Please enable javascript.ಆಡಿಯೋ ಬುಕ್ಸ್: ಇದು ಪುಸ್ತಕವನ್ನೇ ಓದಿ ಹೇಳುವ ತಂತ್ರಜ್ಞಾನ - Audio Books, Read the book, saying, technology - Vijay Karnataka

ಆಡಿಯೋ ಬುಕ್ಸ್: ಇದು ಪುಸ್ತಕವನ್ನೇ ಓದಿ ಹೇಳುವ ತಂತ್ರಜ್ಞಾನ

Vijaya Karnataka Web 28 Sep 2015, 4:07 am
Subscribe

ಇಡೀ ಪುಸ್ತಕವೊಂದನ್ನು ಸ್ಪಷ್ಟವಾಗಿ ಓದುವವರಿದ್ದರೆ ಮತ್ತು ಕೇಳಿಸಿಕೊಳ್ಳಲು ನಿಮಗೆ ಸಮಯವಿದ್ದರೆ ಸಾಕು. ನಿಮ್ಮ ಕೆಲಸ ಆದಂತೆಯೇ. ವಿಶೇಷವಾಗಿ ದೃಷ್ಟಿ ದೋಷವಿರುವವರಿಗೆ ಇದು ಅತ್ಯಂತ ಅನುಕೂಲವಾದರೂ, ಓದಲು ಸಮಯವಿಲ್ಲ ಎಂದುಕೊಳ್ಳುವವರಿಗೂ ಉಪಯುಕ್ತ.

audio books read the book saying technology
ಆಡಿಯೋ ಬುಕ್ಸ್: ಇದು ಪುಸ್ತಕವನ್ನೇ ಓದಿ ಹೇಳುವ ತಂತ್ರಜ್ಞಾನ
* ಕರಣ್ ಬಜಾಜ್ ಮತ್ತು ಹಿತೇಶ್ ರಾಜ್ ಭಗತ್
ಇಡೀ ಪುಸ್ತಕವೊಂದನ್ನು ಸ್ಪಷ್ಟವಾಗಿ ಓದುವವರಿದ್ದರೆ ಮತ್ತು ಕೇಳಿಸಿಕೊಳ್ಳಲು ನಿಮಗೆ ಸಮಯವಿದ್ದರೆ ಸಾಕು. ನಿಮ್ಮ ಕೆಲಸ ಆದಂತೆಯೇ. ವಿಶೇಷವಾಗಿ ದೃಷ್ಟಿ ದೋಷವಿರುವವರಿಗೆ ಇದು ಅತ್ಯಂತ ಅನುಕೂಲವಾದರೂ, ಓದಲು ಸಮಯವಿಲ್ಲ ಎಂದುಕೊಳ್ಳುವವರಿಗೂ ಉಪಯುಕ್ತ. -----
ಓದಲು ಸಮಯವಿಲ್ಲವೇ? ಹಾಗಿದ್ದರೆ ಆಲಿಸಿ! ಡಿಜಿಟಲ್ ಜಗತ್ತಿನಲ್ಲಿ ಸ್ಕ್ರೀನ್ ನೋಡಿ ನೋಡಿ ಕಣ್ಣುಗಳು ದಣಿದಿವೆಯೇ? ಕಣ್ಣು ಮುಚ್ಚಿಕೊಂಡಿದ್ದರೂ ಪುಸ್ತಕಗಳನ್ನು ಓದಬಹುದು, ಅಂದರೆ ಕೇಳಬಹುದು. ದೃಷ್ಟಿಮಾಂದ್ಯರಿಗೆ ಅತ್ಯುಪಯುಕ್ತ. ಉಳಿದವರಿಗೆ ಸಮಯ ಉಳಿತಾಯ ಮಾಡುವ ಸಾಧನ. ಇಂಥದ್ದೊಂದು ಪರಿಕಲ್ಪನೆ ಸಾಕಾರಗೊಂಡಿರುವುದೇ ಆಡಿಯೋ ಬುಕ್ಸ್ ಅಂದರೆ ಧ್ವನಿ ಪುಸ್ತಕ ಅಥವಾ ಕೇಳು ಪುಸ್ತಕಗಳಿಂದ. ಅಡುಗೆ ಮಾಡುತ್ತಿರುವಾಗಲೋ, ಕೈತೋಟದಲ್ಲಿ ಕೆಲಸ ಮಾಡುವಾಗಲೋ, ರೈಲು-ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗಲೋ ಅಥವಾ ವಾಕಿಂಗ್ ಮಾಡುತ್ತಿರುವಾಗಲೋ, ಆಡಿಯೋ ಬುಕ್‌ಗಳನ್ನು ನೀವು ಆಲಿಸಬಹುದು. ಆಡಿಯೋ ಬುಕ್‌ಗಳು ಇತರ ಯಾವುದೇ ಆಡಿಯೋ ಫೈಲ್‌ಗಳಂತೆಯೇ ಇರುತ್ತವೆ ಮತ್ತು ಮಲ್ಟಿಮೀಡಿಯಾ ಪ್ಲೇಯರ್ ಇರುವ ಕಂಪ್ಯೂಟರ್, ಟ್ಯಾಬ್ಲೆಟ್, ಸ್ಮಾರ್ಟ್ ಫೋನ್‌ಗಳಲ್ಲಿಯೂ ಇದನ್ನು ಕೇಳಬಹುದು. ಒಳ್ಳೆಯ ಹೆಡ್ ಫೋನ್ ಇದ್ದರೆ ಸಾಕಾಗುತ್ತದೆ.

ಉಚಿತ ಆಡಿಯೋ ಬುಕ್‌ಗಳು ಆಂಡ್ರಾಯ್ಡ್ ಅಥವಾ ಆ್ಯಪಲ್ ಸಾಧನಗಳಲ್ಲಿ LibriVox ಎಂಬ ಆ್ಯಪ್ ಡೌನ್‌ಲೋಡ್ ಮಾಡಿಕೊಂಡರೆ, 15 ಸಾವಿರಕ್ಕೂ ಹೆಚ್ಚು ಆಡಿಯೋ ಪುಸ್ತಕಗಳನ್ನು ನಮ್ಮ ಸಾಧನದಲ್ಲೇ ಕೇಳಬಹುದು. ಇವುಗಳನ್ನು ಜಗತ್ತಿನಾದ್ಯಂತ ಇರುವ ಸ್ವಯಂ ಸೇವಕರು ಓದಿದ್ದಾರೆ. ನಿಮಗೆ ಓದುವ ಇಚ್ಛೆಯಿದ್ದರೆ ನೀವೂ ಓದುವ ಸೇವೆ ನೀಡಬಹುದು.

ಅದೇ ರೀತಿ ಪ್ರಾಜೆಕ್ಟ್ ಗುಟೆನ್‌ಬರ್ಗ್ (gutenberg.org) ನಲ್ಲಿ 2 ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ಇದು ಉಚಿತ ಪುಸ್ತಕಗಳ ಹಳೆಯ ಭಂಡಾರಗಳಲ್ಲೊಂದು. ಈಗಾಗಲೇ 50 ಸಾವಿರಕ್ಕೂ ಹೆಚ್ಚು ಇ-ಪುಸ್ತಕಗಳು ಇಲ್ಲಿವೆ. ಅವುಗಳನ್ನು ನಿಮ್ಮ ಸಾಧನಕ್ಕೆ ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ ನಿಮ್ಮ ಕಂಪ್ಯೂಟರ್ ಮೂಲಕ ಆನ್‌ಲೈನ್‌ನಲ್ಲಿಯೂ ಓದಬಹುದು. LibriVox ಕೂಡ ಪ್ರಾಜೆಕ್ಟ್ ಗುಟೆನ್‌ಬರ್ಗ್‌ನ ಸಹ ಸಂಸ್ಥೆಯೇ. ಪ್ರಾಜೆಕ್ಟ್ ಗುಟೆನ್‌ಬರ್ಗ್‌ನಲ್ಲಿ ಆಡಿಯೋ ಪುಸ್ತಕಗಳನ್ನು ಎರಡು ವಿಭಾಗಗಳಲ್ಲಿ - ಮಾನವ ಮಾತಿನ ಭಾಗ ಮತ್ತು ಯಂತ್ರ ಓದುವ ಭಾಗ ಎಂದು ವಿಂಗಡಿಸಲಾಗಿದೆ.

OpenCulture ಎಂಬುದು ಮತ್ತೊಂದು ಆಡಿಯೋ ಪುಸ್ತಕಗಳ ಮೂಲ. ಇಲ್ಲಿ 700ರಷ್ಟು ಕೇಳುಪುಸ್ತಕಗಳ ಸಂಗ್ರಹವಿದ್ದು, ಡೌನ್‌ಲೋಡ್ ಮಾಡಿಕೊಳ್ಳಬಹುದು. openculture.com/freeaudiobooks ಎಂಬಲ್ಲಿ ಹೋದರಾಯಿತು.

Lit2Go (etc.usf.edu/lit2go) ಎಂಬುದು ದಕ್ಷಿಣ ಫ್ಲೋರಿಡಾ ವಿಶ್ವವಿದ್ಯಾಲಯ ನೀಡುತ್ತಿರುವ ಉಚಿತ ಆಡಿಯೋ ಪುಸ್ತಕಗಳ ಸಂಗ್ರಹಾಗಾರ. ಎಂಪಿ3 ರೂಪದಲ್ಲಿರುವುದರಿಂದ ಯಾವುದೇ ಸಾಧನದಲ್ಲಿ ಇದನ್ನು ಕೇಳಬಹುದು. ನಿಮಗೆ ಬೇಕಿದ್ದರೆ ಪುಸ್ತಕದ ಪಿಡಿಎಫ್ ಪ್ರತಿಗಳನ್ನು ಕೂಡ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಇನ್ನು ಕ್ಲಾಸಿಕ್ಸ್ ಪುಸ್ತಕಗಳು ಬೇಕೆಂದರೆ, thoughtaudio.com ಹೋದರಾಯಿತು. podiobooks.com ಹೋದರೆ, ಅಲ್ಲಿ ಕೂಡ ವೆಬ್‌ಸೈಟಲ್ಲೇ ಕೇಳಬಹುದು ಅಥವಾ ಎಂಪಿ3 ರೂಪದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಕಿಡ್ಡೀ ರೆಕಾರ್ಡ್ಸ್ (Kiddierecords.com) ವಿಶೇಷ ಅಭಿಯಾನ ನಡೆಸುತ್ತಿದೆ. 30-40ರ ದಶದ ಅವಧಿಯ ಮಕ್ಕಳ ಪುಸ್ತಕಗಳ ಭಂಡಾರ ಇಲ್ಲಿದೆ. ಇಷ್ಟಲ್ಲದೆ, ಸ್ಟೋರಿ ನೋರಿ (storynory.com) ಎಂಬಲ್ಲಿಗೆ ಹೋದರೆ, ಮಕ್ಕಳಿಗಾಗಿ ಆಡಿಯೋ ಕಥೆಗಳು ಲಭ್ಯ. ಎಲ್ಲ ಕಥೆಗಳನ್ನು ಪಠ್ಯ, ಆಡಿಯೋ ಮತ್ತು ಚಿತ್ರಗಳ ಸಹಿತವಾಗಿ ಸ್ಟೋರಿನೋರಿಯೇ ರಚಿಸಿದೆ ಮತ್ತು ಕೃತಿಸ್ವಾಮ್ಯ ಹೊಂದಿದೆ.

ಇತಿಹಾಸ ಮತ್ತು ತತ್ವಶಾಸ್ತ್ರಗಳು ನಿಮಗೆ ಆಸಕ್ತಿ ಎಂದಾದರೆ ejunto.org ಎಂಬಲ್ಲಿಗೆ ಹೋಗಿ. ಶಾಸ್ತ್ರೀಯ ಸಾಹಿತ್ಯ ಪ್ರಿಯರಾದರೆ, loyalbooks.com ಎಂಬಲ್ಲಿ ಹೋದರೆ, ಯಾವುದೇ ಖಾತೆ ಇಲ್ಲದೆಯೂ ನೀವು ಆಡಿಯೋ ಪುಸ್ತಕಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ