಿ ಪಠಿಸಬಹುದು.

ಇಂತವರ ಸ್ನೇಹ ಮಾಡಿದರೆ ಜೀವನವೇ ಹಾಳು ಎನ್ನುತ್ತಾನೆ ಚಾಣಕ್ಯ..! ಇವರಿಂದ ದೂರಿರಿ..
- ಎಷ್ಟು ಬಾರಿ ಅಯ್ಯಪ್ಪ ಪಂಚರತ್ನಂ ಪಠಿಸಬೇಕು.?
ಈ ಮಂತ್ರವನ್ನು ಇಷ್ಟೇ ಬಾರಿ, ಅಷ್ಟೇ ಬಾರಿ ಪಠಿಸಬೇಕೆಂಬ ಯಾವುದೇ ರೀತಿಯ ಇತಿ - ಮಿತಿಗಳಿಲ್ಲ. ಆದಾಗ್ಯೂ, ನೀವು ಇದನ್ನು ದಿನಕ್ಕೆ 9 ಬಾರಿ, 11 ಬಾರಿ ಅಥವಾ 108 ಬಾರಿ ಕೂಡ ಪಠಿಸಬಹುದು. ಹಾಗೂ ಈ ಸ್ತೋತ್ರವನ್ನು ಯಾವುದೇ ಲಿಂಗ ಭೇದವಿಲ್ಲದೆ, ವಯಸ್ಸಿನ ಮಿತಿಗಳಿಲ್ಲದೆ ಯಾರೂ ಬೇಕಾದರೂ ಪಠಿಸಬಹುದು.

ಅಯ್ಯಪ್ಪ ಸ್ವಾಮಿ


Bhagavad Gita: ಮಾನವನ ಅವನತಿ ಇವುಗಳಿಂದಲೇ ಪ್ರಾರಂಭ ಎನ್ನುತ್ತಾನೆ ಶ್ರೀಕೃಷ್ಣ.!
ಅಯ್ಯಪ್ಪ ಸ್ವಾಮಿಯ ಪಂಚರತ್ನಂ ಸ್ತೋತ್ರವನ್ನು ಪಠಿಸುವುದರಿಂದ ಅಯ್ಯಪ್ಪನನ್ನು ಶೀಘ್ರದಲ್ಲೇ ಒಲಿಸಿಕೊಳ್ಳಬಹುದು. ಅಯ್ಯಪ್ಪ ಸ್ವಾಮಿಗೆ ಸಂಬಂಧಿಸಿದ ಮಂತ್ರಗಳಲ್ಲಿ ಇದೊಂದು ಅತ್ಯಂತ ಸರಳ ಮಂತ್ರವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ