ಆ್ಯಪ್ನಗರ

ಪಾಲಿ ಉಮ್ರಿಗಾರ್ ಪ್ರಶಸ್ತಿ ಸಂಭ್ರಮ ಹಂಚಿಕೊಂಡ ಶುಭಮನ್ ಗಿಲ್!

Shubman Gill shares incredible throwback image: ಜನವರಿ 23( ಮಂಗಳವಾರ)ರಂದು ಹೈದರಾಬಾದ್‌ನಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಹಮ್ಮಿಕೊಂಡಿದ್ದ ಬಿಸಿಸಿಐನ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಟೀಮ್ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಜೀವಮಾನ ಶ್ರೇಷ್ಠ ಪ್ರಶಸ್ತಿ ಪಡೆದರೆ, ಜಸ್ಪ್ರೀತ್ ಬುಮ್ರಾ, ಶುಭಮನ್ ಗಿಲ್ ಸೇರಿದಂತೆ ಹಲವು ಕ್ರಿಕೆಟಿಗರು ಬಿಸಿಸಿಐ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 2023ರಲ್ಲಿ ತೋರಿದ ಅತ್ಯುತ್ತಮ ಪ್ರದರ್ಶನಕ್ಕಾಗಿ ಈ ಪ್ರಶಸ್ತಿ ಪಡೆದಿರುವ ಗಿಲ್, ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿ ಈ ಪ್ರಶಸ್ತಿ ಗೆದ್ದಿರುವ ಹಳೆಯ ಪೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

Edited byವಿಜೇತ್ ಕುಮಾರ್‌ ಡಿ.ಎನ್ | Vijaya Karnataka Web 24 Jan 2024, 11:12 am

ಹೈಲೈಟ್ಸ್‌:

  • 2023ರಲ್ಲಿ ಎಲ್ಲ ಸ್ವರೂಪದಲ್ಲೂ ಅತ್ಯಮೋಘ ಪ್ರದರ್ಶನ ತೋರಿದ್ದ ಶುಭಮನ್ ಗಿಲ್.
  • ಜನವರಿ 23ರಂದು ನಡೆದ ಸಮಾರಂಭದಲ್ಲಿ ಬಿಸಿಸಿಐ ಪ್ರಶಸ್ತಿಗೆ ಗಿಲ್ ಪಾತ್ರರಾಗಿದ್ದಾರೆ.
  • ವಿರಾಟ್ ಕೊಹ್ಲಿ ಬಿಸಿಸಿಐ ಪ್ರಶಸ್ತಿ ಗೆದ್ದ ಹಳೆಯ ಪೋಟೋ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ ಆರಂಭಿಕ ಆಟಗಾರ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Shubman Gill Gets Polly Umrigar Award
ಟೀಮ್ ಇಂಡಿಯಾ ಸ್ಟಾರ್‌ ಬ್ಯಾಟರ್‌ ಶುಭಮನ್ ಗಿಲ್ (ಚಿತ್ರ: ಬಿಸಿಸಿಐ).
ಬೆಂಗಳೂರು: ಜನವರಿ 23 (ಮಂಗಳವಾರ) ರಂದು ಹೈದರಾಬಾದ್ ನಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ‌ ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ಪ್ರತಿಷ್ಠಿತ ಪಾಲಿ ಉಮ್ರಿಗಾರ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ವಿರಾಟ್ ಕೊಹ್ಲಿ ಈ ಪ್ರಶಸ್ತಿ ಪಡೆದ ಅಪರೂಪದ ಫೋಟೋವನ್ನು ತನ್ನ ಇನ್ಸಾಟಾಗ್ರಾಮ್ ಖಾತೆಯಲ್ಲಿ ಪ್ರಕಟಿಸುವ ಮೂಲಕ ಗಿಲ್ ಸಂತಸ ವ್ಯಕ್ತಪಡಿಸಿದ್ದಾರೆ. ಇದೇ ಸಮಾರಂಭದಲ್ಲಿ ವಿಶ್ವಕಪ್ ವಿಜೇತ ಆಟಗಾರ ರವಿಶಾಸ್ತ್ರಿ ಜೀವಮಾನ ಸಾಧನೆ ಪ್ರಶಸ್ತಿ ಪಡೆದರೆ, ಜಸ್ಪ್ರೀತ್ ಬುಮ್ರಾ, ಮಿಥಾಲಿ ರಾಜ್, ಸ್ಮೃತಿ ಮಂಧಾನ ಸೇರಿದಂತೆ ಹಲವರು ಕೂಡ ಬಿಸಿಸಿಐ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿ ಬಿಸಿಸಿಐ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿರುವ ಶುಭಮನ್ ಗಿಲ್, 2023ರಲ್ಲಿ ಎಲ್ಲ ಮಾದರಿ ಕ್ರಿಕೆಟ್ ನಲ್ಲಿ ಉತ್ತಮ ಫಾರ್ಮ್ ನಲ್ಲಿದ್ದರು. 29 ಏಕದಿನ ಪಂದ್ಯಗಳಿಂದ 5 ಶತಕ ಸೇರಿದಂತೆ 105.45 ಸ್ಟ್ರೆಕ್ ರೇಟ್ ನಲ್ಲಿ ಗಿಲ್ 1,584 ರನ್ ಗಳಿಸಿದ್ದರು.

BCCI Awards: ರವಿ ಶಾಸ್ತ್ರಿಗೆ ಜೀವಮಾನ ಸಾಧನೆ, ಪ್ರಶಸ್ತಿ ವಿಜೇತರ ಸಂಪೂರ್ಣ ವಿವರ!

ಏಕದಿನ ಮಾದರಿಯಲ್ಲಿ ಕಳೆದ ವರ್ಷ ಅತ್ಯಮೋಘ ಪ್ರದರ್ಶನ ತೋರಿದ್ದ ಶುಭಮನ್ ಗಿಲ್, ನ್ಯೂಜಿಲೆಂಡ್ ವಿರುದ್ಧ ದ್ವಿಶತಕ (208 ರನ್) ಸಿಡಿಸಿದ್ದಲ್ಲದೆ,38 ಇನಿಂಗ್ಸ್ ನಲ್ಲಿ ವೇಗದ 2000 ಏಕದಿನ ರನ್ ಗಳಿಸಿ ದಾಖಲೆ ನಿರ್ಮಿಸಿದ್ದರು. 2023ರ ಕ್ಯಾಲೆಂಡರ್ ವರ್ಷದಲ್ಲಿ ಮೂರು ಮಾದರಿ ಕ್ರಿಕೆಟ್ ನಲ್ಲಿ 2000 ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಭಾರತೀಯ ಎಂಬ ದಾಖಲೆಗೆ ಪಾತ್ರರಾಗಿದ್ದ ಗಿಲ್, ಈ ಪ್ರದರ್ಶನದಿಂದಲೇ ಅವರು ಪಾಲಿ ಉಮ್ರಿಗಾರ್ ಪ್ರಶಸ್ತಿ ಸ್ವೀಕರಿಸಿದ್ದಾರೆ.

ವಿರಾಟ್ ಕೊಹ್ಲಿ ಪೋಟೋ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ ಗಿಲ್

ಬಿಸಿಸಿಐ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿದ ಬೆನ್ನಲ್ಲೇ ಶುಭಮನ್ ಗಿಲ್ ಅವರು ತಮ್ಮ ಇನ್ಸಾಟಾಗ್ರಾಂ ಪೋಸ್ಟ್ ನಲ್ಲಿ ವಿರಾಟ್ ಕೊಹ್ಲಿ ಪಾಲಿ ಉಮ್ರಿಗಾರ್ ಪ್ರಶಸ್ತಿ ಸ್ವೀಕರಿಸಿದ್ದ ಫೋಟೋ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ನಾನು ವಿರಾಟ್ ಕೊಹ್ಲಿಯನ್ನು ಭೇಟಿಯಾದಾಗ ನನಗೆ 14 ವರ್ಷ ವಯಸ್ಸಾಗಿತ್ತು. ಆಗಲೇ ನಾನು ಮುಂದೊಂದು ದಿನ ಈ ಪ್ರಶಸ್ತಿ ಪಡೆಯಬೇಕೆಂದು ಮನದಲ್ಲಿ ಹಂಬಲ ಹೊಂದಿದ್ದೆ ಎಂದು ಹೇಳಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ 2 ಪಂದ್ಯಗಳಿಗೆ ವಿರಾಟ್‌ ಕೊಹ್ಲಿ ಅಲಭ್ಯ!

"ನಾನು ಅಂದು ಸಾಕಷ್ಟು ಉತ್ಕಂಠತೆ ಹೊಂದಿದ್ದೆ. ನಾನು ಮೊದಲ ಬಾರಿ ಇಲ್ಲಿಗೆ (ಬಿಸಿಸಿಐ ಪ್ರಶಸ್ತಿ ಸಮಾರಂಭ) ಬಂದು ನನ್ನ ಆರಾಧ್ಯದೈವ ಹಾಗೂ ಕ್ರಿಕೆಟ್ ದಿಗ್ಗಜರನ್ನು ಭೇಟಿಯಾದಾಗ ನನಗೆ 14 ವರ್ಷ ವಯಸ್ಸಾಗಿತ್ತು. ವಿರಾಟ್ ಭಾಯ್ ಈ ಪ್ರತಿಷ್ಠಿತ ಪ್ರಶಸ್ತಿ ಗೆದ್ದ ಅವಿಸ್ಮರಣೀಯ ಕ್ಷಣವನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ಇದರಿಂದ ನಾನು ಅಪ್ಪಟ ಸ್ಫೂರ್ತಿ ಪಡೆದು ಕ್ರಿಕೆಟ್ ಜೀವನದಲ್ಲಿ ಮತ್ತಷ್ಟು ಎತ್ತರದ ಮಟ್ಟಕ್ಕೆ ತಲುಪಲು ಸಹಕಾರಿ ಆಯಿತು. ಕಳೆದ ವರ್ಷ (2023) ತಂಡಕ್ಕೆ ತನ್ನ ಕೈಲಾದ ಪ್ರದರ್ಶನ ನೀಡಲು ಸಾಧ್ಯವಾಗಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ," ಎಂದು ಶುಭಮನ್ ಗಿಲ್ ಸಂತಸ ವ್ಯಕ್ತಪಡಿಸಿದ್ದಾರೆ.

ವಿರಾಟ್‌ ಕೊಹ್ಲಿ ಅಲಭ್ಯತೆ ಬಗ್ಗೆ ಕೋಚ್‌ ರಾಹುಲ್‌ ದ್ರಾವಿಡ್‌ ಹೇಳಿದ್ದಿದು!

ಇಂಗ್ಲೆಂಡ್ ಸರಣಿಗೆ ಸಜ್ಜಾಗುತ್ತಿರುವ ಶುಭಮನ್ ಗಿಲ್

ಅಫಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20-ಐ ಸರಣಿಯ ಮೊದಲ ಪಂದ್ಯ ಆಡಿ ನಂತರ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದ ಶುಭಮನ್ ಗಿಲ್, ಜನವರಿ 25 ರಿಂದ ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದ ಪ್ಲೇಯಿಂಗ್ XI ನಲ್ಲಿ ಸ್ಥಾನ ಪಡೆಯಲು ಶುಭಮನ್ ಗಿಲ್ ಎದುರು ನೋಡುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಆರಂಭಿಕ 2 ಪಂದ್ಯಗಳಿಗೆ ಆಯ್ಕೆ ಆಗಿದ್ದ‌ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ವೈಯಕ್ತಿಕ ಕಾರಣಕ್ಕಾಗಿ ಹಿಂದೆ ಸುರಿದಿದ್ದು, ಉಳಿದ ಮೂರು ಪಂದ್ಯಗಳಿಗೆ ಕಮ್ ಬ್ಯಾಕ್ ಮಾಡುವ ಸಾಧ್ಯತೆಗಳಿವೆ.
ಲೇಖಕರ ಬಗ್ಗೆ
ವಿಜೇತ್ ಕುಮಾರ್‌ ಡಿ.ಎನ್
ವಿಜಯ ಕರ್ನಾಟಕ ವೆಬ್‌ನಲ್ಲಿ ಕ್ರೀಡಾ ವಿಭಾಗದ ಪತ್ರಕರ್ತರಾಗಿ 2019ರಿಂದ ಸೇವೆಯಲ್ಲಿದ್ದಾರೆ. ಇದಕ್ಕೂ ಮುನ್ನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸಂಜೆ ವಾಣಿ ಮತ್ತು ಒನ್‌ ಇಂಡಿಯಾ ಸಂಸ್ಥೆಗಳಲ್ಲಿ ಟೆಕ್‌, ಆಟೊಮೊಬೈಲ್ಸ್‌, ರಾಜಕೀಯ, ಸಿನಿಮಾ ಮತ್ತು ವಾಣಿಜ್ಯ ಕ್ಷೇತ್ರಗಳ ಬಗ್ಗೆ ವರದಿ ಮಾಡಿದ ಅನುಭವ ಹೊಂದಿದ್ದು, ಟೆನಿಸ್‌, ಬ್ಯಾಡ್ಮಿಂಟನ್‌ ಮತ್ತು ಕ್ರಿಕೆಟ್‌ ಇವರ ಅಚ್ಚುಮೆಚ್ಚಿನ ಕ್ರೀಡೆಗಳು. ಪವರ್‌ಲಿಫ್ಟಿಂಗ್ ಇವರ ಹೊಸ ಪ್ರವೃತ್ತಿ, ವ್ಯಾಯಾಮ, ಸಾಹಿತ್ಯ ಓದು, ಪ್ರವಾಸ, ಬೈಕಿಂಗ್‌ ಹಾಗೂ ಚಾರಣ ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌