ಆ್ಯಪ್ನಗರ

ಗಾಯಕ್ವಾಡ್‌ ಅರ್ಧಶತಕ, ಮುಂಬೈ ವಿರುದ್ಧ ಚೆನ್ನೈಗೆ 20 ರನ್‌ ಜಯ!

ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಋತುರಾಜ್‌ ಗಾಯಕ್ವಾಡ್‌ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ , ಮುಂಬೈ ಇಂಡಿಯನ್ಸ್‌ ವಿರುದ್ಧ 20 ರನ್‌ ಜಯ ಗಳಿಸಿದೆ.

Vijaya Karnataka Web 19 Sep 2021, 11:56 pm

ಹೈಲೈಟ್ಸ್‌:

  • 2021ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಯುಎಇ ಚರಣ ಆರಂಭ.
  • ಮುಂಬೈ ಇಂಡಿಯನ್ಸ್‌ ವಿರುದ್ಧ 20 ರನ್‌ ಜಯ ಗಳಿಸಿದ ಚೆನ್ನೈ ಸೂಪರ್‌ ಕಿಂಗ್ಸ್.
  • ಪಂದ್ಯದ ಗೆಲುವಿನೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೇರಿದ ಚೆನ್ನೈ.
  • ಅಜೇಯ 88 ರನ್‌ ಸಿಡಿಸಿದ ಋತುರಾಜ್‌ ಗಾಯಕ್ವಾಡ್‌ಗೆ ಮ್ಯಾನ್‌ ಆಫ್‌ ದಿ ಮ್ಯಾಚ್‌.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Ruturaj gaikwad
ಋತುರಾಜ್‌ ಗಾಯಕ್ವಾಡ್‌ (ಚಿತ್ರ: ಐಪಿಎಲ್‌ ವೆಬ್‌ಸೈಟ್‌)
ದುಬೈ: ಋತುರಾಜ್‌ ಗಾಯಕ್ವಾಡ್‌(88*) ಸ್ಪೋಟಕ ಬ್ಯಾಟಿಂಗ್‌ ಹಾಗೂ ಡ್ವೇನ್‌ ಬ್ರಾವೊ (25ಕ್ಕೆ 3) ಅವರ ಶಿಸ್ತುಬದ್ಧ ಬೌಲಿಂಗ್‌ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ಹದಿನಾಲ್ಕನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ 30ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 20 ರನ್ ಜಯ ಗಳಿಸಿತು.
ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ 157 ರನ್‌ ಗುರಿ ಹಿಂಬಾಲಿಸಿದ್ದ ಮುಂಬೈ ಇಂಡಿಯನ್ಸ್ ಪರ ಸೌರಭ್‌ ತಿವಾರಿ ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಒಂದು ತುದಿಯಲ್ಲಿ ಇನಿಂಗ್ಸ್ ಪೂರ್ತಿ ಬ್ಯಾಟ್‌ ಮಾಡಿದ ತಿವಾರಿ 40 ಎಸೆತಗಳಲ್ಲಿ 5 ಬೌಂಡರಿಯೊಂದಿಗೆ ಅಜೇಯ 50 ರನ್‌ ಗಳಿಸಿದರೂ ಮುಂಬೈಗೆ ಗೆಲುವು ತಂದುಕೊಡುವಲ್ಲಿ ಸಾಧ್ಯವಾಗಲಿಲ್ಲ.

ದೀಪಕ್‌ ಚಹರ್‌ (19ಕ್ಕೆ 2) ಹಾಗೂ ಡ್ವೇನ್‌ ಬ್ರಾವೊ ಪರಿಣಾಮಕಾರಿ ಬೌಲಿಂಗ್‌ಗೆ ನಲುಗಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಿಗೆ 8 ವಿಕೆಟ್‌ ಕಳೆದುಕೊಂಡು 136 ರನ್‌ಗಳಿಗೆ ಸೀಮಿತವಾಯಿತು ಹಾಗೂ 20 ರನ್‌ಗಳಿಂದ ಸೋಲು ಅನುಭವಿಸಿತು. ಈ ಗೆಲುವಿನೊಂದಿಗೆ ಚೆನ್ನೈ ಸೂಪರ್‌ ಕಿಂಗ್ಸ್ 12 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೇರಿತು.


ಚೆನ್ನೈ Vs ಮುಂಬೈ ಪಂದ್ಯದ ಸ್ಕೋರ್‌ಕಾರ್ಡ್
ಮುಂಬೈಗೆ 157 ರನ್‌ ಗುರಿ ನೀಡಿದ್ದ ಚೆನ್ನೈ: ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್, ಟ್ರೆಂಟ್‌ ಬೌಲ್ಟ್ ಹಾಗೂ ಆಡಂ ಮಿಲ್ನೆ ಮಾರಕ ದಾಳಿಗೆ ನಲುಗಿ ಬಹುಬೇಗ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ, ಋತುರಾಜ್‌ ಗಾಯಕ್ವಾಡ್‌ ಅವರ ಅದ್ಭುತ ಬ್ಯಾಟಿಂಗ್‌ ನೆರವಿನಿಂದ ಚೆನ್ನೈ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು 156 ರನ್‌ ಗಳಿಸಿತು ಹಾಗೂ ಮುಂಬೈಗೆ 157 ರನ್‌ ಗುರಿ ನೀಡಿತ್ತು.

ಗಾಯಕ್ವಾಡ್‌ ಅರ್ಧಶತಕ: ಒಂದು ತುದಿಯಲ್ಲಿ ಕೊನೆಯವರೆಗೂ ಔಟಾಗದೆ ಬ್ಯಾಟ್‌ ಮಾಡಿದ ಋತುರಾಜ್‌ ಗಾಯಕ್ವಾಡ್‌ ಎದುರಾಳಿ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಒಂದು ತುದಿಯಲ್ಲಿ ವಿಕೆಟ್‌ ಉರುಳುತ್ತಿದ್ದರೂ ಎದೆಗುಂದದೆ ಬ್ಯಾಟ್‌ ಮಾಡಿದ ಗಾಯಕ್ವಾಡ್‌, 58 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 9 ಮನ ಮೋಹಕ ಬೌಂಡರಿಗಳೊಂದಿಗೆ ಅಜೇಯ 88 ರನ್‌ ಗಳಿಸಿದರು. ಅಲ್ಲದೆ, ರವೀಂದ್ರ ಜಡೇಜಾ(26) ಜೊತೆ 80 ರನ್‌ ಮಹತ್ವದ ಜೊತೆಯಾಟವಾಡಿದ್ದರು.

undefinedಡೆತ್‌ ಓವರ್‌ಗಳಲ್ಲಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರಿದ ಡ್ವೇನ್‌ ಬ್ರಾವೊ ಕೇವಲ 8 ಎಸೆತಗಳಲ್ಲಿ ಮೂರು ಸಿಕ್ಸರ್‌ಗಳ ನೆರವಿನಿಂದ 23 ನಿರ್ಣಾಯಕ ರನ್‌ ಸಿಡಿಸಿದರು. ಆದರೆ, ಇದಕ್ಕೂ ಮುನ್ನ ಫಾಫ್‌ ಡುಪ್ಲೆಸಿಸ್‌, ಮೊಯಿನ್‌ ಅಲಿ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದ್ದರೆ, ಅಂಬಾಟಿ ರಾಯುಡು(0) ಚೆಂಡು ತಗುಲಿಸಿಕೊಂಡು ಹೊರ ನಡೆದಿದ್ದರು. ರೈನಾ ಹಾಗೂ ಧೋನಿ ಕೂಡ ನಿರೀಕ್ಷೆ ಹುಸಿಗೊಳಿಸಿದರು. ಮುಂಬೈ ಪರ ಟ್ರೆಂಟ್ ಬೌಲ್ಟ್‌, ಆಡಂ ಮಿಲ್ನೆ ಹಾಗೂ ಜಸ್‌ಪ್ರಿತ್‌ ಬುಮ್ರಾ ತಲಾ ಎರಡೆರಡು ವಿಕೆಟ್‌ಗಳನ್ನು ಪಡೆದುಕೊಂಡರು.

ಆರ್‌ಸಿಬಿ ಅಲ್ಲವೇ ಅಲ್ಲ! ಈ ಬಾರಿ ಐಪಿಎಲ್‌ ಗೆಲ್ಲುವ ತಂಡ ಹೆಸರಿಸಿದ ವೀರು!

ಸಂಕ್ಷಿಪ್ತ ಸ್ಕೋರ್‌

ಚೆನ್ನೈ ಸೂಪರ್‌ ಕಿಂಗ್ಸ್: 20 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 156 (ಋತುರಾಜ್‌ ಗಾಯಕ್ವಾಡ್‌ ಅಜೇಯ 88*, ರವೀಂದ್ರ ಜಡೇಜಾ 26, ಡ್ವೇನ್‌ ಬ್ರಾವೊ 23; ಟ್ರೆಂಟ್‌ ಬೌಲ್ಟ್‌ 35ಕ್ಕೆ 2, ಆಡಂ ಮಿಲ್ನೆ 21ಕ್ಕೆ 2 , ಜಸ್‌ಪ್ರಿತ್‌ ಬುಮ್ರಾ 33ಕ್ಕೆ 2)

ಮುಂಬೈ ಇಂಡಿಯನ್ಸ್: 20 ಓವರ್‌ಗಳಿಗೆ 8 ವಿಕೆಟ್‌ ನಷ್ಟಕ್ಕೆ 136 (ಸೌರಭ್‌ ತಿವಾರಿ 50*, ಕ್ವಿಂಟನ್ ಡಿ ಕಾಕ್‌ 17; ಡ್ವೇನ್‌ ಬ್ರಾವೊ 25ಕ್ಕೆ 3, ದೀಪಕ್‌ ಚಹರ್‌ 19ಕ್ಕೆ 2, ಶಾರ್ದುಲ್‌ ಠಾಕೂರ್ 29ಕ್ಕೆ 1, ಜಾಶ್‌ ಹೇಝಲ್‌ವುಡ್‌ 34ಕ್ಕೆ 1

ಫಲಿತಾಂಶ: ಚೆನ್ನೈ ಸೂಪರ್‌ ಕಿಂಗ್ಸ್‌ಗೆ 20 ರನ್‌ ಜಯ
ಪಂದ್ಯ ಶ್ರೇಷ್ಠ ಪ್ರಶಸ್ತಿ: ಋತುರಾಜ್‌ ಗಾಯಕ್ವಾಡ್‌



ಉಭಯ ತಂಡಗಳ ಪ್ಲೇಯಿಂಗ್‌ XI

ಚೆನ್ನೈ ಸೂಪರ್‌ ಕಿಂಗ್ಸ್: ಫಾಫ್‌ ಡುಪ್ಲೆಸಿಸ್‌, ಋತುರಾಜ್‌ ಗಾಯಕ್ವಾಡ್‌, ಸುರೇಶ್‌ ರೈನಾ, ಮೊಯೀನ್‌ ಅಲಿ, ಅಂಬಾಟಿ ರಾಯುಡು, ಎಂಎಸ್‌ ಧೋನಿ(ನಾಯಕ, ವಿ.ಕೀ), ರವೀಂದ್ರ ಜಡೇಜಾ, ಡ್ವೇನ್‌ ಬ್ರಾವೊ, ಶಾರ್ದುಲ್‌ ಠಾಕೂರ್‌, ದೀಪಕ್‌ ಚಹರ್‌, ಜಾಶ್‌ ಹೇಝಲ್ವುಡ್‌

ಮುಂಬೈ ಇಂಡಿಯನ್ಸ್: ಕ್ವಿಂಟನ್‌ ಡಿ ಕಾಕ್(ವಿ.ಕೀ),ಇಶಾನ್‌ ಕಿಶನ್‌, ಸೂರ್ಯಕುಮಾರ್‌ ಯಾದವ್‌, ಅನ್ಮೋಲ್ ಪ್ರೀತ್ ಸಿಂಗ್, ಕೈರೊನ್‌ ಪೊಲಾರ್ಡ್‌(ನಾಯಕ), ಸೌರಭ್‌ ತಿವಾರಿ, ಕೃಣಾಲ್‌ ಪಾಂಡ್ಯ, ಆಡಂ ಮಿಲ್ನೆ, ಜಸ್‌ಪ್ರಿತ್‌ ಬುಮ್ರಾ, ರಾಹುಲ್‌ ಚಹರ್‌, ಟ್ರೆಂಟ್‌ ಬೌಲ್ಟ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌