Please enable javascript.ಕ್ವಾರ್ಟರ್ ಫೈನಲ್‌ಗೆ ಸೈನಾ, ಶ್ರೀಕಾಂತ್ ಲಗ್ಗೆ - ಕ್ವಾರ್ಟರ್ ಫೈನಲ್‌ಗೆ ಸೈನಾ, ಶ್ರೀಕಾಂತ್ ಲಗ್ಗೆ - Vijay Karnataka

ಕ್ವಾರ್ಟರ್ ಫೈನಲ್‌ಗೆ ಸೈನಾ, ಶ್ರೀಕಾಂತ್ ಲಗ್ಗೆ

Vijaya Karnataka Web 23 Jan 2015, 4:36 am
Subscribe

ಹಾಲಿ ಚಾಂಪಿಯನ್ ಸೈನಾ ನೆಹ್ವಾಲ್ ಮತ್ತು ವಿಶ್ವದ ನಾಲ್ಕನೇ ರ‌್ಯಾಂಕಿನ ಆಟಗಾರ ಕಿಡಂಬಿ ಶ್ರೀಕಾಂತ್, ಇಲ್ಲಿನ ನಡೆಯುತ್ತಿರುವ ಸೈಯದ್ ಮೋದಿ ಅಂತಾರಾಷ್ಟ್ರೀಯ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ವಿಭಾಗದ ಕ್ವಾರ್ಟರ್ ಫೈನಲ್ ಹಂತಕ್ಕೇರಿದ್ದಾರೆ.

ಕ್ವಾರ್ಟರ್ ಫೈನಲ್‌ಗೆ ಸೈನಾ, ಶ್ರೀಕಾಂತ್ ಲಗ್ಗೆ
-ಸೈಯದ್ ಮೋದಿ ಅಂತಾರಾಷ್ಟ್ರೀಯ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿ-

ಲಖನೌ: ಹಾಲಿ ಚಾಂಪಿಯನ್ ಸೈನಾ ನೆಹ್ವಾಲ್ ಮತ್ತು ವಿಶ್ವದ ನಾಲ್ಕನೇ ರ‌್ಯಾಂಕಿನ ಆಟಗಾರ ಕಿಡಂಬಿ ಶ್ರೀಕಾಂತ್, ಇಲ್ಲಿನ ನಡೆಯುತ್ತಿರುವ ಸೈಯದ್ ಮೋದಿ ಅಂತಾರಾಷ್ಟ್ರೀಯ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ವಿಭಾಗದ ಕ್ವಾರ್ಟರ್ ಫೈನಲ್ ಹಂತಕ್ಕೇರಿದ್ದಾರೆ.

ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿರುವ ಸೈನಾ, ಸ್ವದೇಶಿ ಮಿತ್ರ ಆಟಗಾರ್ತಿ ರಿತುಪರ್ಣ ದಾಸ್ ಅವರನ್ನು 21-15, 21-9 ಅಂತರದಲ್ಲಿ ನೇರ ಗೇಮ್‌ಗಳಿಂದ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಬಿಡಬ್ಲ್ಯುಎಫ್ ಪ್ರಕಟಿಸಿರುವ ನೂತನ ರ‌್ಯಾಂಕಿಂಗ್ ಪಟ್ಟಿಯಲ್ಲಿ ವಿಶ್ವದ 3ನೇ ರ‌್ಯಾಂಕ್ ಸಂಪಾದಿಸಿರುವ ಒಲಿಂಪಿಕ್ ಕಂಚಿನ ಪದಕ ವಿಜೇತೆ ಸೈನಾ, ಸೆಮಿಫೈನಲ್ ಹಂತಕ್ಕೇರಲು 2011ರ ರಾಷ್ಟ್ರೀಯ ಕ್ರಿಡಾಕೂಟ ಚಾಂಪಿಯನ್ ಅರುಂಧತಿ ಪಂಟ್ವಾಣೆ ವಿರುದ್ಧ ಪೈಪೋಟಿ ನಡೆಸಲಿದ್ದಾರೆ. ಅರುಂಧತಿ2ನೇ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ನ ಬೀಟ್ರಿಸ್ ಕಾರ್ಲೇಸ್ ವಿರುದ್ಧ 22-20, 22-20 ಅಂತರದ ಆಕರ್ಷಕ ಜಯ ದಾಖಲಿಸಿ ಮುನ್ನಡೆ ಪಡೆದರು.

ಮತ್ತೊಂದು ಪಂದ್ಯದಲ್ಲಿ ಗೆಲುವಿಗಾಗಿ ಮ್ಯಾರಥಾನ್ ಹೋರಾಟ ನಡೆಸಿದಿ ಭಾರತದ ಯುವ ಪ್ರತಿಭೆ ಶ್ರೀಕಾಂತ್ 22-20, 20-22, 21-11 ಅಂತರದಲ್ಲಿ ಮಲೇಷ್ಯಾದ ಜುಲ್ಕಾರ್ನೈನ್ ಜೈನುದ್ದೀನ್ ಅವರನ್ನು ಮಣಿಸಿ ಪುರುಷರ ಸಿಂಗಲ್ಸ್ ವಿಭಾಗದ ಅಂತಿಮ ಎಂಟರ ಘಟ್ಟಕ್ಕೆ ಕಾಲಿರಿಸಿದರು.

ಸಿಂಧುಗೆ ಸುಲಭ ಜಯ
ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿರುವ ಯುವ ಆಟಗಾರ್ತಿ ಪಿ.ವಿ ಸಿಂಧು, ನಿರೀಕ್ಷೆಗೆ ತಕ್ಕ ಆಟ ಪ್ರದರ್ಶಿಸುವ ಮೂಲಕ 21-18, 21-14 ಅಂತರದಲ್ಲಿ ಸಿಂಗಪೂರ್‌ನ ಜಿಯಾಯುನ್ ಚೆನ್ ವಿರುದ್ಧ ಜಯ ದಾಖಲಿಸಿದರೆ, ಮತ್ತೊಂದು ಪಂದ್ಯದಲ್ಲಿ 8ನೇ ಶ್ರೇಯಾಂಕಿತ ಆಟಗಾರ್ತಿ ಪಿ.ಸಿ ತುಳಸಿ 21-7, 21-15 ಅಂತರದಲ್ಲಿ ರಷ್ಯಾದ ಎವ್ಗೇನಿಯಾ ಡಿಮೊವಾ ವಿರುದ್ಧ ಗೆಲುವು ತಮ್ಮದಾಗಿಸಿಕೊಂಡರು.

ಕಶ್ಯಪ್‌ಗೆ ನಿರೀಕ್ಷಿತ ಗೆಲುವು
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ನಿರೀಕ್ಷಿತ ಜಯ ದಾಖಲಿಸಿದ ಕಾಮನ್‌ವೆಲ್ತ್ ಚಾಂಪಿಯನ್ ಪರುಪಳ್ಳಿ ಕಶ್ಯಪ್, 16-21, 12-20 ಅಂತರದಲ್ಲಿ 11ನೇ ಶ್ರೇಯಾಂಕಿತ ಆಟಗಾರ ಇಸ್ರೇಲ್‌ನ ಮಿಶಾ ಜಿಲ್ಬೇರ್ಮನ್‌ಗೆ ಸೋಲುಣಿಸಿದರು. ಮತ್ತೊಂದು ಪಂದ್ಯದಲ್ಲಿ ಕಾಮನ್‌ವೆಲ್ತ್‌ನ ಕಂಚಿನ ಪದಕ ವಿಜೇತ ಆರ್.ಎಮ್.ವಿ ಗುರುಸಾಯಿದತ್ 21-16, 21-19 ಅಂತರದಲ್ಲಿ ನೇರ ಗೇಮ್‌ಗಳಿಂದ ಥಾಯ್ಲೆಂಡ್‌ನ ಥಮಾಸಿನ್ ಸಿತ್ತಿಕೊಮ್ ಅವರನ್ನು ಬಗ್ಗುಬಡಿದರು.

ಅರವಿಂದ್ ಭಟ್‌ಗೆ ಆಘಾತ
ಕರ್ನಾಟಕದ ಅನುಭವಿ ಆಟಗಾರ ಹಾಗೂ ಜರ್ಮನ್ ಓಪನ್ ಚಾಂಪಿಯನ್ ಅರವಿಂದ್ ಭಟ್ ಎರಡನೇ ಸುತ್ತಿನ ಹಣಾಹಣಿಯಲ್ಲಿ ಆಘಾತ ಅನುಭವಿಸಿದರು. ಟೂರ್ನಿಯಲ್ಲಿ 16ನೇ ಶ್ರೇಯಾಂಕ ಪಡೆದಿರುವ ಅರವಿಂದ್ 6-21, 11-21 ಅಂತರದಲ್ಲಿ ಮಲೇಷ್ಯಾದ ವೀ ಫೆಂಗ್ ಚಾಂಗ್‌ಗೆ ಶರಣಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ