ಆ್ಯಪ್ನಗರ

ಮ್ಯಾಚ್‌ ಫಿಕ್ಸಿಂಗ್ ಆರೋಪ, ಶ್ರೀಲಂಕಾ ಸ್ಪಿನ್ನರ್‌ ಸಚಿತ್ರ ಸೇನಾನಾಯಕೆ ಬಂಧನ!

Sachithra Senanayake Arrested for Match Fixing: ಶ್ರೀಲಂಕಾ ತಂಡದ ಮಾಜಿ ಸ್ಪಿನ್‌ ಮಾಂತ್ರಿಕ ಸಚಿತ್ರ ಸೇನಾನಾಯಕೆ, ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರುವ ಆರೋಪದ ಮೇರೆಗೆ ಬುಧವಾರ (ಸೆಪ್ಟೆಂಬರ್‌ 6) ಬಂಧನಕ್ಕೊಳಗಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಭ್ರಷ್ಟಾಚಾರ ತಡೆ ಘಟಕ ನಡೆಸಿರುವ ತನಿಖೆಯಲ್ಲಿ ಸಚಿತ್ರ ಸೇನಾನಾಯಕೆ ಮೋಸದಾಟದಲ್ಲಿ ಪಾಲ್ಗೊಂಡಿರುವುದು ತಿಳಿದುಬಂದಿದೆ ಎಂಬುದು ಇತ್ತೀಚಿನ ವರದಿಗಳ ಮೂಲಕ ಬೆಳಕಿಗೆ ಬಂದಿದೆ. ಆರೋಪದ ಬೆನ್ನಲ್ಲೇ ಅಧಿಕಾರಿಗಳಿಗೆ ಶರಣಾಗಿದ್ದಾರೆ. ಈ ಹಿಂದೆ ಶ್ರೀಲಂಕಾದ ಹಲವು ಆಟಗಾರರು ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ.

Authored byವಿಜೇತ್ ಕುಮಾರ್‌ ಡಿ.ಎನ್ | Vijaya Karnataka Web 6 Sep 2023, 8:46 pm
ಕೊಲಂಬೊ: ಶ್ರೀಲಂಕಾ ತಂಡದ ಮಾಜಿ ಸ್ಪಿನ್ನರ್‌ ಸಚಿತ್ರ ಸೇನಾನಾಯಕೆ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರುವ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಬುಧವಾರ (ಸೆಪ್ಟೆಂಬರ್‌ 6) ಬಂಧನಕ್ಕೊಳಗಾಗಿದ್ದಾರೆ. ಪ್ರಕರಣ ಸಂಬಂಧ ಮೂರು ವಾರಗಳ ಹಿಂದೆಯೇ ನ್ಯಾಯಾಲಯ ಕಳಂಕಿತ ಕ್ರಿಕೆಟಿಗನಿಗೆ ವಿದೇಶ ಪ್ರವಾಸ ಕೈಗೊಳ್ಳದೇ ಇರುವಂತೆ ನಿರ್ಬಂಧ ಹೇರಿತ್ತು.
Vijaya Karnataka Web Sachithra Senanayake
ಶ್ರೀಲಂಕಾದ ಸ್ಪಿನ್ನರ್‌ ಸಚಿತ್ರ ಸೇನಾನಾಯಕೆ (ಚಿತ್ರ: ಐಸಿಸಿ).


2020ರ ಸಾಲಿನ ಲಂಕಾ ಪ್ರೀಮಿಯರ್‌ ಲೀಗ್‌ ಟೂರ್ನಿ ವೇಳೆ ಸಚಿತ್ರ ಸೇನಾನಾಯಕೆ ಮ್ಯಾಚ್‌ ಫಿಕ್ಸಿಂಗ್‌ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಇದರ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ತಮ್ಮನ್ನು ತಾವೇ ಅಧಿಕಾರಿಗಳಿಗೆ ಒಪ್ಪಿಸಿಕೊಂಡಿದ್ದಾರೆ. ವರದಿ ಪ್ರಕಾರ ಸಚಿತ್ರ ಸೇನಾನಾಯಕೆ ಟೆಲಿಫೋನ್‌ ಕರೆ ಮೂಲಕ ದುಬೈನಿಂದ ಇಬ್ಬರು ಆಟಗಾರರನ್ನು ಸಂಪರ್ಕ ಮಾಡಿ, ಲಂಕಾ ಪ್ರೀಮಿಯರ್‌ ಲೀಗ್ ಪಂದ್ಯಗಳನ್ನು ಫಿಕ್ಸ್‌ ಮಾಡುವ ಪ್ರಯತ್ನ ಮಾಡಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.

ಆಫ್‌ ಸ್ಪಿನ್‌ ಬೌಲಿಂಗ್‌ ಮೂಲಕ ತಮ್ಮದೇ ಛಾಪು ಮೂಡಿಸಿದ್ದ 38 ವರ್ಷದ ಮಾಜಿ ಕ್ರಿಕೆಟಿಗ ಸಚಿತ್ರ ಸೇನಾನಾಯಕೆ, 2012ರಿಂದ 2016ರವರೆಗೆ ಒಂದು ಟೆಸ್ಟ್‌, 49 ಒಡಿಐ ಮತ್ತು 24 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ.


ಫಿಕ್ಸಿಂಗ್‌ ಮಾಡಿ, ನಮಾಜ್ ಕೂಡ ಓದ್ತಾರೆ, ಮಾಜಿ ಕ್ರಿಕೆಟಿಗ ಝುಲ್ಕರ್‌ನೈನ್‌ ಹೈದರ್ - Viral Video

ಮೂರು ವಾರಗಳ ಹಿಂದೆ ಕೊಲಂಬೊ ಜಿಲ್ಲಾ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಸಚಿತ್ರ ಸೇನಾನಾಯಕೆಗೆ 3 ತಿಂಗಳು ಕಾಲ ವಿದೇಶ ಪ್ರವಾಸ ಕೈಗೊಳ್ಳದಂತೆ ನಿಷೇಧ ಜಾರಿಗೊಳಿಸಿತ್ತು. ಅಷ್ಟೇ ಅಲ್ಲದೆ ಕಳಂಕಿತ ಕ್ರಿಕೆಟಿಗನ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹಾಕುವಂತೆ ಕ್ರೀಡಾ ಸಚಿವಾಲಯಕ್ಕೆ ನಿರ್ದೇಶನ ನೀಡಿತ್ತು.

ತಮ್ಮ ವೃತ್ತಿಬದುಕಿನ ದಿನಗಳಲ್ಲಿ ಕೇರಮ್‌ ಬಾಲ್‌ ಎಸೆತಗಳೊಂದಿಗೆ ಉತ್ತಮ ಲೈನ್ ಮತ್ತು ಲೆನ್ತ್‌ನಲ್ಲಿ ಬೌಲಿಂಗ್‌ ಮಾಡುವ ಮೂಲಕ ಪರಿಣಾಮಕಾರಿ ಬೌಲರ್‌ ಎನಿಸಿದ್ದ ಸಚಿತ್ರ ಸೇನಾನಾಯಕೆ, ಟಿ20-ಐ ಕೆರಿಯರ್‌ನಲ್ಲಿ 25 ವಿಕೆಟ್‌ಗಳನ್ನು ಪಡೆದಿದ್ದಾರೆ. ಒಡಿಐ ಕ್ರಿಕೆಟ್‌ನಲ್ಲೂ 53 ವಿಕೆಟ್‌ಗಳನ್ನು ಉರುಳಿಸಿದ ಸಾಧನೆ ಮೆರೆದಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ 567 ಪ್ರಥಮದರ್ಜೆ ವಿಕೆಟ್‌ ಮತ್ತು 112 ಲಿಸ್ಟ್‌ 'ಎ' ವಿಕೆಟ್‌ಗಳು ಅವರ ಹೆಸರಲ್ಲಿವೆ.

ಮ್ಯಾಚ್‌ ಫಿಕ್ಸಿಂಗ್‌ ಕಳಂಕಿತ ಹ್ಯಾನ್ಸಿ ಕ್ರೋನಿಯೆ ಅವರ ಕಡೇ ದಿನಗಳ ರೋಚಕ ಮಾಹಿತಿ ತೆರೆದಿಟ್ಟ ಜಾಂಟಿ ರೋಡ್ಸ್‌!
ಮ್ಯಾಚ್‌ ಫಿಕ್ಸಿಂಗ್‌ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೊಲಂಬೊ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಕೋರ್ಟ್‌, 2023ರ ಆಗಸ್ಟ್‌ನಲ್ಲೇ ಸಚಿತ್ರ ಸೇನಾನಾಯಕೆ ವಿರುದ್ಧ ನಿಷೇಧ ಜಾರಿಗೊಳಿಸುವಂತೆ ಆದೇಶಿಸಿತ್ತು. ಈ ಆರೋಪಗಳ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಭ್ರಷ್ಟಾಚಾರ ತಡೆ ಘಟಕ ಹೆಚ್ಚಿನ ತನಿಖೆ ಕೈಗೊಂಡಿದೆ. ಈ ನಡುವೆ ಸಚಿತ್ರ ಸೇನಾನಾಯಕೆ ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ತಳ್ಳಿಹಾಕಿ, ತಮ್ಮನ್ನು ವಿಚಾರಣೆಗೆ ಒಪ್ಪಿಸಿಕೊಂಡಿದ್ದಾರೆ. ತಮ್ಮ ಖ್ಯಾತಿಗೆ ದಕ್ಕೆ ತರುವ ಉದ್ದೇಶದಿಂದ ಈ ಕುತಂತ್ರ ಮಾಡಲಾಗಿದೆ ಎಂದು ಸಚಿತ್ರ ಸೇನಾನಾಯಕೆ ಹೇಳಿಕೊಂಡಿದ್ದಾರೆ.

ಮ್ಯಾಚ್‌ ಫಿಕ್ಸಿಂಗ್‌ ಮಟ್ಟಹಾಕಲು ಭಾರತದಿಂದ ಸಾಧ್ಯ ಎಂದ ಐಸಿಸಿ ಭ್ರಷ್ಟಾಚಾರ ತಡೆ ಘಟಕ!

ಈ ಹಿಂದೆಯೂ ಶ್ರೀಲಂಕಾ ಆಟಗಾರರು ಸಿಕ್ಕಿಬಿದ್ದಿದ್ದಾರೆ
ಶ್ರೀಲಂಕಾ ತಂಡದ ಮಾಜಿ ವೇಗದ ಬೌಲರ್‌ಗಳಾದ ದಿಲ್ಹಾರ ಲೋಕುಹೆಟ್ಟಿಗೆ ಮತ್ತು ನುವಾನ್ ಝೊಯ್ಸ ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಈ ಮೊದಲು ಸಿಕ್ಕಿಬಿದ್ದ ಆಟಗಾರರಾಗಿದ್ದಾರೆ. ಲೋಕುಹೆಟ್ಟಿಗೆ ಚೊಚ್ಚಲ ಆವೃತ್ತಿಯ ಟಿ10 ಟೂರ್ನಿಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ನಡೆಸಿ ಸಿಕ್ಕಿಬಿದ್ದಿದ್ದರು. ಬಳಿಕ ಮತ್ತೊಬ್ಬ ವೇಗಿ ನುವಾನ್ ಝೊಯ್ಸ ಕೂಡ ಟಿ10 ಲೀಗ್‌ನಲ್ಲಿ ಫಿಕ್ಸಿಂಗ್‌ನಲ್ಲಿ ತೊಡಗಿಕೊಂಡಿದ್ದರು ಎಂಬುದು ಬೆಳಕಿಗೆ ಬಂದಿತ್ತು.
ಲೇಖಕರ ಬಗ್ಗೆ
ವಿಜೇತ್ ಕುಮಾರ್‌ ಡಿ.ಎನ್
ವಿಜಯ ಕರ್ನಾಟಕ ವೆಬ್‌ನಲ್ಲಿ ಕ್ರೀಡಾ ವಿಭಾಗದ ಪತ್ರಕರ್ತರಾಗಿ 2019ರಿಂದ ಸೇವೆಯಲ್ಲಿದ್ದಾರೆ. ಇದಕ್ಕೂ ಮುನ್ನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸಂಜೆ ವಾಣಿ ಮತ್ತು ಒನ್‌ ಇಂಡಿಯಾ ಸಂಸ್ಥೆಗಳಲ್ಲಿ ಟೆಕ್‌, ಆಟೊಮೊಬೈಲ್ಸ್‌, ರಾಜಕೀಯ, ಸಿನಿಮಾ ಮತ್ತು ವಾಣಿಜ್ಯ ಕ್ಷೇತ್ರಗಳ ಬಗ್ಗೆ ವರದಿ ಮಾಡಿದ ಅನುಭವ ಹೊಂದಿದ್ದು, ಟೆನಿಸ್‌, ಬ್ಯಾಡ್ಮಿಂಟನ್‌ ಮತ್ತು ಕ್ರಿಕೆಟ್‌ ಇವರ ಅಚ್ಚುಮೆಚ್ಚಿನ ಕ್ರೀಡೆಗಳು. ಪವರ್‌ಲಿಫ್ಟಿಂಗ್ ಇವರ ಹೊಸ ಪ್ರವೃತ್ತಿ, ವ್ಯಾಯಾಮ, ಸಾಹಿತ್ಯ ಓದು, ಪ್ರವಾಸ, ಬೈಕಿಂಗ್‌ ಹಾಗೂ ಚಾರಣ ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌